ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಗಂಡನಿಗೆ ಬೆಕ್ಕಿನ ಮೇಲೆ ಪ್ರೀತಿ ಹೆಚ್ಚು: ಹೆಂಡತಿಯ ಆರೋಪದ ತನಿಖೆಯನ್ನು ತಡೆಹಿಡಿದ ಕರ್ನಾಟಕ ಹೈಕೋರ್ಟ್

PPeepal Media Desk

Peepal Media Desk • ದೇಶ

• 1 ನಿಮಿಷದ ಓದು

ಗಂಡನಿಗೆ ಬೆಕ್ಕಿನ ಮೇಲೆ ಪ್ರೀತಿ ಹೆಚ್ಚು: ಹೆಂಡತಿಯ ಆರೋಪದ ತನಿಖೆಯನ್ನು ತಡೆಹಿಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ʼನನ್ನ ಗಂಡ ನನ್ನ ಮೇಲಿನ ಕಾಳಜಿಗಿಂತ ಹೆಚ್ಚ ಕಾಳಜಿಯನ್ನು ತಮ್ಮ ಮುದ್ದಿನ ಬೆಕ್ಕಿನ ಮೇಲೆ ತೋರಿಸುತ್ತಾರೆ,ʼ ಎಂದು ಆರೋಪಿಸಿ ಪತ್ನಿ ಗಂಡನ ವಿರುದ್ಧ ದಾಖಲಿಸಿರುವ ಕ್ರೌರ್ಯ ಪ್ರಕರಣದ ಮುಂದಿನ ಎಲ್ಲಾ ತನಿಖೆಗಳನ್ನು ಕರ್ನಾಟಕ ಹೈಕೋರ್ಟ್ ಡಿಸೆಂಬರ್ 12, ಗುರುವಾರ ತಡೆಹಿಡಿಯಿತು

ಐಪಿಸಿ ಸೆಕ್ಷನ್ 498 ಎ ಪ್ರಕಾರ ಇದು ಅಪರಾಧವಲ್ಲ ಎಂಬುದನ್ನು ಕಂಡುಕೊಂಡ ನ್ಯಾಯಾಲಯ, ಇಂತಹ ಕ್ಷುಲ್ಲಕ ಪ್ರಕರಣಗಳು ಈಗಾಗಲೇ ವಿಳಂಬವಾಗಿರುವ ನ್ಯಾಯ ವ್ಯವಸ್ಥೆಯನ್ನು ಮತ್ತಷ್ಟೂ ವಿಳಂಬ ಮಾಡುತ್ತದೆ ಎಂದು ಒತ್ತಿಹೇಳಿತು. ಅರ್ಜಿದಾರರು ಪತಿ, ಅತ್ತೆ ಮತ್ತು ಮಾವ ಆರೋಪಿಗಳಾಗಿದ್ದಾರೆ. ಪ್ರತಿವಾದಿ ನಂ. 2 ಮಹಿಳೆ ದೂರುದಾರರಾಗಿದ್ದು, ಅವರ ಪತಿ ಅರ್ಜಿದಾರ-ಆರೋಪಿ ನಂ. 1.

ದೂರು ಮತ್ತು ಇತರ ದಾಖಲೆಗಳನ್ನು ಗಮನಿಸಿದ  ನ್ಯಾಯಮೂರ್ತಿ ಎಂ.ನಾಗಪ್ರಸನ್ನ, ”ದೂರು ಮದುವೆ ಮತ್ತು ಒಟ್ಟಿಗೆ ವಾಸಿಸುವ ಬಗೆಗಿದೆ. ಆದರೆ ಈ ಆರೋಪದ ತಿರುಳು ಗಂಡನ ಮನೆಯಲ್ಲಿ ಸಾಕಿದ ಬೆಕ್ಕಿನ ಜಗಳದ ಮೇಲೆ ಆಧಾರವಾಗಿದೆ. ಪತಿ ಬೆಕ್ಕಿನ ಆರೈಕೆ ಮಾತ್ರ ಮಾಡುತ್ತಾರೆ ಎಂಬ ಆರೋಪ ಇಬ್ಬರ ನಡುವೆ ಇರುವ ಜಗಳವಾಗಿದೆ ಎಂದು ದೂರಿನ ಹೆಚ್ಚಿನ ಪ್ಯಾರಾಗಳಲ್ಲಿ ವಿವರಿಸಲಾಗಿದೆ, ಆದ್ದರಿಂದ ಸಮಸ್ಯೆಯು ವರದಕ್ಷಿಣೆ ಬೇಡಿಕೆಯ ಮೇಲೆ ಅಥವಾ ವರದಕ್ಷಿಣೆಯ ಬೇಡಿಕೆಗೆ ಸಂಬಂಧಿಸಿದ್ದು ಅಥವಾ ಪತಿ ನಡೆಸುವ ಕ್ರೌರ್ಯಕ್ಕೆ ಸಂಬಂಧಿಸಿದ್ದು ಅಲ್ಲ. ಸಮಸ್ಯೆ ಏನೆಂದರೆ, ಈ ಸಾಕು ಬೆಕ್ಕು ಮತ್ತು ಆ ಬೆಕ್ಕು ಪತ್ನಿಯ ಮೇಲೆ ಅನೇಕ ಬಾರಿ ನಡೆಸಿದ ದಾಳಿ ಅಥವಾ ಪರಚುವುದು ಆಗಿದೆ,” ಎಂದು ಹೇಳಿದ್ದಾರೆ

“ನ್ಯಾಯಾಲಯದ ಪರಿಗಣಿತ ದೃಷ್ಟಿಯಲ್ಲಿ ಈ ಬಗ್ಗೆ IPC ಯ ಸೆಕ್ಷನ್ 498A ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ವಿಚಾರಣೆಯನ್ನು ಆರಂಭಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ. ಅಪರಾಧವು 498A IPC ಯ ಅಡಿಯಲ್ಲಿ ಶಿಕ್ಷಾರ್ಹವಾಗಲು ಅಗತ್ಯವಾದ ಯಾವುದೇ ಅಂಶಗಳು ಕೈಯಲ್ಲಿರುವ ಪ್ರಕರಣಗಳಲ್ಲಿ ಇರುವುದಿಲ್ಲ. ಇಂತಹ ಕ್ಷುಲ್ಲಕ ಪ್ರಕರಣಗಳು ಇಂದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬ್ಲಾಕ್‌ ಮಾಡಿವೆ ಮತ್ತು ಪ್ರಸ್ತುತ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದರೆ ಅದು ಈಗಾಗಲೇ ಮುಚ್ಚಿಹೋಗಿರುವ ನ್ಯಾಯ ವ್ಯವಸ್ಥೆಗೆ ಮತ್ತೊಂದು ಪ್ರಕರಣವನ್ನು ಸೇರಿಸಿದಂತೆ,” ಎಂದು ಜಸ್ಟಿಸ್ ನಾಗಪ್ರಸನ್ನ ಹೇಳಿದ್ದಾರೆ.

ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ, ” ಆದ್ದರಿಂದ ಮುಂದಿನ ವಿಚಾರಣೆಯ ದಿನಾಂಕದವರೆಗೆ ಅರ್ಜಿದಾರರ ಎಲ್ಲಾ ತನಿಖೆಗಳಿಗೆ ಮಧ್ಯಂತರ ತಡೆ ಇರುತ್ತದೆ ” ಎಂದು ನಿರ್ದೇಶನ ನೀಡಿತು.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು