ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ನಿಗಮಗಳು ಡೀಸೆಲ್ ಅನ್ನು ಬಲ್ಕ್‌ನಲ್ಲಿ ಖರೀದಿ ಮಾಡುತ್ತಿವೆ. ಇತ್ತೀಚೆಗೆ ಇಸ್ರೇಲ್–ಇರಾನ್ ಸಂಘರ್ಷ ಪರಿಣಾಮದಿಂದ ಡೀಸೆಲ್ ದರ ಏರಿಕೆಯಾದರೂ, ಪ್ರಯಾಣಿಕರ ಮೇಲಿನ ಭಾರವನ್ನು ಹೆಚ್ಚಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ಡೀಸೆಲ್ ದರ ಏರಿಕೆಯಾಗಿದ್ದರೂ ಅದೇ ರೀತಿಯಲ್ಲಿ ಖರೀದಿ ಮುಂದುವರೆಯಲಿದೆ. ಆದರೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನೊಂದೆಡೆ, ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಏರಿಕೆ ಕಂಡುಬಂದಿದ್ದು, ಪ್ರತಿ ಲೀಟರ್‌ಗೆ ಸುಮಾರು 2.30 ರೂ. ಹೆಚ್ಚಳವಾಗಿದೆ.
