Home ದೇಶ ಅತಿಯಾದ ಬಳಕೆಯಿಂದ ಆ್ಯಂಟಿಬಯೋಟಿಕ್ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ: ICMR

ಅತಿಯಾದ ಬಳಕೆಯಿಂದ ಆ್ಯಂಟಿಬಯೋಟಿಕ್ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ: ICMR

0

ಹೊಸದಿಲ್ಲಿ, ಸೆಪ್ಟೆಂಬರ್ 23: ನಮಗೆ ಯಾವುದಾದರೂ ಕಾಯಿಲೆ ಬಂದರೆ, ದೇಹದ ಆಂತರಿಕ ಅಂಗಗಳಿಗೆ ಸೋಂಕು ತಗುಲಿದರೆ, ‘ಆ್ಯಂಟಿಬಯೋಟಿಕ್’ಗಳು ನಮ್ಮನ್ನು ಅವುಗಳಿಂದ ಪಾರು ಮಾಡುತ್ತವೆ.

ಆದರೆ, ಈ ಔಷಧಗಳ ಅತಿಯಾದ ಬಳಕೆಯಿಂದಾಗಿ ಔಷಧಗಳು ಸಮಯಕ್ಕೆ ಸರಿಯಾಗಿ ಕೆಲಸ ಮಾಡದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇತ್ತೀಚಿನ ವರದಿ ಬಹಿರಂಗಪಡಿಸಿದೆ.

ಆ್ಯಂಟಿಬಯೋಟಿಕ್ ಔಷಧಿಗಳ ದುರುಪಯೋಗವು ರೋಗಕಾರಕಗಳ ಸಾಮರ್ಥ್ಯವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮೂತ್ರನಾಳದ ಸೋಂಕುಗಳು, ರಕ್ತನಾಳಗಳ ಸೋಂಕುಗಳು, ಟೈಫಾಯಿಡ್ ಮತ್ತು ನ್ಯುಮೋನಿಯಾಗಳಿಗೆ ಸಾಮಾನ್ಯ ಆ್ಯಂಟಿಬಯೋಟಿಕ್ ಔಷಧಿಗಳು ಕೆಲಸ ಮಾಡುವುದಿಲ್ಲ.

ರೋಗಕಾರಕಗಳಲ್ಲಿ ಔಷಧ ಪ್ರತಿರೋಧ ಗುಣ ಬೆಳೆದಿದೆ ಎಂದು ವರದಿ ಹೇಳುತ್ತದೆ. ಈ ಕಾಯಿಲೆಗಳನ್ನು ಗುಣಪಡಿಸುವುದು ಮುಂದಿರುವ ಸವಾಲಾಗಿದೆ ಎಂದು ವರದಿ ತಿಳಿಸಿದೆ. ದೇಶದಲ್ಲಿ ಆ್ಯಂಟಿಬಯೋಟಿಕ್ ಬಗ್ಗೆ ICMR ಕಡೆಯಿಂದ ಇದು 7 ನೇ ವರದಿ.

You cannot copy content of this page

Exit mobile version