Monday, June 24, 2024

ಸತ್ಯ | ನ್ಯಾಯ |ಧರ್ಮ

ಇದು ಲಂಚ ಮತ್ತು ಮಂಚದ ಸರ್ಕಾರ : ಖರ್ಗೆ ವಿವಾದಾತ್ಮಕ ಹೇಳಿಕೆ

ಕಲಬುರಗಿ: ರಾಜ್ಯದಲ್ಲಿರುವುದು ಲಂಚ ಹಾಗೂ ಮಂಚದ ಸರ್ಕಾರ ಎಂದು ಬಿಜೆಪಿ ಟೀಕಿಸುವ ಭರದಲ್ಲಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಸರ್ಕಾರದಲ್ಲಿ ಹಣ ಕೊಡದೆ ಯಾವುದೇ ಕೆಲಸ ಆಗಲ್ಲ. ಯುವಕರು ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೆ ಲಂಚ ಕೊಡಬೇಕು. ಯುವತಿಯರು ನೌಕರಿ ಪಡೆಯಬೇಕು ಅಂದ್ರೆ ಮಂಚ ಹತ್ತಬೇಕಾಗಿದೆ, ಪರೋಕ್ಷ ಉದಾಹರಣೆಯೊಂದಿಗೆ ಹೇಳಬೇಕಾದರೆ 40% ಪರ್ಸೆಂಟ್ ಗಾಗಿ ಓರ್ವ ಸಚಿವ ರಾಜೀನಾಮೆ ನೀಡಿದ್ರೆ, ನೌಕರಿ ಕೇಳಿದ ಯುವತಿಗೆ ಮಂಚಕ್ಕೆ ಕರೆದು ಓರ್ವ ಸಚಿವ ರಾಜೀನಾಮೆ ನೀಡಿದ್ದಾನೆ ಎಂದು ಹೇಳಿಕೆಯಲ್ಲಿ ಈಶ್ವರಪ್ಪ ಹಾಗೂ ರಮೇಶ್ ಜಾರಕಿ‌ ಹೊಳಿಯವರನ್ನು ಸೂಚಿಸಿದ್ದಾರೆ.

ರಾಜ್ಯದಲ್ಲಿ 40% ಸರ್ಕಾರ ಚಾಲ್ತಿಯಲ್ಲಿದೆ. KPTCL ನೇಮಕಾತಿ ಪರೀಕ್ಷೆಯಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ, PSI ನೇಮಕಾತಿಯಲ್ಲೂ ಅಕ್ರಮ ನಡೆದಿದೆ, ಹಾಗಾಗಿ ಸರ್ಕಾರ ಯಾವುದೇ ಪರೀಕ್ಷೆ ನಡೆಸಿದರು ಅಕ್ರಮಗಳು ಹೊರಬರುತ್ತಿವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು