Monday, August 18, 2025

ಸತ್ಯ | ನ್ಯಾಯ |ಧರ್ಮ

ಭಾರತ-ಅಮೆರಿಕ ವಾಣಿಜ್ಯ ಮಾತುಕತೆ ಮುಂದೂಡಿಕೆ

ದೆಹಲಿ: ವಾಣಿಜ್ಯ ಮಾತುಕತೆಗಾಗಿ ಈ ತಿಂಗಳ ಕೊನೆಯಲ್ಲಿ ಅಮೆರಿಕದ ಪ್ರತಿನಿಧಿಗಳು ನವದೆಹಲಿಗೆ ಬರಬೇಕಿತ್ತು, ಆದರೆ ಆ ಭೇಟಿಯನ್ನು ಮುಂದೂಡಲಾಗಿದೆ. ಎನ್‌ಡಿಟಿವಿ ಪ್ರಾಫಿಟ್ ವರದಿಯ ಪ್ರಕಾರ, ಈ ತಿಂಗಳ 25-28ರ ನಡುವೆ ಅಮೆರಿಕದ ವಾಣಿಜ್ಯ ಪ್ರತಿನಿಧಿಗಳು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ, ಈ ಭೇಟಿಯನ್ನು ಮುಂದೂಡಲಾಗಿದೆ.

ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಶೇ. 50ರಷ್ಟು ಪ್ರತೀಕಾರದ ಸುಂಕಗಳು ಈ ತಿಂಗಳ 27ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಭಾರತದ ರಫ್ತುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿದ್ದ ಟ್ರಂಪ್, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಶೇ. 25ರಷ್ಟು ದಂಡದ ಸುಂಕ ವಿಧಿಸಿದ್ದರು.

ವಾಣಿಜ್ಯ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಿರುವ ಎರಡೂ ದೇಶಗಳ ಅಧಿಕಾರಿಗಳು ಪರಸ್ಪರ ಸಮಾಲೋಚನೆ ನಡೆಸುತ್ತಿದ್ದರೂ, ಮಾತುಕತೆಯ ಹೊಸ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page