ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

G20: ಭಾರತಕ್ಕೆ ಬರಲಿದೆ ಅಮೇರಿಕಾದ ಕೋಳಿ ಕಾಲು. ಆತಂಕದಲ್ಲಿ ಭಾರತದ ಕೋಳಿ ಸಾಕಣೆದಾರರು

PPeepal Media Desk

Peepal Media Desk • ದೇಶ

• 1 ನಿಮಿಷದ ಓದು

G20: ಭಾರತಕ್ಕೆ ಬರಲಿದೆ ಅಮೇರಿಕಾದ ಕೋಳಿ ಕಾಲು. ಆತಂಕದಲ್ಲಿ ಭಾರತದ ಕೋಳಿ ಸಾಕಣೆದಾರರು

ಮೊನ್ನೆ ನಡೆದ G20 ಸಮಾವೇಶದಲ್ಲಿ ಅಮೇರಿಕಾದಿಂದ ಚಿಕನ್‌ ಲೆಗ್‌ ಪೀಸ್‌ ಮತ್ತು ಲಿವರ್‌ ಭಾಗಗಳನ್ನು ಆಮದು ಮಾಡಿಕೊ‍ಳ್ಳುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ದೇಶವೊಂದರಲ್ಲಿ ಇಂತಹ ಸಮಾವೇಶ ನಡೆಯುವಾಗ ಆ ಸಮಾವೇಶಕ್ಕೆ ಬರುವ ಪ್ರತಿಯೊಬ್ಬ ನಾಯಕನಿಗೂ ಅವನದ್ದೇ ಆದ ಹಿತಾಸಕ್ತಿಗಳಿರುತ್ತವೆ. ತನ್ನ ದೇಶಕ್ಕೆ ಲಾಭವಾಗುವಂತಹ ಒಪ್ಪಂದ ಮಾಡಿಕೊ‍ಳ್ಳುವ ಅವಕಾಶವಿದ್ದಾಗಲಷ್ಟೇ ಅವನು ಇನ್ನೊಂದು ದೇಶಕ್ಕೆ ಪ್ರಯಾಣಿಸುತ್ತಾನೆ.

ಅಂತಹದ್ದೇ ಒಂದು ಒಪ್ಪಂದವನ್ನು ಅಮೇರಿಕಾ ಭಾರತದೊಡನೆ ಮಾಡಿಕೊಂಡಿದ್ದು ಈಗ ಅದು ಕಾರ್ಯರೂಪಕ್ಕೆ ಬಂದರೆ ಆಗಬಹುದಾದ ಪರಿಣಾಮಗಳನ್ನು ನೆನೆದು ಇಲ್ಲಿನ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಭಾರತವು ಅಮೇರಿಕಾದೊಡನೆ ಚಿಕನ್‌ ಲೆಗ್‌ ಪೀಸ್‌ ಹಾಗೂ ಲಿವರ್‌ ಆಮದು ಮಾಡಿಕೊ‍ಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದು ಇದು ಇಲ್ಲಿನ ಪೌಲ್ಟ್ರಿ ಫಾರ್ಮ್‌ ವ್ಯವಹಾರದ ತೊಡೆ ನಡುಗಿಸುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಇಲ್ಲಿನ ಕೋಳಿ ಸಾಕಣೆದಾರರು ಆತಂಕಕ್ಕೆ ಒಳಗಾಗಿದ್ದಾರೆ.

ಇಲ್ಲಿ ಭಾರತೀಯರ ಆರೋಗ್ಯದ ಕುರಿತು ಕಳವಳ ಹುಟ್ಟಿಸುವ ಅಂಶಗಳೂ ಇವೆ. ಈ ಅಮೇರಿಕಾದ ಲೆಗ್‌ ಪೀಸ್‌ ಇಲ್ಲಿಗೆ ಎಂದರೆ ಭಾರತೀಯರ ಊಟದ ತಟ್ಟೆಗೆ ಬರಲು ಕನಿಷ್ಟ ಹದಿನೈದರಿಂದ ಇಪ್ಪತ್ತು ದಿನಗಳು ಬೇಕಾಗುತ್ತದೆ. ಇಂತಹ ‍ಪ್ರೋಜನ್‌ ಚಿಕನ್‌ ತಿನ್ನುವುದು ಈಗಾಗಲೇ ಹಲವು ಕಾಯಿಲೆಗಳಿಗೆ ತವರಾಗಿರುವ ದೇಶಕ್ಕೆ ಇನ್ನೊಂದು ಕಂಟಕವಾಗಿ ಪರಿಣಮಿಸಲಿದೆ.

ಅಲ್ಲದೆ ಕೋಳಿ ಸಾಕಣೆದಾರರ ಇನ್ನೊಂದು ವಾದವೆಂದರೆ ಅಮೇರಿಕಾದಲ್ಲಿ ಕೋಳಿಗಳಿಗೆ ದನ, ಹಾಗೂ ಹಂದಿ ಮಾಂಸ ತಯಾರಿಕೆಯಲ್ಲಿ ಸಿಗುವ ವ್ಯರ್ಥ ಪದಾರ್ಥಗಳನ್ನು ಹಾಕಿ ಸಾಕಲಾಗುತ್ತದೆ. ಇಂತಹ ಆಹಾರವನ್ನು ತಿಂದ ಕೋಳಿಯ ಮಾಂಸವನ್ನು ದೇಶದ ಜನರಿಗೆ ತಿನ್ನಿಸುವುದು ಧಾರ್ಮಿಕ ದ್ರೋಹ ಎನ್ನುವುದು.

ಈಗಾಗಲೇ ಕೋಳಿ ಸಾಕಣೆದಾರರ ಸಂಘಟನೆಗಳು ಈ ಒಪ್ಪಂದವನ್ನು ಹಿಂಪಡೆಯಲು ಆಗ್ರಹಿಸಿದ್ದು, ಒಂದು ವೇಳೆ ಹಿಂಪಡೆಯದಿದ್ದಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತುವುದಾಗಿ ಹೇಳಿವೆ.

ಅಮೇರಿಕಾದಲ್ಲಿ ಕೆಎಫ್‌ಸಿಯಂತಹ ದೈತ್ಯ ಕಂಪನಿಗಳು ಬಹಳ ದೊಡ್ಡ ಪ್ರಮಾಣದಲ್ಲಿ ಕೋಳಿಯನ್ನು ಬೆಳೆಯುತ್ತವೆ. ಆದರೆ ಅದಕ್ಕೆ ಅಲ್ಲಿ ಆ ಕೋಳಿಯಲ್ಲಿ ಉಪಯೋಗಕ್ಕೆ ಬರುವುದು ಕೇವಲ ರೆಕ್ಕೆಯ ಭಾಗ ಮಾತ್ರ. KFCಯ ಚಿಕನ್‌ ವಿಂಗ್‌ ಅಮೇರಿಕಾದಲ್ಲಿ ಬಹಳ ಬೇಡಿಕೆಯಿರುವ ತಿನಿಸು.

ಆದರೆ ಭಾರತೀಯರಿಗೆ ಕೋಳಿಯ ತೊಡೆ ಭಾಗದ ಮಾಂಸವೆಂದರೆ ಬಹಳ ಪ್ರೀತಿ. ಅಮೇರಿಕನ್ನರು ಕೊಬ್ಬಿನ ಕಾರಣ್ಕಕೆ ತಿರಸ್ಕರಿಸುವ ಈ ಕೋಳಿ ತೊಡೆ ಮಾಂಸವನ್ನು ಭಾರತಕ್ಕೆ ಕಳುಹಿಸಿ ಇನ್ನಷ್ಟು ಲಾಭ ಗಳಿಸುವ ಯೋಚನೆಯಲ್ಲಿ ಅಮೇರಿಕಾ ಈಗ ಭಾರತದೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ.

ಆದರೆ ಈ ರಫ್ತು ಪ್ರಕ್ರಿಯೆಗೆ ಕನಿಷ್ಟ ಇಪ್ಪತ್ತು ದಿನ ಹಿಡಿಯಬಹುದಾಗಿದ್ದು, ಅಷ್ಟು ದಿನಗಳ ಹಿಂದಿನ ಮಾಂಸವನ್ನು ಜನರು ಒಪ್ಪುತ್ತಾರೆಯೇ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

KFC ಈಗಾಗಲೇ ಭಾರತದಲ್ಲಿ ಚಿಕನ್‌ ಲೆಗ್‌ ಪೀಸ್‌ ಬಳಸಿ ಹಲವು ತಿನಿಸುಗಳನ್ನು ಗ್ರಾಹಕರಿಗೆ ನೀಡುತ್ತಿದ್ದು, ಬಹುಶಃ ಇನ್ನು ಮುಂದೆ ಅದು ಅಮೇರಿಕಾದಿಂದ ರಫ್ತಾಗಲಿರುವ ಲೆಗ ಪೀಸುಗಳನ್ನೇ ಇದಕ್ಕೆ ನೆಚ್ಚಿಕೊಳ್ಳಬಹುದು.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು