ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಆಮದು ಸುಂಕ ಏಕಾಏಕಿ ಶೇ. 6ರಿಂದ ಶೇ. 15ಕ್ಕೆ ಏರಿಕೆ – ಕೈಗೆಟುಕದಷ್ಟು ಜಿಗಿದ ಚಿನ್ನದ ದರ, ಕೇಂದ್ರ ಸರ್ಕಾರದಿಂದ ಮಧ್ಯಮ ವರ್ಗಕ್ಕೆ ಗಾಯದ ಮೇಲೆ ಬರೆ

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಆಮದು ಸುಂಕ ಏಕಾಏಕಿ ಶೇ. 6ರಿಂದ ಶೇ. 15ಕ್ಕೆ ಏರಿಕೆ – ಕೈಗೆಟುಕದಷ್ಟು ಜಿಗಿದ ಚಿನ್ನದ ದರ, ಕೇಂದ್ರ ಸರ್ಕಾರದಿಂದ ಮಧ್ಯಮ ವರ್ಗಕ್ಕೆ ಗಾಯದ ಮೇಲೆ ಬರೆ

ಕೇಂದ್ರ ಸರ್ಕಾರವು ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ಶೇ. 6ರಿಂದ ಶೇ. 15ಕ್ಕೆ.. ಅಂದರೆ ಒಂದೇ ಏಟಿಗೆ ಬರೋಬ್ಬರಿ 9 ಅಂಶ ಹೆಚ್ಚಿಸಿದ ಪರಿಣಾಮ, ಬುಧವಾರ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಚಿನ್ನದ ಜೂನ್ ಫ್ಯೂಚರ್ಸ್ ಬೆಲೆ 10 ಗ್ರಾಂಗೆ ₹1,62,648ಕ್ಕೆ ತಲುಪಿ 6% ‘ಅಪ್ಪರ್ ಸರ್ಕ್ಯೂಟ್’ ದಾಖಲಿಸಿದೆ. ಬೆಳ್ಳಿ ಬೆಲೆಯೂ ಪ್ರತಿ ಕೆಜಿಗೆ ₹2,95,805ಕ್ಕೆ ಏರಿ ₹3 ಲಕ್ಷದ ಹೊಸ್ತಿಲಲ್ಲಿ ನಿಂತಿದೆ.

ಸರ್ಕಾರದ “ಪರಿಹಾರ”ವೇ ಸಮಸ್ಯೆಯಾಯಿತು
ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಅನಗತ್ಯ ಆಮದು ತಡೆಯಲು ತಾನು ಈ ನಿರ್ಧಾರ ಕೈಗೊಂಡಿದ್ದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಈ ತೆರಿಗೆ ಹೊರೆ ನೇರವಾಗಿ ಅಂತಿಮ ಗ್ರಾಹಕನ ಮೇಲೆ ವರ್ಗಾವಣೆಯಾಗಿ ಬೆಲೆ ಇನ್ನಷ್ಟು ಗಗನಕ್ಕೇರಿದೆ ಎಂದು ಉದ್ಯಮ ವಲಯ ಆರೋಪಿಸಿದೆ.

“ಸರ್ಕಾರ ಒಂದೆಡೆ ಬೆಲೆ ನಿಯಂತ್ರಣದ ಮಾತನಾಡುತ್ತದೆ, ಇನ್ನೊಂದೆಡೆ ಆಮದು ಸುಂಕ ಹೆಚ್ಚಿಸುವ ಮೂಲಕ ಬೆಲೆ ಏರಿಕೆಗೆ ತಾನೇ ನೀರೆರೆಯುತ್ತಿದೆ. ಇದು ಆರ್ಥಿಕ ನೀತಿ ನಿರೂಪಣೆಯ ಅಸಂಗತತೆಯ ಸ್ಪಷ್ಟ ಉದಾಹರಣೆ” ಎಂದು ಆರ್ಥಿಕ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮದುವೆ ಮನೆಗಳಲ್ಲಿ ಮೂಗಿನ ಮೇಲೆ ಬೆರಳು
ಬೆಲೆ ಏರಿಕೆಯ ನೇರ ಪೆಟ್ಟು ಬಿದ್ದಿರುವುದು ಮಧ್ಯಮ ವರ್ಗ ಮತ್ತು ಮದುವೆ ಸೀಸನ್‌ನಲ್ಲಿ ಚಿನ್ನಾಭರಣ ಖರೀದಿಸಲು ಮುಂದಾದ ಕುಟುಂಬಗಳ ಮೇಲೆ. ಚಿನ್ನ ಖರೀದಿ ಮಾರ್ಚ್ ತ್ರೈಮಾಸಿಕದಲ್ಲೇ ದಾಖಲೆ ಮಟ್ಟ ತಲುಪಿತ್ತು; ಗೋಲ್ಡ್ ಇಟಿಎಫ್ ಹೂಡಿಕೆ ಶೇ. 186ರಷ್ಟು ಏರಿರುವುದೇ ಬೇಡಿಕೆ ಎಷ್ಟು ತೀವ್ರವಾಗಿದೆ ಎಂಬುದನ್ನು ತೋರಿಸುತ್ತದೆ. ಈ ಬೇಡಿಕೆ ತಗ್ಗಿಸಲು ಸರ್ಕಾರ ಪ್ರಯತ್ನಿಸಿದರೂ, ಆ ನಿಟ್ಟಿನಲ್ಲಿ ಯಾವುದೇ ಪ್ರಭಾವ ಕಂಡುಬಂದಿಲ್ಲ.

ಅಂತಾರಾಷ್ಟ್ರೀಯ ಅಸ್ಥಿರತೆ — ಸರ್ಕಾರದ ಗ್ರಹಿಕೆ ಎಲ್ಲಿತ್ತು?
ಅಮೆರಿಕ-ಇರಾನ್ ಉದ್ವಿಗ್ನತೆ, ಹೊರ್ಮುಜ್ ಜಲಸಂಧಿ ಬಿಕ್ಕಟ್ಟು, ಮತ್ತು ಅಮೆರಿಕ ಫೆಡರಲ್ ರಿಸರ್ವ್‌ನಿಂದ ಬಡ್ಡಿ ದರ ಕಡಿತ ಸಾಧ್ಯವಿಲ್ಲ ಎಂಬ ಆತಂಕ.. ಈ ಜಾಗತಿಕ ಅಂಶಗಳು ಚಿನ್ನದ ಬೆಲೆ ಏರಿಕೆಗೆ ಈಗಾಗಲೇ ವೇದಿಕೆ ಸಿದ್ಧಪಡಿಸಿದ್ದವು. ಇಂಥ ಸಂದರ್ಭದಲ್ಲಿ ಆಮದು ಸುಂಕ ಏರಿಕೆ ಎಣ್ಣೆಯ ಮೇಲೆ ನೀರು ಹೊಯ್ದಂತಾಯಿತು ಎಂದು ತಜ್ಞರು ಟೀಕಿಸಿದ್ದಾರೆ.

ಮುಂದೇನು?
ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ₹1.68 ರಿಂದ ₹1.70 ಲಕ್ಷಕ್ಕೆ, ಬೆಳ್ಳಿ ₹3 ಲಕ್ಷದ ಗಡಿ ಮುಟ್ಟಬಹುದು. ₹1,59,000–₹1,60,000 ರ ನಡುವೆ ಬೆಂಬಲ ಮಟ್ಟ ಮತ್ತು ₹1,65,000–₹1,67,000 ರ ನಡುವೆ ಪ್ರತಿರೋಧ ಮಟ್ಟ ಕಾಣುತ್ತಿದ್ದು, ಬೆಲೆ ಇಳಿದಾಗ ಖರೀದಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು