Friday, September 27, 2024

ಸತ್ಯ | ನ್ಯಾಯ |ಧರ್ಮ

ರೇಣುಕಾಸ್ವಾಮಿ ಹತ್ಯೆ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ನಟ ದರ್ಶನ್‌ ತನಿಖೆ

ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆ ನಡೆಸಿದ್ದಾರೆ.

ಇಂದೂ (ಶುಕ್ರವಾರ) ನಟನನ್ನು ವಿಚಾರಣೆಗೊಳಪಡಿಸಬಹುದು ಎಂದು ಜೈಲಿನ ಮೂಲಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿವೆ.

ಐಟಿ ಅಧಿಕಾರಿಗಳ ತಂಡ ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಆಗಮಿಸಿ ಮಧ್ಯಾಹ್ನ 12:00ರಿಂದ ಸಂಜೆ 7:30ರವರೆಗೆ ವಿಚಾರಣೆ ನಡೆಸಿತು.

ದರ್ಶನ್ ಅವರಿಗೆ ಅವರಿಗೆ ಸಹಾಯ ಮಾಡಲು ಹಾಜರಿದ್ದ ಅವರ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ವಿಚಾರಣೆ ಕೊಠಡಿಯ ಹೊರಗೆ ಕುಳಿತುಕೊಳ್ಳುವಂತೆ ಹೇಳಲಾಯಿತು ಮತ್ತು ಐಟಿ ಅಧಿಕಾರಿಗಳು ಕೇಳಿದಾಗ ಮಾತ್ರವೇ ಸಹಾಯ ಮಾಡಲು ಅವಕಾಶ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ದರ್ಶನ್ ನಾಯಕನಾಗಿ ನಟಿಸಬೇಕಿದ್ದ ‘ಡೆವಿಲ್’ ಚಿತ್ರದ ನಿರ್ಮಾಪಕರಾದ ಜಿ ಬಿ ಪ್ರಕಾಶ್ ಮತ್ತು ಸುನೀಲ್ ಕುಮಾರ್ ಹಾಗೂ ಶ್ರೀನಿವಾಸ್ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ದರ್ಶನ್ ಅವರೊಂದಿಗೆ 25 ನಿಮಿಷಗಳ ಕಾಲ ಸಂವಾದ ನಡೆಸಲು ಐಟಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page