Wednesday, February 11, 2026

ಸತ್ಯ | ನ್ಯಾಯ |ಧರ್ಮ

ಸ್ಯಾಂಡಲ್‌ ಸೋಪ್‌ ಕಂಪನಿಗೆ ನಾನೆ ರಾಯಭಾರಿಯಾಗುತ್ತೇನೆ – ವಾಟಾಳ್ ನಾಗರಾಜ್‌

ಬೆಂಗಳೂರು : ರಾಜ್ಯದ ಸುಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್ (Mysore Sandal Soap) ಬ್ರಾಂಡ್ ಅಂಬಾಸಿಡರ್ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಪರಭಾಷೆಯ ನಟಿ ತಮನ್ನಾಗೆ (Tamannah) ರಾಯಭಾರಿ ಪಟ್ಟ ನೀಡಿ ಇಕ್ಕಟ್ಟಿಗೆ ಸಿಲುಕಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ತಮ್ಮದೇ ಸ್ಟೈಲ್​ನಲ್ಲಿ ಟಾಂಗ್ ಕೊಟ್ಟಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾನೂ ಬೇಡ, ಸುಮನ್ನಾನು ಬೇಡ ನಾನೇ ರಾಯಭಾರಿ ಆಗ್ತೀನಿ ಅಂತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ಸ್ಯಾಂಡಲ್ ಸೋಪ್‌ಗೆ 6.20 ಕೋಟಿ ರೂ. ನೀಡಿ ನಟಿ ತಮನ್ನಾ ಭಾಟಿಯಾರನ್ನ ರಾಯಭಾರಿಯಾಗಿ ನೇಮಕ ಮಾಡಿದ್ದಕಕೆ ರಾಮನಗರದಲ್ಲಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ತಮನ್ನಾಗೆ 6.20 ಕೋಟಿ ರೂಪಾಯಿ ಕೊಟ್ಟಿರೋದ್ರ ಹಿಂದೆ ದೊಡ್ಡ ರಾಜಕೀಯ ಇದೆ. ಸಿಕ್ಕ ಸಿಕ್ಕವರಿಗೆ ಕೋಟಿ ಕೋಟಿ ಕೊಟ್ರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತೆ. ಸ್ಯಾಂಡಲ್ ಸೋಪ್ ಕನ್ನಡಿಗರ ಸೋಪ್. ಎಲ್ಲರೂ ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ ಅಂತ ವಾಟಾಳ್‌ ಹೇಳಿದ್ದಾರೆ.

ತಮಿಳು, ತೆಲುಗಿನವರು ಯಾರೂ ಬೇಡ. ಶ್ರೀಗಂಧ, ಮೈಸೂರು ಇವೆರಡೂ ಸಹ ಪ್ರಪಂಚದಲ್ಲೇ ಬ್ರಾಂಡ್. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು, ಸರ್ಕಾರಿ ಅಧಿಕಾರಿಗಳು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಲಿ. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದ್ರೆ ಅದೇ ದೊಡ್ಡ ರಾಯಭಾರಿ ಎಂದಿದ್ದಾರೆ.

ತಮನ್ನಾ ಭಾಟಿಯಾ ಏಕೆ? ಕನ್ನಡಿಗರು ಕಾಣಿಸಿಲ್ವಾ?
ಎರಡು ವರ್ಷ ರಾಯಭಾರಿಯಾಗಿ ಆಯ್ಕೆ ಮಾಡಿದ ರಾಜ್ಯ ಸರ್ಕಾರ ನಟಿಗೆ 6.20 ಕೋಟಿ ರೂಪಾಯಿ ಹಣ ನೀಡಲಿದೆ. ರಾಜ್ಯದ ಸೋಪಿಗೆ ಅನ್ಯ ರಾಜ್ಯದ ನಟಿ ಯಾಕೆ ಎಂದು ಕನ್ನಡಿಗರು ಕೆರಳಿ ಕೆಂಡವಾದ್ರೆ.. ವಿಪಕ್ಷಗಳು ಕೈಗೆ ಬ್ರಹ್ಮಾಸ್ತ್ರವೇ ಸಿಕ್ಕಿದೆ..

ಕನ್ನಡಿಗರಿಂದ ಬಾಯ್ಕಾಟ್ ಅಸ್ತ್ರ ಪ್ರಯೋಗ?
ತಮನ್ನಾ ಆಯ್ಕೆಗೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಕಲಾವಿದರನ್ನ ಕಡೆಗಣಿಸಿ ಪರಭಾಷಿಕರಿಗೇಕೆ ಮಣೆ ಎಂಬ ಟೀಕೆ ವ್ಯಕ್ತವಾಗಿದೆ. ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಕನ್ನಡದವರಿಂದಲೇ ಪ್ರಚಾರ ಮಾಡಬಹುದಿತ್ತು. ಮೈಸೂರು ಸ್ಯಾಂಡಲ್​ಗೆ ತಮನ್ನಾ ಬೇಕಾಗಿರಲಿಲ್ಲ ಎಂಬ ಸಮರ ಸಾರಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page