Home ಬ್ರೇಕಿಂಗ್ ಸುದ್ದಿ ಕಾನೂನು ಇದ್ದರೆ ತಮಿಳುನಾಡಿಗೆ ನೀರು ಬಿಡಲಿ, ಬೇಡ ಎನ್ನುವುದಿಲ್ಲ – ಎಚ್.ಡಿ.ರೇವಣ್ಣ

ಕಾನೂನು ಇದ್ದರೆ ತಮಿಳುನಾಡಿಗೆ ನೀರು ಬಿಡಲಿ, ಬೇಡ ಎನ್ನುವುದಿಲ್ಲ – ಎಚ್.ಡಿ.ರೇವಣ್ಣ

0

ಹಾಸನ: ಹೇಮಾವತಿ ಜಲಾಶಯದಿಂದ 16ರಿಂದ 18 ಟಿಎಂಸಿ ನೀರು ಖಾಲಿಯಾಗಿದೆ. ಈ ನೀರು ಎಲ್ಲಿಗೆ ಹೋಯಿತು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪ್ರಶ್ನಿಸಿದರು.

ಹಾಸನದಲ್ಲಿ ಮಾತನಾಡಿದ ಅವರು, ಹೇಮಾವತಿ ನದಿಯಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು. ಈ ಹಿಂದೆ ಹೈಲೆವಲ್ ಚಾನೆಲ್‌ಗೆ ನೀರು ಹರಿಸಲಾಗುತ್ತಿತ್ತು. ಆದರೆ ಈಗ ನೀರು ಬಿಟ್ಟರೂ ಹೈಲೆವಲ್ ಚಾನೆಲ್‌ಗೆ ನೀರು ಹರಿಯುತ್ತಿಲ್ಲ. ಯಾವುದೇ ಹಳ್ಳಿಗಳಿಗೂ ಸಮರ್ಪಕವಾಗಿ ನೀರು ಹೋಗಿಲ್ಲ. ರೈತರು ಸಂಕಷ್ಟದಲ್ಲಿದ್ದು, ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮೊದಲು ದನಕರುಗಳಿಗೆ ನೀರು ಸಿಗುವಂತೆ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಬೆಳೆಗಳಿಗೆ ನೀರು ಕೊಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಬೇಕು. ಕಾನೂನು ಇದ್ದರೆ ತಮಿಳುನಾಡಿಗೆ ನೀರು ಬಿಡಲಿ, ಬೇಡ ಎನ್ನುವುದಿಲ್ಲ. ಆದರೆ ಮೊದಲು ನಮ್ಮ ರೈತರಿಗೆ ನೀರು ಕೊಡಬೇಕು ಎಂದು ಹೇಳಿದರು. ರಾಜಕೀಯವನ್ನು ನಂತರ ಮಾಡೋಣ, ಮೊದಲು ರೈತರನ್ನು ಉಳಿಸಬೇಕು. ಮಳೆಗಾಲ ಮುಗಿದಿದ್ದು, ಇನ್ನು ಮಳೆ ಬರುವ ನಿರೀಕ್ಷೆಯೂ ಇಲ್ಲ. ಖಾಲಿಯಾಗಿರುವ ಡ್ಯಾಂಗೆ ನಾವು ಪೂಜೆ ಮಾಡಬೇಕಾ? ನೀರನ್ನು ಎಲ್ಲಿಗೆ ಹರಿಸಲಾಗುತ್ತಿದೆ, ಏಕೆ ಹರಿಸಲಾಗುತ್ತಿದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ರೇವಣ್ಣ ಆಗ್ರಹಿಸಿದರು.

ಕಸ್ತೂರಿ ರಂಗನ್ ವರದಿಗೆ ಸಂಪೂರ್ಣ ವಿರೋಧ

ಕಸ್ತೂರಿ ರಂಗನ್ ವರದಿಗೆ ನಮ್ಮ ಪಕ್ಷದ ಸಂಪೂರ್ಣ ವಿರೋಧವಿದೆ. ಈ ವಿಚಾರದಲ್ಲಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಬೇಕು. ಸದನದಲ್ಲಿ ದೀರ್ಘ ಚರ್ಚೆ ಮಾಡುವ ಅಗತ್ಯವಿಲ್ಲ, ಒನ್‌ಲೈನ್ ರೆಸಲ್ಯೂಷನ್ ಮಾಡಲಿ. ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ತೆರಳಿದರೆ ನಾವು ಕೂಡ ಹೋಗುತ್ತೇವೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದು ಬೇಡ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳೆದ ಮೂರು ದಿನಗಳಿಂದ ಕಷ್ಟಪಟ್ಟು ಓಡಾಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಗೆ ನಮ್ಮ ವಿರೋಧವಿದೆ ಎಂದು ರೇವಣ್ಣ ಹೇಳಿದರು.

You cannot copy content of this page

Exit mobile version