Monday, January 12, 2026

ಸತ್ಯ | ನ್ಯಾಯ |ಧರ್ಮ

ʼಇದೇನು ಗಿಮಿಕ್ ಮೋದಿ ಜೀ?ʼ: ಮನೀಶ್‌ ಸಿಸೋಡಿಯಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮದ್ಯದ (liquor) ನೀತಿಯಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಲುಕ್‌ಔಟ್‌ ಸುತ್ತೋಲೆ (lookout circular) ಹೊರಡಿಸಲಾಗಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಆರೋಪಿಸಿದ್ದಾರೆ.

ಮನೀಶ್ ಸಿಸೋಡಿಯಾ ಅವರು ʼನಿಮ್ಮ ಎಲ್ಲಾ ದಾಳಿಗಳ ನಂತರವು, ಏನೂ ಕಂಡಿಬಂದಿಲ್ಲ, ಒಂದು ಪೈಸಾ ಹಣ ಕಂಡುಬಂದಿಲ್ಲ ಈಗ ನೀವು ಮನೀಶ್ ಸಿಸೋಡಿಯಾ ಲಭ್ಯವಿಲ್ಲ ಎಂದು ಲುಕ್ಔಟ್ ನೋಟಿಸ್ ನೀಡಿದ್ದೀರಿ. ಇದೇನು ಗಿಮಿಕ್ ಮೋದಿ ಜೀ? ನಾನು ದೆಹಲಿಯಲ್ಲಿ ಮುಕ್ತವಾಗಿ ತಿರುಗುತ್ತಿದೇನೆ, ಎಲ್ಲಿಗೆ ಬರಬೇಕು ಹೇಳಿ? ನೀವು ನನ್ನನ್ನು ಹುಡುಕಲಾಗಲಿಲ್ಲವೇ? ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page