ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಸಮಗ್ರ ಜಾತಿ ಗಣತಿಗೆ ಚಾಲನೆ ನೀಡಿದ ಆಂಧ್ರಪ್ರದೇಶ ಸರ್ಕಾರ

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಸಮಗ್ರ ಜಾತಿ ಗಣತಿಗೆ ಚಾಲನೆ ನೀಡಿದ ಆಂಧ್ರಪ್ರದೇಶ ಸರ್ಕಾರ

ಕರ್ನಾಟಕದಲ್ಲಿ ಸರ್ಕಾರವು ಜಾತಿಗಣತಿಯ ಕುರಿತು ಮೀನಮೇಷ ಎಣಿಸುತ್ತಿರುವಾಗಲೇ ಆಂಧ್ರಪ್ರದೇಶ ಸರ್ಕಾರವು ಶುಕ್ರವಾರ ತನ್ನ ಸಮಗ್ರ ಜಾತಿ ಗಣತಿಯನ್ನು ಆರಂಭಿಸಿದದೆ. ಈ ಮೂಲಕ ರಾಜ್ಯದ ಎಲ್ಲಾ ಸಮುದಾಯಗಳ ಜನಸಂಖ್ಯೆಯನ್ನು ಎಣಿಸಲು ಅದು ಕ್ರಮ ಕೈಗೊಂಡಿದೆ. ಕಾಂಗ್ರೆಸ್‌ ರಾಷ್ಟ್ರ ವ್ಯಾಪಿ ತನ್ನ ಪ್ರಣಾಳಿಕೆಯಲ್ಲಿ ಜಾತಿ ಗಣತಿಯನ್ನು ಸೇರಿಸುವ ಎಣೆಕೆಯಲ್ಲಿರುವುದರಿಂದಾಗಿ YSRP ಒಂದು ಹೆಜ್ಜೆ ಮುಂದೆ ಹೋಗಿ ಈಗಲೇ ಜಾತಿ ಗಣತಿಯನ್ನು ಘೋಷಿಸಿದೆ.

ಜನವರಿ 19ರಿಂದ 10 ದಿನಗಳ ಕಾಲದ ಜನಗಣತಿಯನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (ಐ ಮತ್ತು ಪಿಆರ್) ಸಚಿವ ಸಿ ಶ್ರೀನಿವಾಸ ವೇಣುಗೋಪಾಲ ಕೃಷ್ಣ ತಿಳಿಸಿದ್ದಾರೆ.

“ಸಮಗ್ರ ಜಾತಿ ಗಣತಿಯನ್ನು ಒಂದು ಹಂತದಲ್ಲಿ 10 ದಿನಗಳವರೆಗೆ ನಿಗದಿಪಡಿಸಲಾಗಿದೆ ಮತ್ತು ಅಗತ್ಯವಿದ್ದರೆ, ಅದನ್ನು ನಾಲ್ಕು ಅಥವಾ ಐದು ದಿನಗಳವರೆಗೆ ವಿಸ್ತರಿಸಲಾಗುವುದು” ಎಂದು ಕೃಷ್ಣ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸ್ವಯಂಸೇವಕರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಜಾತಿ ವಿವರಗಳನ್ನು ಸಂಗ್ರಹಿಸಲಿದ್ದು, ಅದನ್ನು ಗ್ರಾಮ ಪಂಚಾಯತಿಗೆ ತಿಳಿಸಲಾಗುವುದು ಎಂದು ಸಚಿವರು ತಿಳಿಸಿದರು. ಬಿಹಾರದ ನಂತರ ಜಾತಿ ಗಣತಿಯನ್ನು ಕೈಗೊಂಡ ಎರಡನೇ ರಾಜ್ಯ ಆಂಧ್ರಪ್ರದೇಶವಾಗಿದೆ.

ರಾಜ್ಯಾದ್ಯಂತ ಗ್ರಾಮ ಪಂಚಾಯತಿಯ ಅಧಿಕಾರಿಗಳು ಸ್ವಯಂಸೇವಕರು ಸಂಗ್ರಹಿಸಿದ ಮಾಹಿತಿಯ ನಿಖರತೆಯನ್ನು ಪರಿಶೀಲಿಸುತ್ತಾರೆ ಮತ್ತು ಅದನ್ನು ಅಂತಿಮ ದಾಖಲೆ ಮಾಡುವ ಮೊದಲು ಅಗತ್ಯವಿದ್ದಲ್ಲಿ ಮಾಹಿತಿಗಳನ್ನು ಸರಿಪಡಿಸುತ್ತಾರೆ ಎಂದು ಕೃಷ್ಣ ಹೇಳಿದರು. ಪ್ರತಿ ಸ್ವಯಂಸೇವಕರು 50 ಮನೆಗಳಿಗೆ ಭೇಟಿ ನೀಡಲಿದ್ದಾರೆ.

ಫೆಬ್ರವರಿ 15 ಅಥವಾ ಆಸುಪಾಸಿನಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸುವ ಮೊದಲು ಸಂಪೂರ್ಣ ಜನಗಣತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

YSRCP ಸರ್ಕಾರವು ಜಾತಿ ಗಣತಿಯನ್ನು ತನ್ನ ಪ್ರಮುಖ ಗುರಿಯಾಗಿ ನಿಗದಿಪಡಿಸಿದೆ ಮತ್ತು ಗಣತಿಯಿಂದ ಜನಜೀವನವನ್ನು ಸುಧಾರಿಸಲು ಸಹಾಯವಾಗುತ್ತದೆ ಎಂದು ಅದು ಹೇಳಿದೆ.

ಅನೇಕ ಜಾತಿಗಳಿಗೆ ಇದುವರೆಗೂ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಲು ಜನಗಣತಿ ಸಹಾಯ ಮಾಡುತ್ತದೆ ಎಂದು ಕೃಷ್ಣ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕೃಷ್ಣ, ಸ್ವಾತಂತ್ರ್ಯಾ ನಂತರ ಇದುವರೆಗೂ ಭಾರತದಲ್ಲಿ ಜಾತಿ ಗಣತಿ ನಡೆದಿಲ್ಲ, ಸರ್ಕಾರ ಕೇವಲ ಜನಗಣತಿ ನಡೆಸಿದೆ ಎಂದು ತಿಳಿಸಿದರು.

ಈ ಗಣತಿಯ ಭಾಗವಾಗಿ, ಆಂಧ್ರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಜಾತಿ ಪ್ರತಿನಿಧಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.

ಜಾತಿ ಗಣತಿಯನ್ನು ನ್ಯಾಯಯುತವಾಗಿ ಮತ್ತು ಸಮಗ್ರವಾಗಿ ನಡೆಸುವ ಗುರಿಯನ್ನು ಹೊಂದಿರುವ ಈ ರಾಜ್ಯವು ತನ್ನ ಗಣತಿ ಕಾರ್ಯವನ್ನು ದೇಶಕ್ಕೆ ಮಾದರಿಯಾಗಿ ನೀಡುವ ಹಂಬಲವನ್ನು ಹೊಂದಿದೆ.

ಆರಂಭದಲ್ಲಿ ಜಾತಿ ಗಣತಿಯಲ್ಲಿ 139 ಹಿಂದುಳಿದ ವರ್ಗಗಳ (BC) ಸಮುದಾಯಗಳನ್ನು ಮಾತ್ರವೇ ಒಳಗೊಳ್ಳಲು ಉದ್ದೇಶಿಸಲಾಗಿತ್ತು. ನಂತರ ಅದರ ವ್ಯಾಪ್ತಿಯನ್ನು ಆಂಧ್ರಪ್ರದೇಶದ ಎಲ್ಲಾ ಜಾತಿಗಳಿಗೂ ಒಳಪಡಿಸಲಾಗಿದೆ.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು