ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಡಿಸೆಂಬರ್‌, ಚಳಿ ಮತ್ತು ನೀಲು…

PPeepal Media Desk

Peepal Media Desk • ಅಂಕಣ, ದೇಶ, ವಿಶೇಷ

• 1 ನಿಮಿಷದ ಓದು

ಡಿಸೆಂಬರ್‌, ಚಳಿ ಮತ್ತು ನೀಲು…

‘ಡಿಸೆಂಬರಿನ ಚಳಿಯಲ್ಲಿ ನಮ್ಮಂತೆಯೇ ಲಂಕೇಶ್ ಮೇಷ್ಟ್ರಲ್ಲೂ ಹೆಚ್ಚು ಪ್ರೇಮ ಜಾಗೃತವಾಗಿರುತಿತ್ತೋ ಏನೋ?! ಮೇಷ್ಟ್ರು, ಪ್ರೇಮದಿಂದ ಮುದಗೊಳ್ಳುವ ಅನೇಕ ನೀಲು  ಪದ್ಯಗಳನ್ನು ಬರೆಯುತ್ತಿದ್ದದ್ದು ಇದೇ ಸೀಸನ್ನಿನಲ್ಲಿ..!!’ ಪಿ ಲಂಕೇಶರ ಆಪ್ತರಲ್ಲಿ ಒಬ್ಬರಾದ ಸಿಎಸ್ ದ್ವಾರಕಾನಾಥ್ ಅವರ ಬರಹದಲ್ಲಿ

ಡಿಸೆಂಬರ್ ಬಂತೆಂದರೆ ಮೇಷ್ಟ್ರು(ಲಂಕೇಶ್) ನೆನಪಾಗುತ್ತಾರೆ, ಡಿಸೆಂಬರಿನ ಚಳಿ ಅವರಿಗಿಷ್ಟ, ಸಂಜೆಯಾದರೆ ಸಾಕು ನಮ್ಮಂತ ಪ್ರೀತಿಪಾತ್ರರಾದ ಹುಡುಗರು ಸಿಕ್ಕರೆ ಮುದ್ದುಮುದ್ದಾಗಿ ನಗುತ್ತಾ “ಬಾರಯ್ಯ ವಿಸ್ಕಿ ಕುಡಿ..” ಎಂದು ಆಪ್ತವಾಗಿ ಕೂರಿಸಿಕೊಂಡು, ಸಿಗರೇಟ್ ಸೇದುತ್ತಾ, ಸುರಳಿ ಸುರಳಿಯಾಗಿ  ಹೊಗೆಬಿಡುತ್ತಾ, ಕೊರೆಯುವ ಚಳಿಯಲ್ಲೂ ಐಸ್ ಕ್ಯೂಬ್ಸ್ ಹಾಕಿಕೊಂಡ ಬೆಚ್ಚನೆಯ ವಿಸ್ಕಿ ಗುಟುಕರಿಸುತ್ತಾ, ಬಣ್ಣಬಣ್ಣದ ಶ್ವೆಟರ್ ತೊಟ್ಟು ಜಗತ್ತಿನ‌ ಅನೇಕ ವಿಷಯಗಳನ್ನು ಜೋವಿಯಲ್ ಆಗಿ ಮಾತಾಡುತಿದ್ದರು. ಒಳ್ಳೇ ಮೂಡ್ ನಲ್ಲಿದ್ದರಂತೂ ಮುಗೀತು ಹೆಮಿಂಗ್ವೇ, ಬೋದಿಲೇರ್,  ಡಾಂಟೇ, ಮಾರ್ಕ್ವೆಸ್ ಗಳಂತವರ ಸಾಹಿತ್ಯ ಮತ್ತು ಅವರ ಜೀವನದಲ್ಲಿನ‌ ಅನೇಕ ಖಾಸಗಿ ಘಟನೆಗಳನ್ನು  ತೀರಾ ಇಂಟೆರೆಸ್ಟಿಂಗ್ ಆಗಿ, ಅವರೂ ಎಂಜಾಯ್ ಮಾಡುತ್ತಾ ಹೇಳುತಿದ್ದರು. ನಮ್ಮಂತ ಗೂಬೆಗಳಿಗೆ ಅದರ ಮೌಲ್ಯ ಆಗ ಗೊತ್ತಿರಲಿಲ್ಲ! ನಾನಂತೂ ಆಗ ಒಂದು ಸಣ್ಣ ಟಿಪ್ಪಣಿಯೊಂದನ್ನೂ ಮಾಡಿಕೊಂಡಿಲ್ಲ! ಇಂತಹ ಅನೇಕ ಸಂಜೆಗಳನ್ನು ಆ ಕ್ಷಣಕ್ಕೆ ಅನುಭವಿಸಿ ಮರೆತುಬಿಡುತ್ತಿದ್ದೆವು. ಯಾಕೆಂದರೆ ಮೇಷ್ಟ್ರಿಗೂ ಸಾವು ಬರುತ್ತದೆಂದು ನಾನಂತೂ ಎಂದೂ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ!!

         ಇಂತದ್ದೇ ಡಿಸೆಂಬರಿನ ಚಳಿಯಲ್ಲಿ ನಮ್ಮಂತೆಯೇ ಅವರಲ್ಲೂ ಹೆಚ್ಚು ಪ್ರೇಮ ಜಾಗೃತವಾಗಿರುತಿತ್ತೋ ಏನೋ?! ಮೇಷ್ಟ್ರು, ಪ್ರೇಮದಿಂದ ಮುದಗೊಳ್ಳುವ ಅನೇಕ ನೀಲು  ಪದ್ಯಗಳನ್ನು ಬರೆಯುತ್ತಿದ್ದದ್ದು ಇದೇ ಸೀಸನ್ನಿನಲ್ಲಿ..!!

        ಹೀಗೇ.. ಇದೇ ಮನಸ್ಥಿತಿಯಲ್ಲಿ ಕುಂತು ಯೋಚಿಸುತಿದ್ದಾಗ ಹಿಂದಿನ ನೆನಪಿನ ಗುಂಗಿಗೆ ಬಿದ್ದೆ!, ಮೇಷ್ಟ್ರೇ ಖುದ್ದು ಬಂದು ಮತ್ತೇ ನೀಲು ಕವನಗಳನ್ನು ಓದಿಸತೊಡಗಿದರು!?

         ಡಿಸೆಂಬರ್ ಚಳಿ, ಪ್ರೇಮ ವಿರಹಗಳ ಬಗೆಗಿನ ಒಂದಷ್ಟು ನೀಲು ಪದ್ಯಗಳನ್ನು ಓದಿದಂತೆಲ್ಲಾ ಹಿಂದಿನ ಒಂದಷ್ಟು ರೊಮ್ಯಾಂಟಿಕ್ ದಿನಗಳು ನೆನಪಾಗಿ ಇನ್ನಷ್ಟು ಕನಸುಗಳು ಗರಿಗೆದರಿದವು..!

          ನಿಮಗಾಗಿ ಒಂದಷ್ಟು ನೀಲು ಪದ್ಯಗಳನ್ನು ಹೆಕ್ಕಿ ಇಲ್ಲಿ ಹಂಚಿಕೊಂಡಿದ್ದೇನೆ… ಓದಿ, ಡಿಸೆಂಬರ್ ಚಳಿಯನ್ನು ಅನುಭವಿಸುತ್ತಾ, ನಿಮ್ಮಲ್ಲೂ ಕನಸುಗಳಿದ್ದರೆ ಅವಕ್ಕೆ ರೆಕ್ಕೆ ಜೋಡಿಸುತ್ತಾ ಎಂಜಾಯ್ ಮಾಡಿ..!!
                      – ಸಿ.ಎಸ್.ದ್ವಾರಕಾನಾಥ್

ಡಿಸೆಂಬರ್‌,
ಚಳಿ ಮತ್ತು ನೀಲು…
————————–

ಡಿಸೆಂಬರ್‌ ಬಂತೆಂದರೆ
ಬೆಂಗಳೂರ ಮೋಹಿನಿಯರಿಗೆ
ಗಂಡುಗಳ
ಉಣ್ಣೆ ಉಡುಪು
ಪ್ರೇಮಗೀತೆಯಂತೆ
ಕಾಣುತ್ತದೆ

—–

ಈ ಚಳಿಯ ಎದುರಿಸಲು
ಪಶುಪಕ್ಷಿಗಳಿಗೆ
ರೋಮ, ರೆಕ್ಕೆ ಕೊಟ್ಟ ದೇವರು
ಮನುಷ್ಯನಿಗೆ
ಪ್ರೇಮವನ್ನಾದರೂ ಕೊಡದಿದ್ದರೆ
ಅವನನ್ನು
ಹೇಗೆ ದೇವರೆನ್ನುವುದು?

——-

ಕೊರೆವ ಚಳಿಯಲ್ಲಿ ಬಡ ಕಪ್ಪು ಹುಡುಗ
ಲಾಲ್ ಬಾಗ್ ಮರದೊಳಗೆ
ಅವಿತಿದ್ದ ನೋಡಿ
ಕೊಂಬೆಯ ಕಟ್ಟಿರುವೆ
ಅವನ್ನ ಕಚ್ಚಲಾರದೆ ಕಣ್ಣೀರುಗರೆಯಿತು

——-

ಪ್ರೇಮವಿಲ್ಲದ ಸುಬ್ಬು ಬೆಂಗಳೂರ ಚಳಿಯಲ್ಲಿ
ಬ್ರಿಗೇಡ್ ರೋಡಲ್ಲಿ ತಳಕುಹಾಕಿ ನಡೆವ
ಪ್ರೇಮಿಗಳ ಹಿಂದೆ ಬೆಚ್ಚಗೆ ನಡೆದ

——-

‘ಮಂಜು’ ಎಂಬ ನನ್ನ ಬೆಕ್ಕು
ತೊಡೆಯಲ್ಲಿ ಬೆಚ್ಚಗೆ
ಕೂತಿದ್ದಾಗ
ಅದೇಕೋ ಜೀವ ನಚ್ಚಗೆ

———

ಕಳೆದ ಐವತೊಂಬತ್ತು ಚಳಿಗಾಲ
ನಲ್ಲೆಯೊಂದಿಗೆ
ಕೆಂಪು ತೋಟದಲ್ಲಿ ನಡೆಯುತ್ತಿದ್ದ ಮುದುಕ
ಈ ಸಲ ಗೆಳತಿಯಿಲ್ಲದೆ
ಒಬ್ಬಂಟಿ ಕೂತು
ಕಂಬಳಿ ಹೊದ್ದು ಷಟ್ಯಬ್ದಿ ಆಚರಿಸಿದರು

———

ಚಳಿಗೆ ಕನಸುಗಳು ಅಲ್ಲಾಡಿದೊಡನೆ
ಸ್ವೆಟರ್ ಕೊಂಡ ನಮ್ಮ ಕೇರಿಯ ಭಗವತಿ
ತೋಟದ ನಡುವೆ ತುಂಟ ನಗುವ ರಘುಪತಿಯಿಂದ ಬೆಚ್ಚಗಾಗಿ
ಸ್ವೆಟರನ್ನು ಅಟ್ಟಕ್ಕೆ ಎಸೆದು ಕನಸಿದಳು

———

ಮನುಷ್ಯದ್ವೇಷಿ ಶೆಟ್ಟರು ಮೊನ್ನೆ
ಕಡುಚಳಿಯಲ್ಲಿ
ಅರಳಿದ ಕೆಂಪು ಗುಲಾಬಿ ಕಂಡು
ಕರುಣೆಗೊಂಡು ಕಂಬಳಿ ಹೊದಿಸಿದ್ದಾರೆ,
ಲಾಲ್ ಬಾಗ್ ಹೂದೋಟಕ್ಕೆ
ಹೋಗಿ ನೋಡಿ

———

ನಾನು ಬಲ್ಲವಳೊಬ್ಬಳು
ಚಳಿಗೆ
ಕಂಬಳಿ ಕೊಳ್ಳುವ ಬದಲು
ಪ್ರೇಮಿಗಾಗಿ ಹುಡುಕಾಡಿದ್ದು
ಈ ಕವನದ ವಸ್ತು

———-

ಎರಡು ವರ್ಷಗಳ ಹಿಂದೆಯೂ
ಹೀಗೆಯೇ ಚಳಿ
ಬಡವಿಯ ಗುಡಿಸಲಿಂದ
ಪ್ರೇಮದ ನರಲಾಟವಾಗಿ
ಬಂದದ್ದು ನೆನಪಾಗುತ್ತಿದೆ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು