Saturday, January 10, 2026

ಸತ್ಯ | ನ್ಯಾಯ |ಧರ್ಮ

ಅಮೇರಿಕಾ‌ ಎಂಬ ಭಯೋತ್ಪಾದಕ

“ಪ್ರಪಂಚದಲ್ಲಿ ಯಾವುದಾದರೂ ಭಯೋತ್ಪಾದಕ ದೇಶ ಇದ್ದರೆ ಅದು ಅಮೇರಿಕಾ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅಮೇರಿಕಾ ಇತ್ತೀಚಿನ ದಿನಗಳಲ್ಲಿ ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತಿರುವುದು ಈ ಮೇಲಿನ ಮಾತುಗಳನ್ನು ಸಾಬೀತುಪಡಿಸುತ್ತಿದೆ..” ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ್ ಮೂರ್ತಿ ಅವರ ಬರಹದಲ್ಲಿ

ಪ್ರಪಂಚದಲ್ಲಿ ಯಾವುದಾದರೂ ಭಯೋತ್ಪಾದಕ ದೇಶ ಇದ್ದರೆ ಅದು ಅಮೇರಿಕಾ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ, ಈಗ ಅಮೆರಿಕ ಮತ್ತೆ ತನ್ನ ಸ್ವಾರ್ಥಕ್ಕಾಗಿ ಯಾವ ದೇಶದ ಮೇಲಾದರೂ ಬಾಂಬು ಹಾಕುತ್ತಾರೆ ನರಹತ್ಯೆ ಮಾಡುತ್ತಾರೆ. ಕೊಲೆಗಾರರಿಗೆ ಬೆಂಬಲ ನೀಡುತ್ತಾರೆ. ಬೇರೆ ದೇಶಗಳ ಸರ್ಕಾರಗಳನ್ನು ಉರುಳಿಸಿ ತನ್ನ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸುತ್ತದೆ, ಇನ್ನೊಂದು ದೇಶದ ಮುಖ್ಯಸ್ಥನನ್ನು ಕೊಲೆ ಮಾಡುತ್ತಾರೆ. ಅಪಹರಣ ಮಾಡುತ್ತಾರೆ ಮತ್ತೆ ಇದೆ ದೇಶ ಪ್ರಜಾಪ್ರಭುತ್ವದ ಬಗ್ಗೆ ಮಾನವ ಹಕ್ಕು ರಕ್ಷಣೆಯ ಬಗ್ಗೆ ಮಾನವತ್ವದ ಬಗ್ಗೆ ಭಾಷಣ ಮಾಡುತ್ತಾರೆ.

ಈ ದೇಶದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾಶಯ ಕೇವಲ ತಿಂಗಳ ಹಿಂದೆ ಭಾರತ ಪಾಕಿಸ್ತಾನ ನಡುವಿನ ಸಂಘರ್ಷ ಮಾತ್ರವಲ್ಲದೆ ಹಲವು ದೇಶಗಳ ನಡುವಿನ ಯುದ್ಧ ನಿಲ್ಲಿಸುತ್ತೇನೆ ಎಂದು ಘೋಷಿಸುವ ತನಗೆ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕೆಂದು ಪಾಕಿಸ್ತಾನ ಸೇನಾಧಿಕಾರಿ ಆಸಿಫ್ ಮುನೀರ್ ಮತ್ತು ಇಸ್ರೇಲ್ ನ ಪ್ರಧಾನಿ ಬೆಂಜಮೀನ್ ನೆತನ್ಯಾಹು ಮೂಲಕ ಶಿಫಾರಸು ಮಾಡಿಸಿಕೊಂಡಿದ್ದ. ಇದೇ ಮನುಷ್ಯ ನಾಚಿಕೆ ಇಲ್ಲದೆ ತನ್ನ ದೇಶದ ಸೇನೆಯ ಮೂಲಕ  ನಿಜವಾದ ದೇಶದ ಚುನಾಯಿತ ಅಧ್ಯಕ್ಷ ನಿಕೊಲಸ್ ಮಡೊರೋ ಹಾಗೂ ಆತನ ಪತ್ನಿ ಸೀಲಿಯಾ ಫ್ಲೋರ್ಸ್ ವರನ್ನು ಅಪಹರಿಸಿದ್ದನ್ನು ಸಿನಿಮಾದಂತೆ ಟಿವಿಯಲ್ಲಿ ನೋಡಿ ಸಂತೋಷಪಟ್ಟಿದ್ದಾಗಿ ಹೇಳಿಕೊಳ್ಳುತ್ತಾನೆ.

ಜಪಾನ್ ನ ನಾಗಸಾಕಿ ಹಿರೋಶಿಮಾ ನಗರಗಳ ಮೇಲೆ ಅಣುಬಾಂಬ್ ಹಾಕಿದ್ದಾಯಿತು, ವಿಯೇಟ್ನಾಮ್ ಮೇಲೆ ಯುದ್ಧ ದೂಡಿದ್ದಾಯಿತು, ಇರಾಕ್ ದೇಶವನ್ನು ಧ್ವಂಸ ಮಾಡಿ ಅಲ್ಲಿನ ಅಧ್ಯಕ್ಷ ಸದ್ದಾಮ್ ಹುಸೇನ್ ಅನ್ನು ನೇಣಿಗೇರಿಸಿದ್ದಾಯಿತು, ಲಿಬಿಯಾ ದೇಶದ ಅಧ್ಯಕ್ಷನನ್ನು ಕೊಂದಾಯಿತು, ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದಾಯ್ತು. ಸಾವಿರಾ ಪ್ಯಾಲೆಸ್ತೇನಿಯರನ್ನು ಹತ್ಯೆ ಮಾಡಿ ಚಿತ್ರ ಹಿಂಸೆ ನೀಡುತ್ತಿರುವ ಇಸ್ರೇಲ್ಗೆ ಮಿಲಿಟರಿ ಬೆಂಬಲ ನೀಡಿದ್ದಾಯಿತು. ತನ್ನ ಮಾತು ಕೇಳದ ದೇಶದ ಮೇಲೆ ಆರ್ಥಿಕ ಬಂಧನ ಹೇರಿದ್ದಾಯಿತು. ಭಾರತ ದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಹೊರಲಾರದ ತೆರಿಗೆಗಳನ್ನು ಹೇರಿದ್ದಾಯಿತು.

ಆರ್ಥಿಕ ಶಕ್ತಿ ಇದೆ, ಮಿಲಿಟರಿ ಬೆಂಬಲ ಇದೆ ಎಂದು ಯಾವ ದೇಶಗಳನ್ನಾದರೂ ಶೋಷಣೆ ಮಾಡಬಹುದು ಯಾವ ದೇಶದ ಮೇಲಾದರೂ ಆಕ್ರಮಣ ಮಾಡಬಹುದು ಎಂದು ಅಮೆರಿಕ ಭಾವಿಸಿದೆ. ಇಂದು ವಿಶ್ವದ ಹಲವು ಕಡೆ ಭಯೋತ್ಪಾದಕ ಗುಂಪುಗಳು ಹುಟ್ಟಿಕೊಂಡಿದ್ದಾರೆ, ವಿದ್ವಾಂಸಕ ಚಟುವಟಿಕೆಗಳಲ್ಲಿ ಇದ್ದಾರೆ ಅದಕ್ಕೆ ಮೂಲ ಕಾರಣ ಅಮೆರಿಕಾದ ದುಷ್ಟ ನೀತಿ. ವೆನುಜುವಾಲವನ್ನೇ ನೋಡಿ ಅಲ್ಲಿನ ಅಧ್ಯಕ್ಷ ನಿಕೋಸ್ ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆಗೆ ನಡೆಸುತ್ತಿದ್ದಾನೆ ಎಂಬ ಒಂದು ನೆಪದಲ್ಲಿ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ವೆನುಜುವೆಲಾದ ತೈಲ ಮತ್ತು ಅಲ್ಲಿನ ಅಮೂಲ್ಯ ಖನಿಜ ಸಂಪತ್ತನ್ನು ದೋಚಲು ತನಗೆ ಯಾರೂ ಅಡಚಣೆ ಕೊಡಬಾರದೆಂದು ಈ ಟ್ರಂಪ್ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ನಿಕೋಲಸ್ ವಿರುದ್ಧ ನಿಜವಾಗಿಯೂ ಆರೋಪಗಳು ಏನಾದರೂ ಇದ್ದರೆ ಟ್ರಂಪ್ ಇಂಟರ್ಫೋಲ್ಗೆ ದೂರು ನೀಡಬೇಕಿತ್ತು, ವಿಶ್ವ ಸಂಸ್ಥೆಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಬೇಕಿತ್ತು.

ಪ್ರತಿಯೊಂದು ದೇಶದಲ್ಲಿ ತನ್ನದೇ ಆದ ಸಂವಿಧಾನ ಮತ್ತು ನಿಯಮಗಳು ಚೌಕಟ್ಟು ಹೊಂದಿರುತ್ತವೆ. ದೇಶ ದೇಶಗಳ ನಡುವೆ ಸಂಭವಿಸಹುಬಹುದಾದ ವಿವಾದಗಳನ್ನು ಬಗೆಹರಿಸಲೆಂದೇ ಎರಡನೇ ಮಹಾಯುದ್ಧದ ನಂತರ ಹಲವು ದೇಶಗಳು ಒಟ್ಟಿಗೆ ಸೇರಿ ವಿಶ್ವಸಂಸ್ಥೆ, ಹುಟ್ಟು ಹಾಕಿವೆ. ಅದರ ಹುಟ್ಟಿನಲ್ಲಿ ಅಮೆರಿಕಾದ ಪಾತ್ರವು ದೊಡ್ಡದಿದೆ ಮಾತ್ರವಲ್ಲ ವಿಶ್ವಸಂಸ್ಥೆ ಪ್ರಧಾನ ಕಛೇರಿ ಅಮೆರಿಕದಲ್ಲಿ ಇದೆ.

ಅಮೇರಿಕಾದ ಈ ದುಷ್ಟತನಕ್ಕೆ, ದುರಹಂಕಾರಕ್ಕೆ ವಿಶ್ವಸಂಸ್ಥೆಯ ಅಸಹಾಯಕತೆಯೂ ಮುಖ್ಯ ಕಾರಣವಿದೆ, ಈ ಅಮೆರಿಕ ಕಾನೂನು ನಿಯಮಗಳನ್ನು ಮೀರದಾಗಲೆಲ್ಲ ವಿಶ್ವಸಂಸ್ಥೆ ದಿಟ್ಟ ನಿಯಮ ತಾಳುತ್ತಾ ಬಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.  ವೆನುಜುವೆಲಾದ ವಿರುದ್ಧ ಯಾವ ಪ್ರಚೋದನೆಯು ಇಲ್ಲದೆ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಯ ವಿರುದ್ಧ ವಿಶ್ವ ಸಂಸ್ಥೆ ಧನಿ ಎತ್ತಲೇಬೇಕು, ಕಾರ್ಯಾಚರಣೆಗೆ ಆದೇಶ ನೀಡಿದ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ನಿಕೋಲಸ್ ಮಡೋರು ರವರನ್ನು ಈಗಲೇ ಬಿಡುಗಡೆ ಮಾಡಬೇಕು.

ಡೊನಾಲ್ಡ್ ಟ್ರಂಪ್ ನ ದುಷ್ಟತನದ ಪರಿಣಾಮವಾಗಿ ಮೂರನೇ ಮಹಾಯುದ್ಧ ನಡೆದರೆ ಆಶ್ಚರ್ಯವಿಲ್ಲ, ಈಗಾಗಲೇ ಹಲವು ದೇಶಗಳು ಅಮೆರಿಕಾದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಜನರು ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದಾರೆ. ದಕ್ಷಿಣ ಅಮೇರಿಕಾದ ಹಲವು ರಾಷ್ಟ್ರಗಳು ವೆನುಜುವೆಲದ ಜನತೆಯ ಹೋರಾಟವನ್ನು ಬೆಂಬಲಿಸುವ ಲಕ್ಷಣಗಳು ಕಾಣುತ್ತಿವೆ. ಅಮೆರಿಕಾದ ನೀತಿ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಕಂಟಕ ಪ್ರಾಯವಾಗಿದೆ. ಸಣ್ಣಪುಟ್ಟ ರಾಷ್ಟ್ರಗಳಿಗೆ ಭಾರಿ ಭೀತಿ ಎದುರಾಗಿದೆ. ಗ್ರೇನ್ಸ್ ದೇಶವನ್ನು ವಶಪಡಿಸಿಕೊಳ್ಳುವುದಾಗಿಯೂ, ದೇಶವನ್ನು ತನ್ನ ದೇಶದ 51ನೇ ರಾಷ್ಟ್ರ ಮಾಡಿ ಕೊಳ್ಳುವುದಾಗಿಯೂ ಟ್ರಂಪ್ ಬೆದರಿಕೆ ಹಾಕುತ್ತಿದ್ದಾನೆ.

ವಿಶ್ವಸಂಸ್ಥೆಯನ್ನು ಗಟ್ಟಿಗೊಳಿಸುವತ್ತ ಎಲ್ಲಾ ರಾಷ್ಟ್ರಗಳು ಚಿಂತಿಸುವ ಅಗತ್ಯ ಇದೆ ವಿಶ್ವಸಂಸ್ಥೆಯ ಬದುಲು ವಿಶ್ವ ಸರ್ಕಾರ ಸ್ಥಾಪಿಸಬೇಕೆಂದು ರಾಮ ಮನೋಹರ ಲೋಹಿಯಾ ಅವರು 70 ವರ್ಷಗಳ ಹಿಂದೆಯೇ ಪ್ರತಿಪಾದಿಸಿದರು ಜಗತ್ತಿನ ಎಲ್ಲ ರಾಷ್ಟ್ರಗಳು ಸಮಾನ ಸ್ಥಾನವನ್ನು ನೀಡುವ ಸರ್ಕಾರ ರಚನೆ ಆದರೆ ಮಾತ್ರ ಯುದ್ಧಗಳಿಗೆ ಕೊನೆಯ ಹಾಡಬಹುದೇನೋ, ಅಮೆರಿಕಾದಂತಹ ಪ್ರಬಲ ರಾಷ್ಟ್ರಗಳ ಸಾಮ್ರಾಜ್ಯ ಶಾಹಿ ಧೋರಣೆಗೆ ಕಡಿವಾಣ ಹಾಕಬಹುದೇನೋ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page