Thursday, June 13, 2024

ಸತ್ಯ | ನ್ಯಾಯ |ಧರ್ಮ

ಟಿ-20 ವಿಶ್ವಕಪ್ 2022ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ ICC

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ್ದು, ಪಂದ್ಯಗಳಲ್ಲಿ ರೋಚಕ ಕ್ಷಣ, ಸೋಲು, ಗೆಲುವು ಮತ್ತು ದಾಖಲೆ ಸೃಷ್ಟಿಸಿದನ್ನು ಸಹ ಪಟ್ಟಿಯಲ್ಲಿ ಕಾಣಬಹುದಾಗಿದೆ.

ಪಟ್ಟಿಯಲ್ಲಿರುವ ಆ ಎಂಟು ಪಂದ್ಯಗಳಲ್ಲಿ, ಪ್ರಮುಖವಾಗಿ ಬಲಿಷ್ಟ ಕ್ರಿಕೆಟ್‌ ತಂಡ ಎಂದೆನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್‌ ಜಯಗಳಿಸಿದ್ದು. ಈ ಪಂದ್ಯದಲ್ಲಿ ನೆದರ್ಲೆಂಡ್‌ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಈ ಗೆಲುವು ನೆದರ್ಲೆಂಡ್‌ ತಂಡದಿಂದ ದಾಖಲೆ ಸೃಷ್ಟಿಸಲು ಕಾರಣವಾಯಿತು.

ಇನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಕುತೂಹಲ, ಅದರಲ್ಲೂ ಪಾಕಿಸ್ತಾನ ವಿರುದ್ಧದ ಕೊನೆಯ ಎಸೆತದಲ್ಲಿ ಭಾರತದ ಗೆಲುವು, ಕ್ರಿಕೆಟ್‌ ನೋಡುಗರಿಗೆ ಕುತೂಹಲದ ಮೇಲೆ ಕುತೂಹಲ ಸೃಷ್ಟಿಸಿತ್ತು. ಕೊನೆಯ ಎರೆಡು ಎಸೆತಗಳಲ್ಲಿ ಭಾರತ ತಂಡಕ್ಕೆ ಎರೆಡು ರನ್‌ ಬೇಕಾಗಿದ್ದಾಗ, ದಿನೇಶ್‌ ಕಾರ್ತಿಕ್‌ ಬೌಂಡರಿ ಹೊಡೆಯಲು ಹೋಗಿ ಸ್ಟಂಪ್‌ ಔಟ್‌ ಆಗಿದ್ದರು. ನಂತರ ಸ್ಕ್ರೀಜ್‌ಗೆ ಬಂದ ರವಿಚಂದ್ರನ್‌ ಅಶ್ವಿನ್‌ ಮೇಲೆ ಪಂದ್ಯದ ಗೆಲುವು ನಿರ್ಧಾರವಾಗಿತ್ತು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಪಾಕಿಸ್ತಾನಿ ಬೌಲರ್‌ ಮೊಹಮದ್‌ ನವಾಜ್‌ ಒಂದು ವೈಡ್‌ ಎಸೆದರು. ಆಗ ಪಂದ್ಯ ಇನ್ನು ಕುತೂಹಲಕ್ಕೆ ಕಾರಣವಾಯಿತು. ನಂತರದ ಎಸೆತ ಏನಾಗುತ್ತದೆ? ಭಾರತ ಗೆಲ್ಲುತ್ತಾ, ಅಥವಾ ಪಂದ್ಯ ಸಮಬಲವಾಗುತ್ತಾ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡುವಂತೆ ಮಾಡಿತ್ತು. ಕೊನೆಗೂ ಅಶ್ವಿನ್‌ ಕೊನೆಯ ಎಸೆತದಲ್ಲಿ ಒಂದು ರನ್‌ ಗಳಿಸುವ ಮೂಲಕ ಭಾರತ ತಂಡ ಗೆಲುವು ಸಾಧಿಸಿತು. ನಂತರ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಕೂಡ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಭಾರತ ಪಾಕಿಸ್ತಾನ ಪಂದ್ಯದಂತೆ, ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಯ ಒಂದು ರನ್ ಗೆಲುವು ಕೂಡ  ಎಲ್ಲರಲ್ಲೂ ಕುತೂಹಲ ಮೂಡಿದ್ದು, ಜಿಂಬಾಬ್ವೆ ತಂಡ ಗೆಲುವು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಹಿನ್ನೆಯಲ್ಲಿ ಈ ಪಂದ್ಯವು ಕೂಡ ಪಟ್ಟಿಯಲ್ಲಿ ಸೇರಿದೆ.

ICC ಹೊರಡಿಸಿರುವ ಪಟ್ಟಿಯಲ್ಲಿರುವ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳು

ಮೊದಲನೆಯದಾಗಿ ನೆದರ್ಲಾಂಡ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 13 ರನ್‌ಗಳ ಗೆಲುವು ಸಾದಿಸಿದ್ದು, ಎರಡನೆಯದಾಗಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿದ್ದು. ಪಟ್ಟಿಯ ಮೂರನೆ ಸ್ಥಾನದಲ್ಲಿ ಐರ್ಲ್ಯಾಂಡ್‌ ತಂಡವು ಇಂಗ್ಲೇಂಡ್‌ ತಂಡದ ವಿರುದ್ಧ ಡಿಎಲ್‌ಎಸ್‌ ನಿಯಮದ ಪ್ರಕಾರ 5ರನ್‌ ಗಳಿಂದ ಗೆಲುವು ಸಾದಿಸಿದ್ದು. ಇನ್ನು ನಾಲ್ಕನೆ ಸ್ಥಾನದಲ್ಲಿ ಜಿಂಬಾಬ್ವೆ ತಂಡವು ಪಾಕಿಸ್ತಾನದ ವಿರುದ್ಧ ಒಂದು ರನ್‌ಗಳ ಜಯ. 5ನೇಯದಾಗಿ ಬಾಂಗ್ಲಾದೇಶ, ಜಿಂಬಾಬ್ವೆ ವಿರುದ್ಧ 3 ರನ್‌ಗಳಿಂದ ಜಯಗಳಿಸಿದ್ದು. ಇನ್ನೂ 6 ನೇ ಸ್ಥಾನದಲ್ಲಿ ಆಷ್ಟ್ರೇಲಿಯಾ ತಂಡ ಅಫ್ಘಾನಿಸ್ಥಾನದ ವಿರುದ್ಧ ರನ್‌ಗಳಿಂದ ಜಯ. ಏಳನೆಯದಾಗಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ಪಡೆದುಕೊಂಡಿದ್ದು. ಕೊನೆಯದಾಗಿ ನ್ಯೂಜಿಲ್ಯಾಂಡ್‌ ತಂಡ ಆಷ್ಟ್ರೇಲಿಯಾ ವಿರುದ್ಧ 89 ರನ್‌ಗಳ ಜಯ.

ICC ಹೊರಡಿಸಿರುವ ಪಟ್ಟಿಯಲ್ಲಿರು ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳ ಪಟ್ಟಿ

Related Articles

ಇತ್ತೀಚಿನ ಸುದ್ದಿಗಳು