2047ರವರೆಗೆ ದೇವರು ನನ್ನನ್ನು ಅವನ ಬಳಿಗೆ ಕರೆಯುವುದಿಲ್ಲ: ಮೋದಿ

ಹೊಸದೆಹಲಿ : “ವಿಕಸಿತ ಭಾರತದ ಗುರಿಯನ್ನು ಸಾಧಿಸಲು ನಾನು 2047ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ಆದೇಶಿಸಿದ್ದಾನೆ ಎನ್ನುವುದು ನನ್ನ ನಂಬಿಕೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಸರ್ವಶಕ್ತ ದೇವರು ನನ್ನನ್ನು ವಿಶೇಷ ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

2047ರ ವೇಳೆಗೆ ವಿಕಸಿತ ಭಾರತದ ಗುರಿಯನ್ನ ಸಾಧಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. ದೇವರು ನನಗೆ ಮಾರ್ಗವನ್ನ ತೋರಿಸುತ್ತಿದ್ದಾನೆ, ದೇವರು ನನಗೆ ಶಕ್ತಿಯನ್ನ ನೀಡುತ್ತಿದ್ದಾನೆ. ನನಗೆ ಸಂಪೂರ್ಣ ವಿಶ್ವಾಸವಿದೆ. 2047ರ ವೇಳೆಗೆ ನಾನು ಆ ಗುರಿಯನ್ನು ಸಾಧಿಸುತ್ತೇನೆ ಮತ್ತು ಆ ಗುರಿಯನ್ನ ಸಾಧಿಸುವವರೆಗೂ ದೇವರು ನನ್ನನ್ನು ಮರಳಿ ಕರೆಯುವುದಿಲ್ಲ” ಎಂದು ಮೋದಿ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚಾರ್‌ ಸೋ ಪಾರ್‌ ಎನ್ನುವ ಘೋಷಣೆ ನಮ್ಮದಲ್ಲ ಅದು ಜನರೇ ನೀಡಿದ ಘೋಷಣೆ. ನಾವು ಈಗಾಗಲೇ ನಾನೂರು ಸೀಟುಗಳ ಗುರಿಯನ್ನು ದಾಟಿಯಾಗಿದೆ ಎಂದೂ ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು