ದೆಹಲಿ: ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತವು ಅತಿ ಹೆಚ್ಚು ತಾಯಂದಿರ ಮರಣ ಪ್ರಮಾಣವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
‘ತಾಯಂದಿರ ಮರಣದ ಸ್ಥಿತಿ 2000-2023’ ಎಂಬ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO), UNICEF, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ, ವಿಶ್ವಬ್ಯಾಂಕ್ ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (ಜನಸಂಖ್ಯಾ ವಿಭಾಗ) ಸಿದ್ಧಪಡಿಸಿವೆ.
ನೈಜೀರಿಯಾ ಮೊದಲ ಸ್ಥಾನದಲ್ಲಿದ್ದು, 2023ರಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು (ಶೇಕಡಾ 28.7) ಸಾವುಗಳು ಇಲ್ಲಿ ಸಂಭವಿಸಿವೆ, ಅಂದರೆ ಸುಮಾರು 75,000 ಸಾವುಗಳು ಸಂಭವಿಸಿವೆ.
10,000 ಕ್ಕೂ ಹೆಚ್ಚು ತಾಯಂದಿರ ಮರಣಗಳನ್ನು ಹೊಂದಿರುವ ಅಗ್ರ ಮೂರು ದೇಶಗಳು ಭಾರತ, ಕಾಂಗೋ (19,000), ಮತ್ತು ಪಾಕಿಸ್ತಾನ (11,000). ವಿಶ್ವಾದ್ಯಂತ ತಾಯಂದಿರ ಮರಣದಲ್ಲಿ ಭಾರತ ಮತ್ತು ಕಾಂಗೋ ಶೇ. 7.2 ರಷ್ಟಿದ್ದರೆ, ಪಾಕಿಸ್ತಾನ ಶೇ. 4.1ರಷ್ಟಿದೆ.
ಭಾರತದಂತೆಯೇ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ 2023ರಲ್ಲಿ 1,400 ತಾಯಂದಿರ ಸಾವುಗಳು ದಾಖಲಾಗಿದೆ ಎಂದು ಅದು ಹೇಳಿದೆ.