Tuesday, January 7, 2025

ಸತ್ಯ | ನ್ಯಾಯ |ಧರ್ಮ

2023 ರಲ್ಲಿ ಭಾರತದ ಆದಾಯದ ಅಸಮಾನತೆ 1950 ಕ್ಕಿಂತ ಹೆಚ್ಚು: ವರದಿ

ಬೆಂಗಳೂರು: ಭಾರತದ ಆದಾಯದ ಅಸಮಾನತೆಯು 1950ರ ದಶಕಕ್ಕಿಂತ 2023ರಲ್ಲಿ ಹೆಚ್ಚಿತ್ತು ಎಂದು ಪೀಪಲ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸ್ಯೂಮರ್ ಎಕಾನಮಿ (PRICE) ಭಾನುವಾರ, ಜನವರಿ 5 ರಂದು ಮಾಹಿತಿ ಬಹಿರಂಗಪಡಿಸಿದೆ. ಇದನ್ನು ನಿವಾರಿಸಲು ಅಂತರ್ಗತ ಬೆಳವಣಿಗೆ ಮತ್ತು ಸಾಮಾಜೋ-ಆರ್ಥಿಕ ಸಮಾನತೆಯ ಗುರಿಯನ್ನು ಸಾಧಿಸಲು ಬೇಕಾದ ಪರಿಣಾಮಕಾರಿ ನೀತಿಗಳನ್ನು ತರಲು ಆದಾಯ ವಿತರಣೆಯ ನಿಖರವಾದ ಮಾಪನದ ಅಗತ್ಯವಿದೆ ಎಂದು ವರದಿ ಒತ್ತಿಹೇಳಿದೆ. .

ನ್ಯಾಶನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಮತ್ತು PRICE ನಂತಹ ಸಂಸ್ಥೆಗಳಿಂದ ಭಾರತದ ಮನೆಯ ಆದಾಯದ ಸಮೀಕ್ಷೆಗಳನ್ನು ನಡೆಸಿ ಮಾಡಿದ ಸಂಶೋಧನೆ 1953-55 ರಲ್ಲಿ ಇದ್ದ ಗಿನಿ ಸೂಚ್ಯಂಕ (Gini index) 0.371 ಆದಾಯದ ಅಸಮಾನತೆಯು 2022-23 ರಲ್ಲಿ 0.410 ಕ್ಕೆ ಏರಿದೆ ಎಂದು PRICE ತಿಳಿಸಿದೆ.  

ಸಮಾಜದ ಶ್ರೀಮಂತ ವರ್ಗಗಳ ಬಳಿ ರಾಷ್ಟ್ರೀಯ ಆದಾಯದ ಅಸಮಾನ ಪಾಲು ಸಂಗ್ರಹಿಸುವುದು ಮುಂದುವರೆದಿದೆ, ಆದರೆ ಗ್ರಾಮೀಣ ಮತ್ತು ಅಂಚಿನಲ್ಲಿರುವ ಜನರು ಅಗತ್ಯ ಸೇವೆಗಳು, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅವಕಾಶಗಳಿಗೆ ಹೋರಾಡುತ್ತಿದೆ ಎಂದು PRICE ಹೇಳಿದೆ.

1953 ರಿಂದ 2023 ರವರೆಗಿನ ಆದಾಯದ ಅಸಮಾನತೆಯ ಡೇಟಾ ಮತ್ತು ಗಿನಿ ಅನುಪಾತಗಳು. ಮೂಲ: PRICE authors’ compilation from publications (1953-2004) and estimates from PRICE’s ICE 360° surveys (2014-2023)

ಗಿನಿ ಸೂಚ್ಯಂಕವು ಸೊನ್ನೆ ಇದ್ದರೆ, ಅದು ಪರಿಪೂರ್ಣ ಸಮಾನತೆ. ಈ ಸೂಚ್ಯಂಕ ಹೆಚ್ಚಾದರೆ, ಆದಾಯದ ಅಸಮಾನತೆ ಹೆಚ್ಚಾದ ಲಕ್ಷಣ.

ಇದನ್ನು “see-saw” ಮಾದರಿ ಎಂದು ಕರೆದಿರುವ, PRICE ನ CEO ಮತ್ತು ವರದಿಯ ಲೇಖಕ ರಾಜೇಶ್ ಶುಕ್ಲಾ, ಆದಾಯದ ಅಸಮಾನತೆಯು ಸುಧಾರಣೆ ಮತ್ತು ಅವನತಿಯನ್ನು ಕಾಲ ಕಾಲದಲ್ಲಿ ಕಂಡಿದೆ ಎಂದು ಹೇಳಿದ್ದಾರೆ.

2015-16 ರಿಂದ 2020-21 ರವರೆಗೆ ಸೂಚ್ಯಂಕವು 0.395 ರಿಂದ 0.528 ಕ್ಕೆ ಏರಿದಾಗ ಡೇಟಾವು ಅಸಮಾನತೆಯ ತೀವ್ರ ಹೆಚ್ಚಳವನ್ನು ತೋರಿಸುತ್ತದೆ . ಕೋವಿಡ್-19 ಅವಧಿಯ ನಂತರ ಸುಧಾರಣೆಯ ಕೆಲವು ಲಕ್ಷಣಗಳಿವೆ. “ಸ್ವತಂತ್ರಪೂರ್ವದಲ್ಲಿ ಇದ್ದ ಗಿನಿ ಸೂಚ್ಯಂಕ 0.463 ವು 2015-16 ರಲ್ಲಿ 0.367 ಕ್ಕೆ ಸುಧಾರಿಸಿದೆ, ಆದರೆ 2021 ರ ವೇಳೆಗೆ COVID-19 ಸಾಂಕ್ರಾಮಿಕದಂತಹ ಅಡೆತಡೆಗಳಿಂದಾಗಿ 0.506 ಕ್ಕೆ ಹದಗೆಟ್ಟಿತು,” ಎಂದು PRICE ಹೇಳಿದೆ.

“ಪರಿಣಾಮಕಾರಿ ನೀತಿಗಳನ್ನು ತಂದರೆ ಆದಾಯದ ಅಸಮಾನತೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದು,” ಎಂದು ವರದಿ ಹೇಳಿದೆ.

ಸಂಪತ್ತಿನ ಕೇಂದ್ರೀಕರಣ:

ವಿಶ್ವ ಅಸಮಾನತೆಯ ಡೇಟಾಬೇಸ್ (World Inequality Database – WID) ಅಂದಾಜುಗಳು ಮತ್ತು ಭಾರತೀಯ ಮನೆಗಳ ಸಮೀಕ್ಷೆಗಳಿಂದ ಸಿಕ್ಕಿದ ಡೇಟಾವನ್ನು ಹೋಲಿಸಿ, ಲೇಖಕರು “ಎರಡನೆಯದು ಹೆಚ್ಚು ವಾಸ್ತವಿಕ ಸೂಚ್ಯಂಕವಾಗಿದೆ, ಏಕೆಂದರೆ WID ಸಂಪತ್ತಿನ ಕೇಂದ್ರೀಕರಣಕ್ಕೆ ಒತ್ತು ನೀಡುತ್ತದೆ ಮತ್ತು ಅನೌಪಚಾರಿಕ ವಲಯದ ಆದಾಯವನ್ನು ಹೊರಗಿಟ್ಟಿದೆ, ಇದು ಭಾರತದಂತಹ ಆರ್ಥಿಕತೆಗಳಿಗೆ ಜಿಡಿಪಿಯ ಪ್ರಮುಖ ಭಾಗವಾಗಿದೆ,” ಎಂದು ಹೇಳಿದ್ದಾರೆ.

WID ಅಂದಾಜಿನ ಪ್ರಕಾರ, ಭಾರತದ ‘ಟಾಪ್ 1%’ ಜನಸಂಖ್ಯೆಯಲ್ಲಿ ಆದಾಯವು ಕೇಂದ್ರೀಕೃತವಾಗಿದೆ. 2023 ರಲ್ಲಿ ರಾಷ್ಟ್ರೀಯ ಆದಾಯದ 22.6% ಇವರ ಕೈಯಲ್ಲಿದೆ. ಆದರೆ ಭಾರತೀಯ ಆದಾಯ ಸಮೀಕ್ಷೆಗಳ ಪ್ರಕಾರ, ಈ ಟಾಪ್‌ 1% ಶ್ರೀಮಂತರು ರಾಷ್ಟ್ರೀಯ ಆದಾಯದ 7.3% ಅನ್ನು ಮಾತ್ರ ನಿಯಂತ್ರಿಸಿದ್ದಾರೆ.

ಭಾರತದ ಮನೆಯ ಸಮೀಕ್ಷೆಗಳ ಪ್ರಕಾರ, ಜನಸಂಖ್ಯೆಯ 40% ಮಧ್ಯಮ ವರ್ಗ ಸ್ಥಿರ ಆದಾಯವನ್ನು ಹೊಂದಿವೆ. ಇದು ವರ್ಷಗಳಲ್ಲಿ 43.9% ರಿಂದ 46.6% ವರೆಗೆ ಮಾತ್ರ ಏರಿದ್ದು, ಸ್ಥಿರ ಆರ್ಥಿಕತೆಯನ್ನು ಸೂಚಿಸುತ್ತದೆ. WID ಅಂದಾಜಿನ ಪ್ರಕಾರ ಮಧ್ಯಮ ಜನಸಂಖ್ಯೆಯ ಪಾಲು 1953-55 ರಲ್ಲಿ 41.5% ರಿಂದ 2022-23 ರಲ್ಲಿ ಕೇವಲ 27.3% ಕ್ಕೆ ಗಮನಾರ್ಹ ಇಳಿಕೆಯಾಗಿದೆ.

ಕೆಳಗಿನ ಹಂತದಲ್ಲಿರುವ 50% ಜನಸಂಖ್ಯೆಯ ಮನೆಗಳ ಸಮೀಕ್ಷೆಗಳು ಅದಾಯದ ಏರಿಳಿತದ ಪ್ರವೃತ್ತಿಯನ್ನು ತೋರಿಸುತ್ತವೆ. ಈ ವರ್ಗದ ಆದಾಯದ ಪಾಲು 15.8% (2020-21) ಮತ್ತು 25.5% (1961-65) ನಡುವೆ ಇರುತ್ತದೆ ಮತ್ತು ಕೊರೋನ ಅವಧಿಯ ನಂತರ ಚೇತರಿಕೆಯಾಗಿ 22.8% ನಲ್ಲಿ ನಿಂತಿದೆ. 

ತುಲನಾತ್ಮಕ ಅಂದಾಜುಗಳು ಭಾರತೀಯ ಮತ್ತು ಜಾಗತಿಕ ಸಮೀಕ್ಷೆಗಳ ನಡುವಿನ ಅಸಮಾನತೆಯನ್ನು ತೋರಿಸುತ್ತವೆಯಾದರೂ, ಸಮಾಜದ ಅತ್ಯಂತ ಕೆಳ ಹಂತದಲ್ಲಿರುವ 10% ಜನರು ಹೆಚ್ಚು ಆದಾಯ ಗಳಿಸಲು ನಿರಂತರ ಹೋಡಾಟ ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page