Home ರಾಜ್ಯ ಬೆಳಗಾವಿ ಜೆಸಿಬಿ ಪಕ್ಷದಿಂದ ಸ್ಪರ್ಧಿಸಿ, 143 ಸ್ಥಾನ ಗೆಲ್ತೀನಿ – ನಾನೇ ಮುಂದಿನ ಮುಖ್ಯಮಂತ್ರಿ: ಯತ್ನಾಳ್!

ಜೆಸಿಬಿ ಪಕ್ಷದಿಂದ ಸ್ಪರ್ಧಿಸಿ, 143 ಸ್ಥಾನ ಗೆಲ್ತೀನಿ – ನಾನೇ ಮುಂದಿನ ಮುಖ್ಯಮಂತ್ರಿ: ಯತ್ನಾಳ್!

0

ಬೆಳಗಾವಿ: ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಹತ್ವದ ಘೋಷಣೆ ಮಾಡಿದ್ದಾರೆ.

2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Assembly election) ಜೆಸಿಬಿ (JCB) ಪಾರ್ಟಿ ಮೂಲಕ ಚುನಾವಣೆಗೆ ಸ್ಪರ್ಧಿಸಿ, 143 ಸ್ಥಾನಗಳ ಬಹುಮತದೊಂದಿಗೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಅಥಣಿಯ ಭೋಜರಾಜ ಕ್ರೀಡಾಂಗಣದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “2028ಕ್ಕೆ ಖಂಡಿತ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ನಾನೇ ಸಿಎಂ ಆಗುತ್ತೇನೆ” ಎಂದು ಹೇಳಿದರು. ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕಾದರೆ, ಛತ್ರಪತಿ ಶಿವಾಜಿ ಮಹಾರಾಜ ಮತ್ತು ರಾಣಾ ಪ್ರತಾಪ್ ಸಿಂಹರಂತಹ ಆಡಳಿತ ಅನಿವಾರ್ಯವಾಗಿದೆ ಎಂದು ತಿಳಿಸಿದರು.

“ಆಡಳಿತ ಪಕ್ಷವೇ ಇರಲಿ, ವಿರೋಧ ಪಕ್ಷವೇ ಇರಲಿ, ನಾನು ಸತ್ಯ ಹೇಳುತ್ತೇನೆ. ಹೀಗಾಗಿ ಬಿಜೆಪಿಯವರು ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಇದನ್ನು ಸವಾಲಾಗಿ ಸ್ವೀಕಾರ ಮಾಡಿದ್ದು, 2028ಕ್ಕೆ ವಿಧಾನಸೌಧದ ಮುಂದೆ ಜೆಸಿಬಿಗಳನ್ನು ನಿಲ್ಲಿಸಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತೇನೆ” ಎಂದಿದ್ದಾರೆ.

“ನಾನು ಯಾವತ್ತೂ ಭ್ರಷ್ಟಾಚಾರದ ವಿರೋಧಿ. ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ. ಕೆಲವರಿಗೆ ಸತ್ಯ ಹೇಳಿದರೆ ಸಹಿಸಿಕೊಳ್ಳೋಕೆ ಆಗಲ್ಲ. ಹೈ ಕಮಾಂಡ್ ನಾಯಕರು ಎಲ್ಲವನ್ನೂ ಗಮನಿಸಬೇಕು” ಎಂದು ಯತ್ನಾಳ್ ತಿಳಿಸಿದರು.

ಇನ್ನು, “ಶಿವಾಜಿ ಪುತ್ಥಳಿ ಅನಾವರಣಗೊಳಿಸಿದರೆ ಸಾಲದು, ಶಿವಾಜಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ರಾಣಾ ಪ್ರತಾಪ್ ಅವರ ಆದರ್ಶಗಳನ್ನು ಪಾಲಿಸಬೇಕು” ಎಂದು ತಿಳಿಸಿದರು.

You cannot copy content of this page

Exit mobile version