Monday, June 17, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿಯಲ್ಲ; ಮೋದಿ ಮತ್ತು ಅವರ ಚೇಲಾಗಳು: ಸುಬ್ರಮಣಿಯನ್‌ ಸ್ವಾಮಿ

ಬಿಜೆಪಿಯ ಇನ್‌ ಸೈಡ್‌ ಕ್ರಿಟಿಕ್‌ ಸುಬ್ರಮಣಿಯನ್‌ ಸ್ವಾಮಿ ಮತ್ತೆ ಸಿಡಿದೆದ್ದಿದ್ದಾರೆ. ಈ ಬಾರಿ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಅಲ್ಲಿ ಅಧಿಕಾರ ನಡೆಸುತ್ತಿರುವುದು ಮೋದಿ ಮತ್ತು ಚೇಲಾಗಳು ಹೀಗಾಗಿ ನಾವು ಇದನ್ನು ವಿರೋಧಿಸಬೇಕಿದೆ ಎಂದಿದ್ದಾರೆ.

ಇತ್ತೀಚೆಗೆ ಪದೇ ಪದೇ ಮೋದಿಯವರ ಮೇಲೆ ಟೀಕಾಸ್ತ್ರಗಳನ್ನು ಎಸೆಯುತ್ತಿರುವ ಸುಬ್ರಮಣಿಯನ್‌ ಸ್ವಾಮಿ “ಮೋದಿಯವರು ನಿರ್ವೀರ್ಯಗೊಳಿಸಿದ್ದಾರೆ. ಅವರ ಕಚೇರಿಯ ಅಧಿಕಾರಿಗಳು ಮಾಧ್ಯಮ ಸಂಸ್ಥೆಗಳಿಗೆ ಹೋಗಿ ಅವರನ್ನು ಹೆದರಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು, “ಕೇಂದ್ರದಲ್ಲಿ ಇಂದು ಹೆಸರಿಗಷ್ಟೇ ಬಿಜೆಪಿ ಸರ್ಕಾರವಿದೆ. ಆದರೆ ಅಲ್ಲಿ ಅಧಿಕಾರ ನಡೆಸುತ್ತಿರುವುದು ಮೋದಿ ಮತ್ತು ಅವರ ಚೇಲಾಗಳು. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ನಾವೆಲ್ಲ ಇದನ್ನು ವಿರೋಧಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

ಇಂತಹ ಬೆಳವಣಿಗೆಗಳು ಮೊದಲು ಚೀನಾ, ರಷ್ಯಾಗಳಲ್ಲಿ ಮಾತ್ರ ಕಾಣುತ್ತಿದ್ದವು, ಆದರೆ ಈಗ ಭಾರತದಲ್ಲಿಯೂ ಅಂತಹ ಸನ್ನಿವೇಶವಿದೆ. ಮೋದಿ ಎಮರ್ಜೆನ್ಸಿ ಹೇರಿರಬಹುದು ಅಥವಾ ಹೇರದೆ ಇದ್ದಿರಬಹುದು ಆದರೆ ಇದೆಲ್ಲವೂ ಎಮರ್ಜೆನ್ಸಿಯಂತಹ ಸನ್ನಿವೇಶವೇ ಎನ್ನುವುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು