Wednesday, June 26, 2024

ಸತ್ಯ | ನ್ಯಾಯ |ಧರ್ಮ

ಐಸಿಸಿ T20 ವರ್ಲ್ಡ್‌ಕಪ್‌ ಸೆಮಿಫೈನಲ್‌: ಫೈನಲ್‌ ಪ್ರವೇಶಿದ ಪಾಕ್‌

ಸಿಡ್ನಿ: ಐಸಿಸಿ ವರ್ಲ್ಡ್‌ ಕಪ್‌ T20 ಟೂರ್ನಿಯ ಇಂದಿನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಿರಾಯಾಸವಾಗಿ ಜಯ ಸಾಧಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ನ್ಯೂಜಿಲೆಂಡ್‌ ಪಾಕಿಸ್ತಾನದ ಬೌಲಿಂಗ್‌ ದಾಳಿಗೆ ಬ್ಯಾಟ್ ಬೀಸಲು ಪರದಾಡುವಂತಾಯಿತು. ಭರವಸೆಯಿಂದ ಬ್ಯಾಟ್‌ ಹಿಡಿದು ಅಂಗಳಕ್ಕೆ ಇಳಿದ ನ್ಯೂಜಿಲೆಂಡ್ ಮೊದಲ ಓವರ್‌ನಲ್ಲಿಯೇ ಫಿನ್‌ ಅಲೆನ್‌ ವಿಕೆಟ್‌ ಕಳೆದುಕೊಂಡಿದ್ದು ಇಡೀ ತಂಡಕ್ಕೆ ಹಿನ್ನಡೆ ಎನ್ನಬಹುದು. ನ್ಯೂಜಿಲೆಂಡ್‌ ತಂಡದ ಆಟಗಾರರು ವಿಕೆಟ್‌ ಉಳಿಸಿಕೊಂಡರಾದರೂ ರನ್‌ಗಳಿಸುವುದರಲ್ಲಿ ಸಂಪೂರ್ಣ ವಿಫಲರಾಗುತ್ತಾ ಸಾಗಿದರು.

ಪಾಕಿಸ್ತಾನದ ಬೌಲರ್‌ಗಳು ಹೆಚ್ಚಿನ ವಿಕೆಟ್‌ ಪಡೆಯದಿದ್ದರೂ ಇತರೆ ರನ್‌ಗಳನ್ನು ನೀಡದೆ ಉತ್ತಮ ಬೌಲಿಂಗ್‌ ಕಾಯ್ದುಕೊಂಡದ್ದು ನ್ಯೂಜಿಲೆಂಡ್‌ ತಂಡಕ್ಕೆ ರನ್‌ ಸೇರಿಸಲು ಕಷ್ಟಕರವಾಯಿತು ಮತ್ತು ಇಡೀ ಪಾಕಿಸ್ತಾನದ ತಂಡ ಫೀಲ್ಡಿಂಗ್‌ ಕಾಯುವಲ್ಲಿ ಎಲ್ಲಿಯೂ ಎಡವದೆ ಜವಾಬ್ದಾರಿಯುತ ಆಟವಾಡಿದ್ದು ಗೆಲುವಿಗೆ ಮತ್ತೊಂದು ಕಾರಣ.

ನೂಜಿಲೆಂಡ್‌ ತಂಡದ ಕೇನ್‌ ವಿಲಿಮ್ಸನ್‌ (46) ಮತ್ತು ಡ್ಯಾರಿಲ್‌ ಮಿಚೆಲ್‌ (53) ಅವರ ಸಮಯೋಚಿತ ಅಟದಿಂದಾಗಿ ನ್ಯೂಜಿಲೆಂಡ್‌ ತಂಡ 152 ರನ್‌ ಗಳಿಸಲು ಸಹಕಾರಿಯಾಯಿತು.

ಮೊದಲ ಇನ್ನಿಂಗ್ಸ್‌ ಅಂತ್ಯಕ್ಕೆ ನ್ಯೂಜಿಲೆಂಡ್‌ ತಂಡ 152 ರನ್‌ ಗಳಿಸುವಲ್ಲಷ್ಟೇ ಶಕ್ತವಾಯಿತು.

ಎರಡನೇ ಇನ್ನಿಂಗ್ಸ್‌ ಆರಂಬಿಸಿದ ಪಾಕಿಸ್ತಾನ ಮೊದಲ ಪವರ್‌ ಪ್ಲೇ ಯಲ್ಲಿ ಅತ್ಯೂತ್ತಮ ಆಟ ಪ್ರದರ್ಶಿತು. ಬ್ಯಾಟ್‌ ಹಿಡಿದು ಅಂಗಳಕ್ಕೆ ಇಳಿದ ಮಹಮ್ಮದ್‌ ರಿಜ್ವಾನ್‌ ಮತ್ತು ಕ್ಯಾಪ್ಟನ್‌ ಬಾಬರ್‌ ಅಜಾಮ್‌ ಭರ್ಜರಿಯಾಗಿಯೇ ಇನ್ನಿಂಗ್ಸ್‌ ಆರಂಭಿಸಿದರು. ಇವರಿಬ್ಬರ ಜೊತೆಯಾಟಕ್ಕೆ 105 ರನ್‌ಗಳ ಬೃಹತ್‌ ಮೊತ್ತವನ್ನ ಸೇರಿಸಿ ಪಂದ್ಯವನ್ನ ತಮ್ಮೆಡೆಗೆ ಸೆಳೆದುಬಿಟ್ಟರು. ಇಬ್ಬರೂ ಆಟಗಾರರ ಆಟವಂತು ಸ್ಟೇಡಿಯಂ ಒಳಗಿನ ಪ್ರೇಕ್ಷಕರನ್ನು ಅಕ್ಷರಶಃ ರಂಜಿಸುವಂತೆ ಮಾಡಿತು.

ಬಾಬರ್‌ ಅಜಾಮ್‌(53) ಮತ್ತೇ ತಮ್ಮ ಫಾರ್ಮ್‌ಗೆ ಮರಳಿದ್ದು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳಿಗೆ ಸಂಭ್ರಮ ಎನ್ನಬಹುದು.

ಅಚ್ಚರಿಯ ರೀತಿಯಲ್ಲಿ ಸೆಮಿಫೈನಲ್ ಪ್ರವೇಶಸಿದ ಪಾಕಿಸ್ತಾನ ತನಗೆ ಸಿಕ್ಕ ಅವಕಾಶವನ್ನು ಪ್ರಬಲವಾಗಿಯೇ ಬಳಸಿಕೊಂಡರು. ಒಟ್ಟಾರೆಯಾಗಿ ಇಡೀ ಪಂದ್ಯದವನ್ನು ನಿರಾಯಾಸವಾಗಿ ತಮ್ಮದಾಗಿಸಿಕೊಂಡ ಪಾಕಿಸ್ತಾನ ಇದೀಗ ಫೈನಲ್‌ ಪ್ರವೇಶಿಸಿದೆ. ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದಲ್ಲಿ ಗೆದ್ದಂತಹ ತಂಡದೊಂದಿಗೆ ಪಾಕಿಸ್ತಾನ ಫೈನಲ್‌ ಪಂದ್ಯವನ್ನು ಮುಂದಿನ ಭಾನುವಾರದಂದು ಎದುರಿಸಲಿದ್ದು ಈಗ ಇಡೀ ಕ್ರಿಕೆಟ್‌ ಅಭಿಮಾನಿಗಳ ಕಣ್ಣು ಭಾರತ ಮತ್ತು ಇಂಗ್ಲೆಂಡ್‌ ಪಂದ್ಯದ ಮೇಲಿದೆ. ಯಾವ ತಂಡ ಫೈನಲ್‌ ಪ್ರವೇಶಿಸಬಹುದು ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಸ್ಕೋರ್ ಕಾರ್ಡ್
ನ್ಯೂಜಿಲೆಂಡ್ : 152/4(20)

ಬ್ಯಾಟಿಂಗ್

ಫಿಲ್ ಅಲೆನ್ : 4(3)

ಡೆವೋನ್ ಕಾನ್‌ವೇ : 21(20)

ಕೇನ್ ವಿಲಿಯಮ್ಸನ್ : 46(42)

ಗ್ಲೇನ್ ಫಿಲಿಪ್ಸ್ : 6(8)

ಡ್ಯಾರಿಲ್ ಮಿಚೆಲ್ : 53(35)

ಜೇಮ್ಸ್ ನೀಶಮ್ : 16(12)

ಇತರೆ : 6

ಬೌಲಿಂಗ್

ಶಾಯೀನ್ ಅಫ್ರಿದಿ : 4-0-24-2

ನಸೀಮ್ ಶಾ : 4-0-30-0

ಹ್ಯಾರಿಸ್ ರಾಫ್ : 4-0-32-0

ಮೊಹಮ್ಮದ್ವಾ, ಸಿಮ್ : 2-0-15-0

ಶಾದಬ್ ಖಾನ್ : 4-0-33-0

ಮೊಹಮ್ಮದ್ ನವಾಜ಼್ :2-0-12-1

ಪಾಕಿಸ್ತಾನ್ : 153/3(19.1)

ಬ್ಯಾಟಿಂಗ್

ಮೊಹಮ್ಮದ್ ರಿಜ್ವಾನ್ : 58(43)

ಬಾಬರ್ ಅಜಾ಼ಮ್ : 53(42)

ಮೊಹಮ್ಮದ್ ಹ್ಯಾರಿಸ್ : 30(26)

ಶಾನ್ ಮಸೂದ್ : 3(4)

ಇಫ್ತಿಕರ್ ಅಹಮ್ಮದ್ : 0(0)

ಇತರೆ : 10

ಬೌಲಿಂಗ್

ಟ್ರೆಂಟ್ ಬೋಲ್ಟ್ : 4-0-33-2

ಟಿಮ್ ಸೌಥೀ : 3.1-0-24-0

ಲಾಕಿ ಫರ್ಗ್ಯೂಸನ್ : 4-0-37-0

ಮಿಚೆಲ್ ಸ್ಯಾಂಟೆರ್ : 4-0-26-1

ಇಶ್ ಸೋದಿ : 4-0-26-0

Related Articles

ಇತ್ತೀಚಿನ ಸುದ್ದಿಗಳು