Home ರಾಜ್ಯ ದಕ್ಷಿಣ ಕನ್ನಡ ಹಿಂದೂ ಜಾಗರಣ ವೇದಿಕೆ ಮನವಿಗೆ ಸ್ಪಂದಿಸಿ ಏಸು ಪ್ರತಿಮೆಯ ಆವರಣ ಗೋಡೆ ತೆರವು

ಹಿಂದೂ ಜಾಗರಣ ವೇದಿಕೆ ಮನವಿಗೆ ಸ್ಪಂದಿಸಿ ಏಸು ಪ್ರತಿಮೆಯ ಆವರಣ ಗೋಡೆ ತೆರವು

0

ದಕ್ಷಿಣ ಕನ್ನಡ: ಬಂಟ್ವಾಳ ತಾಲ್ಲೂಕಿನ ಅಲ್ಲಿಪಾದೆ ಎಂಬ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಏಸುವಿನ ಪ್ರತಿಮೆ ಮತ್ತು ಅದಕ್ಕೆ ಆವರಣ ಗೋಡೆಯೊಂದನ್ನು ನಿರ್ಮಿಸಿದ್ದು, ಈ ವಿರುದ್ಧ ಹಿಂದೂ ಜಾಗರಣ ವೇದಿಕೆಗಳು ಪಂಚಾಯಿತಿ ಮನವಿ ಸಲ್ಲಿಸಿ ಗೋಡೆಯನ್ನು ತೆರವುಗೊಳಿಸಿದ್ದಾರೆ.

ತಾಲ್ಲೂಕಿನ ಸರಪಾಡಿ ಸಮೀಪದ ಅಲ್ಲಿಪಾದೆಯಲ್ಲಿ ಎಂಬ ಗ್ರಾಮದಲ್ಲಿ ಸಂತ ಜೋನ್‌ ಚರ್ಚ್‌ ನ ಪಕ್ಕದಲ್ಲೇ ಇರುವ ಸರ್ಕಾರಿ ಜಮೀನಿನಲ್ಲಿ ಏಸು ಪ್ರತಿಮೆ ಮತ್ತುಅದಕ್ಕೊಂದು ಆವರಣ ಗೋಡೆಯೊಂದನ್ನು ಕಟ್ಟಿದ್ದರು. ಈ ವಿರುದ್ಧ ಕಿಡಿಕಾರಿರುವ ಹಿಂದೂ ಜಾಗರಣ ವೇದಿಕೆ, ಈ ರೀತಿ  ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಿ, ಸುತ್ತ ಗೋಡೆ ಕಟ್ಟಿರುವುದು, ಸರ್ಕಾರೊ ಜಾಗವನ್ನು ಕಬಳಿಸಿರುವ ಹುನ್ನಾರ ಎಂದು ಆರೋಪಿಸಿ, ನಾವೂರ, ಅಲ್ಲಿಪಾದೆ ಪಂಚಾಯತ್‌ ಹಾಗೂ ದಂಡಧಿಕಾರಿಗಳಿಗೆ ಅದನ್ನು ತೆರಳುಗೊಳಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಪತ್ರಿಕಾ ಗೋಷ್ಠಿ ಕರೆದು ಒಂದು ವಾರದೊಳಗೆ ಗೋಡೆಯನ್ನು ತೆರವುಗೊಳಿಸುವಂತೆ ಶುಕ್ರವಾರದಂದು ಗಡುವು ನೀಡಿತ್ತು. ಇದೇ ಬೆನ್ನಲ್ಲೇ, ಇಂದು ತಾಲ್ಲೂಕು ಆಡಳಿತ ಮಂಡಳಿಯವರು ಆಗಮಿಸಿ ಆವರಣದ ಗೋಡೆಯನ್ನು ತೆರವುಗೊಳಿಸಿದ್ದಾರೆ.

You cannot copy content of this page

Exit mobile version