Monday, March 17, 2025

ಸತ್ಯ | ನ್ಯಾಯ |ಧರ್ಮ

ಜಾತಿ ಬಗ್ಗೆ ಮಾತನಾಡುವುದನ್ನು ಸಹಿಸುವುದಿಲ್ಲ: ಗಡ್ಕರಿ

ನಾಗ್ಪುರ: ಜಾತಿ ರಾಜಕೀಯವನ್ನು ಬಲವಾಗಿ ವಿರೋಧಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಒಬ್ಬ ವ್ಯಕ್ತಿಯ ಮೌಲ್ಯವು ಅವನ ಅರ್ಹತೆಗಳಿಂದ ನಿರ್ಧರಿಸಲ್ಪಡುತ್ತದೆ, ಆದರೆ ಅವನ ಜಾತಿ, ಧರ್ಮ, ಭಾಷೆ ಅಥವಾ ಲಿಂಗದಿಂದಲ್ಲ ಎಂದು ಅವರು ಹೇಳಿದರು.

ಅವರು ಶನಿವಾರ ನಾಗ್ಪುರದಲ್ಲಿ ನಡೆದ ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಒಂದು ವೇಳೆ ಮತ ಸಿಗುವುದಾದರೂ ಜಾತಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು 2024 ರಲ್ಲಿ ನಡೆದ ಸಭೆಯನ್ನು ನೆನಪಿಸಿಕೊಂಡರು, ಅಲ್ಲಿ ಜಾತಿಯ ಬಗ್ಗೆ ಮಾತನಾಡಿದವರನ್ನು ಓಡಿಸುವುದಾಗಿ ಹೇಳಿದ್ದರು.

ತಾನು ರಾಜಕೀಯದಲ್ಲಿರುವುದರಿಂದಾಗಿ ಜಾತಿ ಮುಖಂಡರು ತನ್ನನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು. ಆದರೆ, ನಾನು ನನ್ನದೇ ಆದ ದಾರಿಯಲ್ಲಿ ನಡೆಯುತ್ತೇನೆ. ಓಟು ಸಿಗುವುದು ಸಿಗದಿರುವುದು ಎರಡನೇ ವಿಷಯ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page