Monday, June 24, 2024

ಸತ್ಯ | ನ್ಯಾಯ |ಧರ್ಮ

ಅಶೋಕ ವಿಶ್ವವಿದ್ಯಾಲಯದಲ್ಲಿ ಇಂಟೆಲಿಜೆನ್ಸ್ ಬ್ಯೂರೋ: ಬೆಚ್ಚಿಬಿದ್ದ ಶಿಕ್ಷಣ ತಜ್ಞರು, ಸಂಸದರು

ಹೊಸದಿಲ್ಲಿ: ಹರಿಯಾಣದ ಅಶೋಕ ವಿಶ್ವವಿದ್ಯಾಲಯಕ್ಕೆ ಗುಪ್ತಚರ ಇಲಾಖೆ (ಐಬಿ) ಅಧಿಕಾರಿಗಳು ಭೇಟಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ವಾರ ಐಬಿ ತಂಡದ ಭೇಟಿಯ ಸುದ್ದಿಗೆ ಶಿಕ್ಷಣ ತಜ್ಞರು ಮತ್ತು ವಿರೋಧ ಪಕ್ಷದ ಸಂಸದರು ಆಘಾತ ವ್ಯಕ್ತಪಡಿಸಿದ್ದಾರೆ. “ಪ್ರಸ್ತುತ ಪುಣೆಯಲ್ಲಿರುವ ಪ್ರಬಂಧದ ಲೇಖಕ ಸಬ್ಯಸಾಚಿ ದಾಸ್ ಅವರನ್ನು ಭೇಟಿ ಮಾಡಲು ಐಬಿ ಅಧಿಕಾರಿಗಳು ಸೋಮವಾರ ಪತ್ರಿಕೆಯ ಕಟಿಂಗ್‌ಗಳೊಂದಿಗೆ ಖಾಸಗಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಮಂಗಳವಾರ ಮತ್ತೆ ಕ್ಯಾಂಪಸ್‌ಗೆ ಬರುವುದಾಗಿ ಹೇಳಿ ಹೊರಟು ಹೋದರು. ಪ್ರಾಸಂಗಿಕವಾಗಿ, ಅಶೋಕ ವಿಶ್ವವಿದ್ಯಾನಿಲಯದ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ ಪರವಾನಗಿಯನ್ನು ಸೆಪ್ಟೆಂಬರ್ 2023ರಲ್ಲಿ ನವೀಕರಣಕ್ಕೆ ಬರಲಿದೆ” ಎಂದು ಅವರು ಹೇಳಿದರು.

ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ (ಐಎಎನ್‌ಎಸ್) ವರದಿಯ ಪ್ರಕಾರ, ಐಬಿ ತಂಡ ಸೋಮವಾರ ಮತ್ತು ಮಂಗಳವಾರ ಅಶೋಕ ವಿಶ್ವವಿದ್ಯಾಲಯದ ಬಾಗಿಲು ತಟ್ಟಿದೆ. ತಂಡ ಭೇಟಿ ನೀಡಿರುವುದನ್ನು ಕ್ಯಾಂಪಸ್‌ನ ಮೂಲಗಳು ಐಎಎನ್‌ಎಸ್‌ಗೆ ಖಚಿತಪಡಿಸಿವೆ. ಆದರೆ, ದಾಸ್ ರಜೆಯಲ್ಲಿದ್ದಾರೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಐಬಿ ಅಧಿಕಾರಿಗಳು ಅರ್ಥಶಾಸ್ತ್ರ ವಿಭಾಗದ ಇತರ ಅಧ್ಯಾಪಕರನ್ನು ಭೇಟಿ ಮಾಡಲು ವಿನಂತಿಸಿದ್ದಾರೆ” ಎಂದು ಅದು ವಿವರಿಸಿದೆ. ಆದರೆ, ಭದ್ರತಾ ಸಂಸ್ಥೆಗಳು ಈ ಸುದ್ದಿಯನ್ನು ಖಚಿತಪಡಿಸಿಲ್ಲ. ನಿರಾಕರಿಸಿಲ್ಲ. ಅಶೋಕ ಉಪಕುಲಪತಿ ಸೋಮಕ್ ರಾರುಚೌಧರಿ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಶ್ವಿನಿ ದೇಶಪಾಂಡೆ ಕೂಡ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಗಮನಾರ್ಹ.

Related Articles

ಇತ್ತೀಚಿನ ಸುದ್ದಿಗಳು