Monday, July 28, 2025

ಸತ್ಯ | ನ್ಯಾಯ |ಧರ್ಮ

ದ್ವೇಷ ಹಂಚುವ ಮಾಧ್ಯಮಗಳಿಗೆ ಫಂಡ್‌ ಮಾಡಬೇಡಿ- ಐಐಎಂ ಪತ್ರ!

ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನಲೆಯಲ್ಲಿ ಬೆಂಗಳೂರಿನ ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ( Indian Institute of Management – IIM) ನ ನಿವೃತ್ತರೂ ಸೇರಿದಂತೆ 17 ಮಂದಿ ಸಿಬ್ಬಂದಿಗಳು ಕಾರ್ಫೊರೇಟ್ ಇಂಡಿಯಾಗೆ (Corporate India) ಪತ್ರವನ್ನು ಬರೆದಿದ್ದಾರೆ.
ಗಡಿಯೊಳಗೆ ನಡೆಯುತ್ತಿರುವ ಹಿಂಸಾಕೃತ್ಯಗಳೂ ಮತ್ತು ದ್ವೇಷಪೂರಿತ ಸುದ್ದಿಗಳನ್ನು ಹಂಚುತ್ತಿರುವ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಿಗೆ (social media platforms) ನೀಡುತ್ತಿರುವ ಫಂಡನ್ನು ನಿಲ್ಲಿಸಬೇಕಾಗಿ ಪತ್ರದಲ್ಲಿ ಮನವಿ ಮಾಡಿಕೊಂಡಿದೆ.

ಒಂದು ಪುಟದ ಈ ಪತ್ರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದ್ದು ಈ ಎಲ್ಲಾ ಹಿಂಸಾಚಾರಗಳೂ ಭಾರತದ ಆರ್ಥಿಕತೆಯ ಮೇಲೆ ಹೊಡೆತ ನೀಡಲಿವೆ ಎಂದು ಹೇಳಿದೆ.

ಈ ಪತ್ರದಲ್ಲಿ ಹಣಕಾಸು ನಿಧಿಯ ಸಮರ್ಪಕ ಬಳಕೆ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಏಕತೆಯನ್ನು ಪ್ರತಿಪಾದಿಸಲು ಮನವಿ ಮಾಡಿಕೊಳ್ಳಲಾಗಿದ್ದು, ಹದಿನೇಳು ಮಂದಿ ಐಐಎಂ ಸಿಬ್ಬಂದಿಗಳು ಸಹಿ ಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page