ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ವಿಶ್ವದ ಬಲಿಷ್ಠ ಆರ್ಥಿಕತೆಗಳಲ್ಲೇ ಭಾರತದಲ್ಲಿ ಇಂಧನ ಹೊರೆ ಅತ್ಯಧಿಕ: ಒಂದು ದಿನದ ದುಡಿಮೆಗೆ ಸಿಗುವುದು ಕೇವಲ 8 ಲೀಟರ್ ಪೆಟ್ರೋಲ್!

PPeepal Media

Peepal Media ದೇಶ

• 2 ನಿಮಿಷದ ಓದು

ವಿಶ್ವದ ಬಲಿಷ್ಠ ಆರ್ಥಿಕತೆಗಳಲ್ಲೇ ಭಾರತದಲ್ಲಿ ಇಂಧನ ಹೊರೆ ಅತ್ಯಧಿಕ: ಒಂದು ದಿನದ ದುಡಿಮೆಗೆ ಸಿಗುವುದು ಕೇವಲ 8 ಲೀಟರ್ ಪೆಟ್ರೋಲ್!

ದೆಹಲಿ: ವಿಶ್ವದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬಳಸುವ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಇಂಧನ ದರಗಳ ಹೊರೆ ಅತ್ಯಂತ ಹೆಚ್ಚಾಗಿದೆ ಎಂದು ಜಾಗತಿಕ ಅಂಕಿಅಂಶಗಳ ವೆಬ್‌ಸೈಟ್ ಉಲ್ಲೇಖಿಸಿ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ದೇಶದ ಸರಾಸರಿ ತಲಾವಾರು ಆದಾಯವನ್ನು ಲೆಕ್ಕಹಾಕಿದರೆ, ಒಬ್ಬ ಸಾಮಾನ್ಯ ಭಾರತೀಯ ತನ್ನ ಒಂದು ದಿನದ ಸಂಪೂರ್ಣ ವೇತನದಿಂದ ಕೇವಲ 8 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಮಾತ್ರ ಖರೀದಿಸಲು ಸಾಧ್ಯವಿದೆ. ವಿಶ್ವದ ಹತ್ತು ಅತಿ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶಗಳ ಪೈಕಿ ಭಾರತದಲ್ಲೇ ಇದು ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

ಇದೇ ಸಮಯದಲ್ಲಿ, ಒಬ್ಬ ಸರಾಸರಿ ಅಮೆರಿಕನ್ ತನ್ನ ಒಂದು ದಿನದ ಆದಾಯದಿಂದ ಬರೋಬ್ಬರಿ 199 ಲೀಟರ್ ಪೆಟ್ರೋಲ್ ಹಾಗೂ 171 ಲೀಟರ್ ಡೀಸೆಲ್ ಖರೀದಿಸಬಲ್ಲನು. ವಿಶ್ವದ ವಿವಿಧ ದೇಶಗಳ ಇಂಧನ ದರಗಳನ್ನು ವಿಶ್ಲೇಷಿಸುವ ‘ಗ್ಲೋಬಲ್ ಪೆಟ್ರೋಲ್ ಪ್ರೈಸಸ್ ಡಾಟ್ ಕಾಮ್’ (globalpetrolprices.com) ಅಂಕಿಅಂಶಗಳ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ. ಭಾರತಕ್ಕೆ ಹೋಲಿಸಿದರೆ ಇಟಲಿ, ಫ್ರಾನ್ಸ್, ಜರ್ಮನಿ, ಬ್ರಿಟನ್ ಮತ್ತು ಜಪಾನ್ ದೇಶಗಳ ನಾಗರಿಕರು ತಮ್ಮ ಒಂದು ದಿನದ ವೇತನದಲ್ಲಿ ಕನಿಷ್ಠ 50 ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುವಷ್ಟು ಆರ್ಥಿಕ ಸಾಮರ್ಥ್ಯ ಹೊಂದಿದ್ದಾರೆ.

ವಿಶ್ವದ ಹತ್ತು ದೊಡ್ಡ ಆರ್ಥಿಕತೆಗಳ ಪೈಕಿ 9ನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲೂ ಸಹ ಭಾರತಕ್ಕಿಂತ ಇಂಧನ ದರಗಳು ಅಗ್ಗವಾಗಿವೆ. ಒಬ್ಬ ಸರಾಸರಿ ಬ್ರೆಜಿಲಿಯನ್ ತನ್ನ ಒಂದು ದಿನದ ಗಳಿಕೆಯಿಂದ 20 ಲೀಟರ್ ಇಂಧನ ಕೊಳ್ಳಬಹುದು. ಇನ್ನು ವಿಶ್ವದ ಒಟ್ಟು 158 ದೇಶಗಳ ಪೈಕಿ ಲಿಬಿಯಾದಲ್ಲಿ ಅತ್ಯಂತ ಅಗ್ಗದ ದರದಲ್ಲಿ ಇಂಧನ ಲಭ್ಯವಿದ್ದು, ಅಲ್ಲಿನ ನಾಗರಿಕರು ತಮ್ಮ ಒಂದು ದಿನದ ಆದಾಯದಿಂದ 789 ಲೀಟರ್ ಪೆಟ್ರೋಲ್ ಖರೀದಿಸಬಹುದಾಗಿದೆ.

ಡೀಸೆಲ್ ಅತ್ಯಂತ ಅಗ್ಗವಾಗಿ ಸಿಗುವ ದೇಶಗಳಲ್ಲಿ ವೆನೆಜುವೆಲಾ ಮೊದಲ ಸ್ಥಾನದಲ್ಲಿದ್ದರೆ, ಇರಾನ್ ಎರಡನೇ ಸ್ಥಾನದಲ್ಲಿದೆ. ವೆನೆಜುವೆಲಾದಲ್ಲಿ ಒಂದು ದಿನದ ಕೂಲಿಯಿಂದ 2,573 ಲೀಟರ್ ಹಾಗೂ ಇರಾನ್‌ನಲ್ಲಿ 1,866 ಲೀಟರ್ ಡೀಸೆಲ್ ಖರೀದಿಸಬಹುದಾಗಿದೆ. ತೈಲ ಉತ್ಪಾದನಾ ದೇಶಗಳಾದ ಕುವೈತ್, ಕತಾರ್‌ಗಳಲ್ಲೂ ಒಂದು ದಿನದ ಸಂಬಳಕ್ಕೆ 200 ಲೀಟರ್‌ಗಿಂತ ಹೆಚ್ಚು ಇಂಧನ ಸಿಗುತ್ತದೆ.

ಸಂಸ್ಥೆಗಳು ಲಾಭದಲ್ಲಿದ್ದರೂ ಜನರ ಮೇಲೆ ಬರೆ: ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಮೂರು ಹಂತಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಟ್ಟು 7 ರೂಪಾಯಿಗಳಷ್ಟು ಹೆಚ್ಚಳ ಮಾಡಿದೆ. ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಯುದ್ಧದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂದು ಸರ್ಕಾರ ಈ ಹೊರೆಯನ್ನು ಜನರ ಮೇಲೆ ಹೊರಿಸಿದೆ.

ಆದರೆ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ದೇಶದ ಪ್ರಮುಖ ಮೂರು ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸಂಸ್ಥೆಗಳು ಒಟ್ಟಾಗಿ ಬರೋಬ್ಬರಿ 19,470 ಕೋಟಿ ರೂಪಾಯಿಗಳ ಬೃಹತ್ ಲಾಭವನ್ನು ಗಳಿಸಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 40.74 ರಷ್ಟು ಅಧಿಕವಾಗಿದೆ. ಮಾರ್ಚ್ ತಿಂಗಳಿನಲ್ಲಿ ಯುದ್ಧ ತೀವ್ರಗೊಂಡಿದ್ದ ಸಂದರ್ಭದಲ್ಲೂ ಈ ಕಂಪನಿಗಳು ಸಾವಿರಾರು ಕೋಟಿ ಲಾಭ ದಾಖಲಿಸಿವೆ. ಆದಾಗ್ಯೂ, ತೈಲ ಕಂಪನಿಗಳು ನಷ್ಟದಲ್ಲಿವೆ ಎಂಬ ಕಾರಣ ನೀಡಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಗ್ಯಾಸ್ ಬೆಲೆಗಳನ್ನು ಸತತವಾಗಿ ಹೆಚ್ಚಿಸುತ್ತಿದೆ ಎಂದು ವರದಿ ಆಕ್ಷೇಪಿಸಿದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು