ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಬಿಜೆಪಿ ಫೇಕ್‌ ನ್ಯೂಸ್‌ ಫ್ಯಾಕ್ಟರಿಯನ್ನು ಒಬ್ಬಂಟಿಯಾಗಿ ನೆಲಸಮಗೊಳಿಸುತ್ತಿರುವ ಗ್ರೋಕ್ AI

PPeepal Media

Peepal Media ದೇಶ

• 1 ನಿಮಿಷದ ಓದು

ಬಿಜೆಪಿ ಫೇಕ್‌ ನ್ಯೂಸ್‌ ಫ್ಯಾಕ್ಟರಿಯನ್ನು ಒಬ್ಬಂಟಿಯಾಗಿ ನೆಲಸಮಗೊಳಿಸುತ್ತಿರುವ ಗ್ರೋಕ್ AI

ಕಳೆದ ಒಂದೂವರೆ ದಶಕದಲ್ಲಿ, ಬಿಜೆಪಿ ಸಾಮಾಜಿಕ ಮಾಧ್ಯಮ ತಂಡವು ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್ (ಈ ಹಿಂದೆ ಟ್ವಿಟರ್) ಬಳಸಿಕೊಂಡು ತನ್ನ ತಪ್ಪು ಮಾಹಿತಿ ಹರಡುವ ಅಭಿಯಾನವನ್ನು ತೀವ್ರಗೊಳಿಸಿದೆ.

ಬಿಜೆಪಿ ಇದಕ್ಕಾಗಿ ಟೆಕ್‌ಫಾಗ್‌ ರೀತಿಯ ಅಪ್ಲಿಕೇಷನ್ನುಗಳನ್ನುಸಹ ರಚಿಸಿದೆ. ಇದರ ಮೂಲಕ ಪಕ್ಷವು ನಕಲಿ ಖಾತೆಗಳನ್ನು ಸೃಷ್ಟಿಸಿ, ನಕಲಿ ಟ್ರೆಂಡ್‌ ಸೆಟ್‌ ಮಾಡುತ್ತಿತ್ತು. ಜೊತೆಗೆ ಆಟೋ ರಿಪ್ಲೈ ಮತ್ತು ಆಟೋ ಟ್ವೀಟ್‌ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಟ್ರೋಲಿಂಗ್‌ ಮಾಡುವುದನ್ನು ತೀವ್ರಗೊಳಿಸುತ್ತಿತ್ತು.

ಇದಕ್ಕೆ ಉದಾಹರಣೆಯೆಂದರೆ, ಮೋದಿ ಯಾವುದಾದರೂ ಯೋಜನೆ ಘೋಷಿಸಿದಾಗ ಅಥವಾ ವಿದೇಶ ಪ್ರವಾಸ ಮಾಡಿದಾಗ ಬಿಜೆಪಿ ಸೇನೆ ಅದನ್ನು ಅದ್ಭುತ ಎಂದು ವರ್ಣಿಸತೊಡಗುತ್ತದೆ. ಈ ಪೋಸ್ಟುಗಳೆಲ್ಲವೂ ನಕಲಿ ಖಾತೆಯಿಂದ ಪೋಸ್ಟ್‌ ಮಾಡಲ್ಪಟ್ಟಿರುತ್ತವೆ. ಆ ಪೋಸ್ಟುಗಳಲ್ಲಿ ಪ್ರತಿ ಸೆಕೆಂಡಿಗೆ ಹತ್ತು ಕಮೆಂಟ್‌ ಬಂದರೆ ಅದರಲ್ಲಿ ಒಂಬತ್ತು ಕಮೆಂಟ್‌ ಬಿಜೆಪಿ ಸೈಬರ್‌ ಸೇನೆಯ ನಕಲಿ ಖಾತೆಗಳ ಕಮೆಂಟ್‌ ಆಗಿರುತ್ತವೆ. ಈ ರೀತಿಯಾಗಿ ಬಿಜೆಪಿ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ನಕಲಿ ಸುದ್ದಿಗಳನ್ನು ನಿಜವೆಂದು ನಂಬುವಂತೆ ಮಾಡುತ್ತಿತ್ತು.

ಬಿಜೆಪಿ ಐಟಿ ಸೆಲ್ಲಿನ ಹಲವು ಮಾಜಿ ಉದ್ಯೋಗಿಗಳು ಈ ವಿಷಯವಾಗಿ ಮುಂದೆ ಮಾತನಾಡಿದ್ದಾರೆ. ನಾವು ಈ ಹಿಂದೆ ಸುಳ್ಳು ಸುದ್ದಿ ಹರಡುತ್ತಿದ್ದೆವು ಎಂದೂ ಹೇಳಿಕೊಂಡಿದ್ದಾರೆ. ಸ್ವಾತಿ ಚತುರ್ವೇದಿಯವರಂತಹ ಕೆಲವು ಪತ್ರಕರ್ತರು ಸಹ ಈ ಕುರಿತು ಮಾತನಾಡಿದ್ದಾರೆ. ಆದರೆ ಇದ್ಯಾವುದೂ ದೊಡ್ಡ ಮಟ್ಟದಲ್ಲಿ ಫಲ ನೀಡಿಲ್ಲ.

ಮುಂದೆ ನಕಲಿ ಖಾತೆಗಳಿಂದ ಬಂದ ಬೆದರಿಕೆಗಳಿಗೆ ಬೆದರಿದ ಅವರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿದರು. 2002 ರ ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಬಿಬಿಸಿ ಮತ್ತು ರೈತ ಹೋರಾಟದ ಪೋಸ್ಟುಗಳ ವಿಷಯವಾಗಿ ಟ್ವಿಟರ್‌ ರೀತಿಯ ಸಂಸ್ಥೆಗಳಿಗೂ ಬಿಜೆಪಿ ಸರ್ಕಾರ ಬೆದರಿಕೆ ಒಡ್ಡಿತ್ತು.

ಆದರೆ ಇಂದು ಟ್ವಟರ್‌ ಹೋಗಿ ಅದು ಎಕ್ಸ್‌ ಆಗಿದೆ. ಅದರ ಮಾಲಿಕತ್ವ ಈಗ ಅಮೇರಿಕದ ದೈತ್ಯ ಉದ್ಯಮಿ ಮಸ್ಕ್‌ ಕೈಯಲ್ಲಿದೆ. ಇದೇ ಎಕ್ಸ್‌ ಕಂಪನಿಯ ಆರ್ಟಿಫಿಷಿಯಕ್‌ ಇಂಟಲಿಜೆನ್ಸ್‌ ಆಗಿರುವ ಗ್ರೋಕ್‌ ಇದೀಗ ಬಿಜೆಪಿ ಹಾಗೂ ಮೋದಿಯ ನೈಜ ಸ್ವರೂಪವನ್ನು ದೇಶದ ಜನರ ಮುಂದೆ ಪಾರದರ್ಶಕವಾಗಿ ಇಡುತ್ತಿದೆ.

ಪ್ರಧಾನಿ ಮೋದಿ ಹಾಗೂ ಬಿಜೆಪಿ ಕುರಿತು ಎಕ್ಸ್‌ ಬಳಕೆದಾರರು ಬಗೆ ಬಗೆಯಾಗಿ ಪ್ರಶ್ನೆ ಕೇಳುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಗ್ರೋಕ್‌ ಜನರು ಕೇಳುವ ಪ್ರತಿ ಪ್ರಶ್ನೆಗೂ ನಿಖರ ಹಾಗೂ ಪ್ರಾಮಾಣಿಕ ಉತ್ತರ ಕೊಡುತ್ತಿರುವುದು ಇಲ್ಲಿ ಗಮನಾರ್ಹ.

ತನ್ನ ವಿರುದ್ಧ ಮಾತನಾಡುವ, ತನ್ನ ಕುರಿತು ಸತ್ಯ ಹೇಳುವವರನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದು ಸರ್ಕಾರಗಳಿಗೆ ಹೊಸತೇನಲ್ಲ. ಈ ಹಿಂದೆಯೂ ರೈತ ಚಳವಳಿಯ ಸಂದರ್ಭದಲ್ಲಿ ಸರ್ಕಾರ ಟ್ವಿಟರ್‌ನ ಕತ್ತು ಹಿಸುಕಲು ಪ್ರಯತ್ನಿಸಿತ್ತು. ಇದೀಗ ಗ್ರೋಕ್‌ ವಿಚಾರದಲ್ಲೂ ಸರ್ಕಾರ ಅಂತಹದ್ದೇ ಪ್ರಯತ್ನಕ್ಕೆ ಮುಂದಾಗಿದೆ ಎನ್ನುವ ವಿಚಾರಗಳು ಕೇಳಿಬರುತ್ತಿವೆ.

ಪ್ರಧಾನಿ ಮೋದಿ ಕುರಿತು ನೀಡಿರುವ ಉತ್ತರಗಳನ್ನು ವಿರೋಧಿಸಿ ಬಿಜೆಪಿ ನಾಯಕರು ಹಲವಾರು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಗ್ರೋಕ್‌ ಹಿಂದಿಯಲ್ಲಿ ಅಶ್ಲೀಲ ಪದಗಳನ್ನು ಬಳಸುತ್ತಿದೆ ಎಂದು ಆರೋಪಿಸಿ ನೋಟಿಸ್‌ ಕೂಡಾ ನೀಡಲಾಗಿದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು