Sunday, June 16, 2024

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ: 2 ನೇ ದಿನದ ವಿವರ

ಚಾಮರಾಜನಗರ: ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಯ ಎರಡನೇ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಿಂದ ಆರಂಭಗೊಂಡಿದೆ.

ಇಂದಿನ ಯಾತ್ರೆ ಕುರಿತು ರಾಜ್ಯ ಕಾಂಗ್ರೆಸ್‌ ನೀಡಿರುವ ಮಾಹಿತಿ ಪ್ರಕಾರ, ಭಾರತ ಐಕ್ಯತಾ ಯಾತ್ರೆಯು 2ನೇ ದಿನ ಗುಂಡ್ಲುಪೇಟೆಯ ತೊಂಡವಾಡಿ ಗೇಟ್‌ನಿಂದ ಆರಂಭಗೊಂಡು ಬೆಳಗ್ಗೆ 11 ಗಂಟೆಗೆ ಕಳಲೆ ಗೇಟ್‌ ಸರ್ವೋ ಮೋಟಾರ್ಸ್‌ ಹತ್ತಿರ ಬೆಳಗಿನ ವಿರಾಮ ತೆಗೆದುಕೊಳ್ಳಲಿದೆ. ಸಂಜೆ 4 ಗಂಟೆಗೆ ಕಳಲೆ ಗೇಟ್‌ನಿಂದ ಪಾದಯಾತ್ರೆ ಪುನರಾರಂಭಗೊಳ್ಳಲಿದ್ದು, ನಂತರ 7 ಗಂಟೆಗೆ ಸಂಜೆ ಚಿಕ್ಕಯ್ಯನ ಛತ್ರ ಗೇಟ್‌ ಬಳಿ ವಿರಾಮವನ್ನುತೆಗೆದುಕೊಳ್ಳಲಿದೆ. ಹೀಗಾಗಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮದ ಎಂಐಟಿ ಕಾಲೇಜ್‌ ಎದುರು ರಾತ್ರಿ ವಾಸ್ತವ್ಯ ಹೂಡಲಿದೆ ಎಂದು ತಿಳಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಭಾರತ ಐಕ್ಯತಾ ಯಾತ್ರೆಯ ಎರಡನೇ ದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿ ಗ್ರಾಮದಿಂದ ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದು, ಪಾದಯಾತ್ರೆ ಮೈಸೂರು ಜಿಲ್ಲೆಯ ಗಡಿ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಮಂದಿ ಅದ್ದೂರಿ ಸ್ವಾಗತ ಕೋರಿದರು. ವಿವಿಧ ಕಲಾ ತಂಡಗಳು ಪಾದಯಾತ್ರೆಯ ಮೆರುಗು ಹೆಚ್ಚಿಸಿದ್ದವು ಎಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು