ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಘಟನೆ ಖಂಡಿಸಿಯೂ ಸರ್ಕಾರಗಳ ವಿರುದ್ಧ ತುಟಿ ಬಿಚ್ಚದ ಸೆಲೆಬ್ರಿಟಿಗಳು

PPeepal Media Desk

Peepal Media Desk • ದೇಶ

• 1 ನಿಮಿಷದ ಓದು

ಘಟನೆ ಖಂಡಿಸಿಯೂ ಸರ್ಕಾರಗಳ ವಿರುದ್ಧ ತುಟಿ ಬಿಚ್ಚದ ಸೆಲೆಬ್ರಿಟಿಗಳು

ಮಣಿಪುರದ ವಿಡಿಯೋ ʼವೈರಲ್‌ʼ ಆಗುತ್ತಿದ್ದಂತೆ ಎಲ್ಲೆಡೆಯಿಂದ ಕರುಣಾ ರಸ ಉಕ್ಕಿ ಹರಿದು ಬರುತ್ತಿದೆ. ಹೀಗೆ ಈ ಕುರಿತು ʼಅಯ್ಯೋ ಪಾಪʼ, ʼಇದು ತಲೆ ತಗ್ಗಿಸುವ ಘಟನೆʼ ಇತ್ಯಾದಿ ತಲೆಬರಹಗಳೊಡನೆ ಸೆಲೆಬ್ರಿಟಿಗಳ ಟ್ವೀಟ್‌, ಇನ್ಸ್ಟಾ ಪೋಸ್ಟುಗಳ ಮಹಾಪೂರವೂ ಹರಿದಿದೆ.

ಆದರೆ ಈ ಘಟನೆಗೆ ಜನಾಂಗೀಯ ಗುಂಪುಗಳು ಎಷ್ಟು ಕಾರಣವೋ ಪ್ರಭುತ್ವಗಳೂ ಅಷ್ಟೇ ಕಾರಣ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಎರಡೂ ತಿಂಗಳಿಗೂ ಹೆಚ್ಚು ಕಾಲದಿಂದ ಮಣಿಪುರದಲ್ಲಿ ಇಂಟರ್ನೆಟ್‌ ಇಲ್ಲ. ಅಲ್ಲಿ ಏನಾಗುತ್ತಿದೆಯೆನ್ನುವುದು ಹೊರ ಜಗತ್ತಿಗೆ ತಿಳಿಯದಿರಲು ಬೇಕಾಗಿರುವುದೆಲ್ಲವನ್ನೂ ಸರ್ಕಾರಗಳು ಮಾಡಿವೆ. ಜನರ ಕೈಗೆ ಅಪಾಯಕಾರಿ ಆಯುಧಗಳಾದ AK ಸರಣಿಯ ರೈಫಲ್‌ಗಳು, ಗುಂಡುಗಳು, ಪಿಸ್ತೂಲುಗಳು ಹೇಗೆ ತಲುಪಿದವು ಎನ್ನುವ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಇದು ಆಡಳಿತ ವೈಫಲ್ಯವಲ್ಲದಿದ್ದರೆ ಇನ್ಯಾವುದು?

ಇಂದು ಮಣಿಪುರ ಘಟನೆಯ ಕುರಿತು ಅನುಕಂಪದಿಂದ ಬರೆಯುತ್ತಿರುವ ಸೆಲೆಬ್ರಿಟಿಗಳಲ್ಲಿ ಬಹುತೇಕರು ಈ ಹಿಂದೆ UPA ಸರ್ಕಾರವಿದ್ದ ಸಮಯದಲ್ಲಿ ರಾಜಕೀಯ ಕಾರ್ಯಕರ್ತರಂತೆ ಹೇಳಿಕೆಗಳನ್ನು ಕೊಡುತ್ತಿದ್ದವರೇ ಆಗಿದ್ದಾರೆ. ಅಕ್ಷಯ್‌ ಕುಮಾರ್‌, ಅಮಿತಾಭ್‌ ಬಚ್ಚನ್‌ ಅವರುಗಳು ಇಂದು ಸರ್ಕಾರದ ವಿರುದ್ಧ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ. ಆದರೆ ಈ ಹಿಂದೆ ಅವರು ಸರ್ಕಾರದ ವಿರುದ್ಧ ಟೀಕಿಸಿ ಬರೆದಿದ್ದರು. ಇವರು ಹೀಗೆ ಟೀಕಿಸಿ ಬರೆಯದಿರುವುದರ ಹಿಂದೆ ಬಹುಸಂಖ್ಯಾತ ಬಲಪಂಥೀಯ ವಾದಿ ಅಭಿಮಾನಿಗಳನ್ನು ಕಳೆದುಕೊಳ್ಳುವ ಭಯವಿದೆ. ಮತ್ತು ರಾಜಕಾರಣಿಗಳಿರುವಂತೆ ಸರ್ಕಾರಿ ಸಂಸ್ಥೆಗಳಾದ IT, ED ಯಂತಹ ಸಂಸ್ಥೆಗಳ ಭಯವೂ ಇದೆ.

ನಿನ್ನೆ ಇದ್ದಕ್ಕಿದ್ದಂತೆ ಕೆಲವು ಬಾಲಿವುಡ್‌ ಸೆಲೆಬ್ರೆಟಿಗಳು ಜೀವ ತಳೆದು ಈಗ ʼಟ್ರೆಂಡ್‌ʼ ಆಗಿರುವ ಮಣಿಪುರ ವಿಷಯದ ಕುರಿತು ಸೆಲೆಕ್ಟಿವ್‌ ಆಗಿ ಮಾತನಾಡಿ, ಯಾರನ್ನೂ ದೂರದೆ ಈ ವಿಷಯದಲ್ಲೂ ಒಂದಷ್ಟು ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಸಾಧ್ಯವಾಗುವಂತೆ ಟ್ವೀಟ್‌, ಇನ್ಸ್ಟಾ ಪೋಸ್ಟುಗಳನ್ನು ಮಾಡಿದ್ದಾರೆ. ಸಹಜವಾಗಿಯೇ ಇದು ಮಣಿಪುರ ಮೂಲದ ಜನರನ್ನು ಕರಳಿಸಿದೆ.

https://www.instagram.com/p/Ctyvy9sNxaF/?utm_source=ig_web_copy_link&igshid=MzRlODBiNWFlZA==

ಬಾಲಿವುಡ್‌ ನಟರ ಸೋಷಿಯಲ್‌ ಮೀಡಿಯಾ ಪೋಸ್ಟುಗಳ ಕುರಿತು ಪ್ರತಿಕ್ರಿಯಿಸಿರುವ ಮಣಿಪುರಿ ನಟಿ, ಮಾಡೆಲ್‌ ಲಿನ್‌ ಲೈಶ್ರಾಮ್‌ “ನಾವು ಇಷ್ಟು ದಿನದಿಂದ ಈ ಕುರಿತು ಕೂಗುತ್ತಿದ್ದರೂ ನಿಮಗೆ ನಮ್ಮ ದನಿ ಕೇಳಲಿಲ್ಲ. ಈಗ ಇದು ಸುದ್ದಿಯಲ್ಲಿರುವುದರಿಂದಾಗಿ ಜನರ ಗಮನವನ್ನು ಸೆಳೆಯುವ ಸಲುವಾಗಿ ಈಗ ಪೋಸ್ಟ್‌ ಮಾಡುತ್ತಿದ್ದೀರ?” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮಣಿಪುರದಲ್ಲಿ ಜನಸಮೂಹವೊಂದು ರಸ್ತೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಭಯಾನಕ ಮತ್ತು ಆಘಾತಕಾರಿ ವಿಡಿಯೋ ಹೊರಬಿದ್ದ ನಂತರ ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಬಾಲಿವುಡ್ ನಟ ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ, ರಿತೇಶ್ ದೇಶ್‌ಮುಖ್, ಕರೀನಾ ಕಪೂರ್ ಖಾನ್, ಸಂಜಯ್ ದತ್, ವಿವೇಕ್ ಅಗ್ನಿಹೋತ್ರಿ ಮತ್ತು ಇತರರು ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಇದನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ನಡೆದ ಅಮಾನವೀಯ ಘಟನೆ ಇದಾಗಿದೆ. ಇಬ್ಬರು ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಲಾಗಿತ್ತು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಿಷಯಗಳು: #peepal #peepalmedia
PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು