Monday, June 17, 2024

ಸತ್ಯ | ನ್ಯಾಯ |ಧರ್ಮ

IND vs SA 2nd ODI: ಭಾರತಕ್ಕೆ 279 ರನ್‌ ಗುರಿ ನೀಡಿದ ದ.ಆಫ್ರಿಕಾ ತಂಡ

ರಾಂಚಿ: ಭಾರತ ವಿರುದ್ಧದ ಎರಡನೇ ಏಕದಿನ ದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಎದುರಾಳಿ ಭಾರತ ತಂಡಕ್ಕೆ  279 ರನ್‌ಗಳ ಗುರಿ ನೀಡಿದೆ.

ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಂತರ ಓಪನರ್‌ಗಳಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ ಮತ್ತು ಜನೆಮನ್ ಮಲನ್ ತಂಡಕ್ಕೆ ಉತ್ತಮ ರನ್‌ ಕಲೆಹಾಕುವಲ್ಲಿ ವಿಫಲರಾದರು. ಎರಡನೇ ಓವರ್‌ನಲ್ಲಿ ಮೊಹಮದ್‌ ಸಿರಾಜ್‌ ಬೌಲಿಂಗ್‌ ದಾಳಿಗೆ ಕ್ಲೀನ್‌ ಬೌಲ್ಡ್‌ ಆದ ಡಿ. ಕಾಕ್‌ 8 ಎಸೆತಗಳಲ್ಲಿ ಒಂದು ಬೌಂಡರಿ ಸಿಡಿಸಿ 5 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ನಂತರ ಬಂದ ರೀಜಾ ಹೆಂಡ್ರಿಕ್ಸ್, ಜನೆಮನ್ ಮಲನ್ ಜೊತೆ ಸೇರಿ ನಿಧಾನಗತಿಯಲ್ಲಿ ತಂಡಕ್ಕೆ ರನ್‌ ಕಲೆಹಾಕುವತ್ತ ಸಾಗಿದರು. ಈ ವೇಳೆ 9.5 ನೇ ಓವರ್‌ನಲ್ಲಿ ಜನೆಮನ್ ಮಲನ್ ಶಹಬಾಜ್ ಅಹಮದ್ ಬೌಲಿಂಗ್‌ ದಾಳಿಯಲ್ಲಿ ಎಲ್‌ಬಿಡಬ್ಲ್ಯು(lbw) ಆಗಿ ತಂಡ ಸೇರಿದರು.

ಐಡೆನ್ ಮಾರ್ಕ್ರಾಮ್ ಮತ್ತು ರೀಜಾ ಹೆಂಡ್ರಿಕ್ಸ್ ಇಬ್ಬರ ಜೊತೆಯಾಟ ತಂಡಕ್ಕೆ ಹೊಸ ಹುರುಪು ನೀಡಿತು. ಐಡೆನ್ ಮಾರ್ಕ್ರಾಮ್ 89 ಎಸೆತಗಳಲ್ಲಿ 79 ರನ್‌ ಗಳಿಸಿ ವಾಷಿಂಗ್ಟನ್‌ ಸುಂದರ್‌ ಅವರ ಬೌಲಿಂಗ್‌ ವೇಳೆ ಕ್ಯಾಚ್‌ ನೀಡಿದರು. ನಂತರ ರೀಜಾ ಹೆಂಡ್ರಿಕ್ಸ್ 76 ಎಸೆತಗಳಲ್ಲಿ 74 ರನ್‌ ಗಳಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ಹೆನ್ರಿಕ್ ಕ್ಲಾಸೆನ್ 30(26), ಡೇವಿಡ್ ಮಿಲ್ಲರ್ 35(34), ವೇಯ್ನ್ ಪಾರ್ನೆಲ್ 16(22), ಕೇಶವ ಮಹಾರಾಜ್‌ 5(13) ರನ್‌ಗಳಿಸುವ ಮೂಲಕ ತಂಡವು 278 ರನ್‌ ಗಳಿಸಿ, ಭಾರತ ತಂಡಕ್ಕೆ 279 ರನ್‌ಗಳ ಗುರಿ ನೀಡಿದರು.

ಈ ಪಂದ್ಯದಲ್ಲಿ ಮೊಹಮದ್‌ ಸಿರಾಜ್‌ 10 ಓವರ್‌ಗಳಿಗೆ 38 ರನ್‌ ನೀಡಿ 3 ವಿಕೆಟ್‌ ಪಡೆದುಕೊಂಡರೆ, ವಾಷಿಂಗ್ಟನ್ ಸುಂದರ್‌, ಶಹಬಾಜ್ ಅಹಮದ್, ಕುಲದೀಪ್‌ ಯಾದವ್‌, ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್‌ ಪಡೆದುದಕೊಂಡರು. ಹೀಗಾಗಿ ಭಾರತ ತಂಡವು ಈ ಪಂದ್ಯದಲ್ಲಿ ಏಳು ವಿಕೆಟ್‌ ಕಬಳಿಸಲು ಸಾಧ್ಯವಾಯಿತು.

Related Articles

ಇತ್ತೀಚಿನ ಸುದ್ದಿಗಳು