Saturday, September 6, 2025

ಸತ್ಯ | ನ್ಯಾಯ |ಧರ್ಮ

ಪಿಎಂಎವೈ ವಸತಿ ಯೋಜನೆಯಲ್ಲಿ ಅಕ್ರಮ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ – ಸಚಿವ ಕೃಷ್ಣ ಬೈರೇಗೌಡ

ಹಾಸನ : ಪ್ರಧಾನಮಂತ್ರಿ ಅವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಮನೆ ಮಂಜೂರಾತಿ ವೇಳೆ ಅಕ್ರಮ ನಡೆದಿರುವುದು ಬಹಿರಂಗವಾಗಿದ್ದು, ಇದರ ಹಿಂದೆ ಯಾರೇ ಇದ್ದರೂ ಶಿಕ್ಷೆ ಅನಿವಾರ್ಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಮನೆಗಳಿಗೆ ಮಂಜೂರಾದ ಹಣವನ್ನು ನಕಲಿ ವಿಧಾನಗಳಲ್ಲಿ ಬೇರೆವರ ಹೆಸರಿಗೆ ವರ್ಗಾಯಿಸುವ ಮೂಲಕ ದುರುಪಯೋಗ ಮಾಡಲಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಹಣವನ್ನು ಅಕ್ರಮವಾಗಿ ಲೂಟಿ ಮಾಡಿರುವುದು ಗಂಭೀರ ಅಪರಾಧ ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ನೋಡೆಲ್ ಅಧಿಕಾರಿ ರಾಜೇಶ್ ಎಂಬಾತ ಈ ಹಗರಣದ ಪ್ರಮುಖ ಸೂತ್ರಧಾರಿ ಎಂದು ಶಂಕೆ ವ್ಯಕ್ತವಾಗಿದೆ. ಸಕಲೇಶಪುರದಲ್ಲಿ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದ ನಂತರ, ಅರಸೀಕೆರೆಯ ಗ್ರಾಮ ಪಂಚಾಯಿತಿಯೊಂದರಲ್ಲಿಯೂ ಅಕ್ರಮ ಪತ್ತೆಯಾಗಿದೆ. ಅಲ್ಲಿನ ಪಿಡಿಒ ವಿರುದ್ಧ ಈಗಾಗಲೇ ಅಮಾನತು ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ. ಈ ಅಕ್ರಮದ ಮೂಲಹಂತದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಆದರೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆತ ಎಲ್ಲಿದ್ದರೂ ಕೂಡಲೇ ಬಂಧಿಸುವಂತೆ ಎಸ್ಪಿಗೆ ಸೂಚಿಸಿದ್ದೇನೆ. ಕೇವಲ ಬಂಧನೆ ಸಾಕಾಗದು, ಶಿಕ್ಷೆಯೂ ಖಚಿತವಾಗಬೇಕು. ಕಾನೂನು ಪ್ರಕಾರ ವಂಚನೆ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲೇಬೇಕು,” ಎಂದು ಸಚಿವ ಬೈರೇಗೌಡ ಹೇಳಿದರು. ಅಕ್ರಮ ಮಾಡಿ ನಂತರ ಹಣವನ್ನು ಹಿಂತಿರುಗಿಸಿದರೂ ಕ್ಷಮೆ ಇರುವುದಿಲ್ಲ. ಆ ಹಣ ನಮಗೆ ಬೇಕೇ ಬೇಕೆಂಬುದಿಲ್ಲ. ಆದರೆ ಅಕ್ರಮ ಮಾಡಿದವರಿಗೆ ಭಯ ಮೂಡುವಂತೆ ಕಠಿಣ ಕ್ರಮ ಅಗತ್ಯ. ಇಲ್ಲವಾದರೆ ಇಂತಹ ಘಟನೆಗಳು ಮತ್ತೆ ನಡೆಯುತ್ತವೆ ಎಂದು ಅವರು ಸ್ಪಷ್ಟಪಡಿಸಿದರು. ಕೆಲವು Pಆಔಗಳ ಲಾಗಿನ್‌ಗಳನ್ನು ದುರುಪಯೋಗಪಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ನಿರಪರಾಧ ಅಧಿಕಾರಿಗಳಿಗೆ ತೊಂದರೆ ಆಗಬಾರದು. ಆದರೆ ಅಕ್ರಮದಲ್ಲಿ ಪಾಲ್ಗೊಂಡವರ ವಿರುದ್ಧ ಯಾವುದೇ ದಯೆಯಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಎಂದರು.. ಇಂತಹ ಅಕ್ರಮ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ನಡೆದಿದೆ ಎನ್ನುವ ಶಂಕೆ ಇದೆ. ಅದನ್ನೂ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದರೆ ನಾವು ಅವರ ಬೆಂಬಲದಲ್ಲಿರುತ್ತೇವೆ. ಆದರೆ ಭ್ರಷ್ಟಾಚಾರ ನಡೆಸಿದರೆ, ಹಣ ಲೂಟಿ ಮಾಡಿದರೆ ಕ್ಷಮೆ ಇಲ್ಲ ಎಂದು ಎಚ್ಚರಿಸಿದರು. ಪಿಎಂಎಐ ಯೋಜನೆಯಲ್ಲಿ ಕೆಲ ನಮ್ಯತೆ ಇರುವುದನ್ನೇ ಕೆಲವರು ದುರುಪಯೋಗ ಪಡಿಸಿಕೊಂಡಿದ್ದಾರೆ. ತುಂಬಾ ಟ್ಯಾಲೆಂಟ್ ಬಳಕೆ ಮಾಡಿದ್ದಾರೆ. ಇದನ್ನು ಒಳ್ಳೆಯದಕ್ಕೆ ಬಳಸಿದ್ರೆ ಸರ್ಕಾರ, ಜನರಿಗೆ ಒಳ್ಳೆಯದಾಗೋದು. ಈ ರೀತಿಯ ಅಕ್ರಮ ರಾಜ್ಯದ ಬೇರೆ ಕಡೆಯಲ್ಲೂ ಆಗಿರಬಹುದು ಎಂದು ಅನುಮಾನಿಸಿದರು. ಇದೆ ವೇಳೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಎಂ‌ಎಲ್.ಸಿ‌ ಮಾಜಿ ಸದಸ್ಯ ಗೋಪಾಲಸ್ವಾಮಿ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page