Thursday, August 15, 2024

ಸತ್ಯ | ನ್ಯಾಯ |ಧರ್ಮ

ಕೆಂಚನೂರು, ಜಾಡಿ ತೋಡಿನ ಮನೆ ಮುತ್ತಯ್ಯ ಶೆಟ್ಟಿ ಸರ್ಕಲ್ಲಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚಾರಣೆ

ಕುಂದಾಪುರ: ಇಲ್ಲಿನ ಕೆಂಚನೂರು-ದೇವಲ್ಕುಂದ ಗ್ರಾಮಗಳ ಜಾಡಿ ಸರ್ಕಲ್ಲಿನಲ್ಲಿ ಇಂದು 78 ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಊರಿನ ಜನರೆಲ್ಲ ಸೇರಿ ಸಂಭ್ರಮದಿಂದ ಆಚರಿಸಿದರು.

ತೋಡಿನ ಮುತ್ತಯ್ಯ ಶೆಟ್ಟರ ಸ್ಮರಣಾರ್ಥ ಸರ್ಕಲ್‌ ಬಳಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಊರಿನ ಸಮಸ್ತರ ಹಾಜರಿಯೊಂದಿಗೆ ಕವಿ, ಅನುವಾದಕ ಶಂಕರ ಎನ್‌ ಕೆಂಚನೂರು ಇವರು ಧ್ವಜಾರೋಹಣವನ್ನು ನೆರವೇರಿಸಿದರು.

ಧ್ವಜಾರೋಹಣದ ನಂತರ ಬಾಳೆಕೆರೆ ವಾರ್ಡಿನಲ್ಲಿ ಹಲವು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಜನರಿಗೆ ಸೇವೆ ಸಲ್ಲಿಸುತ್ತಿರುವ ಶ್ರೀಮತಿಯವರನ್ನು ಹಾಗೂ ಶಂಕರ ಎನ್‌ ಕೆಂಚನೂರು ಇವರನ್ನು ಸನ್ಮಾನಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಂಕರ ಎನ್‌ ಕೆಂಚನೂರು “ನಮಗೆ 1947ರಲ್ಲಿ ಸ್ವಾತಂತ್ರ್ಯ ದೊರಕಿದೆ. ಅದು ನಮಗೆ ಪರಕೀಯರಿಂದ ಬಿಡುಗಡೆ ಸಿಕ್ಕ ದಿನ. ಆದರೆ ನಾವಿನ್ನೂ ಬಡತನದಿಂದ ಬಿಡುಗಡೆ ಹೊಂದಿಲ್ಲ, ದೇಶ ಕೋವಿಡ್‌ – 19 ಕಾಲದ ನೋವಿನ ಛಾಯೆಯಿಂದ ಈಗಷ್ಟೇ ಹೊರಗೆ ಬರುತ್ತಿದೆ. ಎಲ್ಲರಿಗೂ ಆರೋಗ್ಯ, ಬಡತನದಿಂದ ಮುಕ್ತಿ ಸಿಕ್ಕ ದಿನ ನಾವೆಲ್ಲರೂ ಸ್ವತಂತ್ರರಾದಂತೆ” ಎಂದು ಹೇಳಿದರು.

ಲೋಹಿತಾಶ್ವ ಆರ್ ಕುಂದರ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಯಿತು. ಶಂಕರ ಮೊಗವೀರ ಕೆಂಚನೂರು ಅವರು ಸ್ವಾಗತ ಭಾಷಣ ಮಾಡಿದರು.

ಕರುಣಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ರಾಮಕೃಷ್ಣ ಶೆಟ್ಟಿ ಗುಡ್ರಿ, ಉದಯ ಪೂಜಾರಿ ಕೆಂಚನೂರು, ಜಾಡಿ, ಪಂಚಾಯತ್‌ ಸದಸ್ಯರಾದ ರವಿ ಗಾಣಿಗೆ ಮಲ್ಲಾರಿ, ಶರತ್‌ ಶೆಟ್ಟಿ ಕೆಂಚನೂರು, ಮಣಿಕಂಠ ಪೂಜಾರಿ ಜಾಡಿ, ದಿನಕರ ಶೆಟ್ಟಿ, ರಾಘು ಶೆಟ್ಟಿ ಬಾಳೆಕೆರೆ, ರಂಜಿತ್‌ ಆಳ್ವರ ಮನೆ ದೇವಲ್ಕುಂದ, ಮೋಹನ ದೇವಾಡಿಗ ಕುಂಟನೇರ್ಲು, ಮಂಜುನಾಥ ಮೋಗವೀರ, ಮಂಜುನಾಥ ಪೂಜಾರಿ ಜಾಡಿ, ಸುಕುಮಾರ ಶೆಟ್ಟಿ ದೇವಲ್ಕುಂದ ರೈತ ಮಿತ್ರ ಮತ್ತು ಕೆಂಚನೂರು, ದೇವಲ್ಕುಂದ ಹಾಗೂ ಬಾಳಿಕೆರೆಯ ಊರಿನ ಸಮಸ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಾಡಿ ಫ್ರೆಂಡ್ಸ್‌ ಇವರ ನೇತ್ರತ್ವದಲ್ಲಿ ಕಾರ್ಯಕ್ರಮ ನೆರವೇರಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page