ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಗುಂಡಿನ ದಾಳಿ, ಓರ್ವ ಸೈನಿಕ ಹುತಾತ್ಮ
P
ಲಿಂಕ್ ನಕಲಿಸಲಾಗಿದೆ ✓
ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಜಮ್ಮು ನಗರದ ಸುಂಜ್ವಾನ್ ಮಿಲಿಟರಿ ನಿಲ್ದಾಣದಲ್ಲಿ ಸೋಮವಾರ ಭಯೋತ್ಪಾದಕರು ತೀವ್ರ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿರುವ ಬಗ್ಗೆ ಸೇನೆ ಅಧಿಕೃತ ಮಾಹಿತಿ ತಿಳಿಸಿದೆ.
ದಾಳಿಯಲ್ಲಿಸೈನಿಕರೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಮೇಲಾಗಿರುವ ಗಂಭೀರ ಗಾಯದ ಪರಿಣಾಮ ಆಸ್ಪತ್ರೆಯಲ್ಲೇ ಉಸಿರು ನಿಲ್ಲಿಸಿದ್ದಾರೆ.
ಈ ಪ್ರದೇಶದ ಅತಿದೊಡ್ಡ ಸೇನಾ ನೆಲೆಗಳಲ್ಲಿ ಒಂದಾದ ಸುಂಜ್ವಾನ್ ಸೇನಾ ನೆಲೆಯನ್ನ ಚಲನೆಯನ್ನ ನಿರ್ಬಂಧಿಸಲು ಮುಚ್ಚಲಾಯಿತು ಮತ್ತು ಶೋಧ ಕಾರ್ಯಾಚರಣೆಯನ್ನ ಕೈಗೊಳ್ಳಲು ವಿಶೇಷ ಕಾರ್ಯಾಚರಣೆ ಗುಂಪನ್ನ ನಿಯೋಜಿಸಲಾಯಿತು.
P
Peepal Media Desk
Peepal Media · ದೇಶ ವಿಭಾಗ
ಹಿಂದಿನ ಸುದ್ದಿ