ಮುಂಬೈ: ಎಡಪಂಥೀಯ ವಿದ್ಯಾರ್ಥಿ ಸಂಘಟನೆ ನಿಷೇದವನ್ನು ವಿರೋಧಿಸಿದ ಎಬಿವಿಪಿ!
ಲಿಂಕ್ ನಕಲಿಸಲಾಗಿದೆ ✓
ಮುಂಬೈ: RSS ಅಂಗಸಂಸ್ತೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ಕ್ಯಾಂಪಸ್ಸಿನಲ್ಲಿ ಗುರುತಿಸಿಕೊಂಡಿರುವ ತನ್ನ ಸೈದ್ಧಾಂತಿಕ ಪ್ರತಿಸ್ಪರ್ಧಿ, ಎಡಪಂಥೀಯ ವಿದ್ಯಾರ್ಥಿ ಸಂಘಟನೆಯನ್ನು ಬೆಂಬಲಿಸಿ ಹೇಳಿಕೆ ನೀಡಿದೆ.
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಇತ್ತೀಚೆಗೆ ತನ್ನ ಕ್ಯಾಂಪಸ್ ನಲ್ಲಿ ಪ್ರೋಗ್ರೆಸ್ಸಿವ್ ಸ್ಟೂಡೆಂಟ್ಸ್ ಫೋರಂ(PSF-TISS) ಅನ್ನು ನಿಷೇಧಿಸಿತ್ತು. ಇದನ್ನು ವಿರೋಧಿಸಿರುವ ಎಬಿವಿಪಿ, ಹೀಗೆ ನಿಷೇಧಿಸುವುದು ಸರಿಯಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕವಾಗಿ ಭಾಗವಹಿಸಲು ಅವಕಾಶಗಳಿರಬೇಕು ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ವಿದ್ಯಾರ್ಥಿ ಸಂಘಟನೆಯ ನಿಷೇಧವು ಸಂಸ್ಥೆಗಳಲ್ಲಿ ಅಶಾಂತಿಯನ್ನು ಉಂಟುಮಾಡುವ ಅಪಾಯವಿದೆ. ಇಂತಹ ಹೆಜ್ಜೆಯು ಭವಿಷ್ಯದಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆಗಳ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಭಾಷಣವನ್ನು ಬೆಳೆಸಲು ಮತ್ತು ವಿದ್ಯಾರ್ಥಿ ಸಮುದಾಯದ ವೈವಿಧ್ಯಮಯ ದೃಷ್ಟಿಕೋನಗಳನ್ನು ಬೆಳೆಸಲು ವಿವಿಧ ವಿದ್ಯಾರ್ಥಿ ಸಂಘಟನೆಗಳ ಉಪಸ್ಥಿತಿಯು ಅತ್ಯಗತ್ಯ.TISS ನಲ್ಲಿ ವಿದ್ಯಾರ್ಥಿ ಸಂಘಟನೆಗಳ ಮೇಲೆ ದಿಢೀರ್ ಮತ್ತು ನ್ಯಾಯಸಮ್ಮತವಲ್ಲದ ನಿಷೇಧವು ಈ ತತ್ವಗಳ ಮೇಲಿನ ನೇರ ದಾಳಿಯಾಗಿದೆ ಎಂದು ಎಬಿವಿಪಿ ಕಾರ್ಯದರ್ಶಿ ನಿಧಿ ಗಾಲಾ ವಿರೋದಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿನ ಪ್ರಮುಖ ಸಂಸ್ಥೆಯಾದ TISS, ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ (PSF-TISS) ಅನ್ನು ಆಗಸ್ಟ್ 19 ರಂದು ನಿಷೇಧಿಸಿತ್ತು. ಪಿಎಸ್ಎಫ್ ಸಂಸ್ಥೆಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುವ ಮತ್ತು ಮಾನಹಾನಿ ಮಾಡುವ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಲಾಗಿತ್ತು.
Peepal Media Desk
Peepal Media · ದೇಶ ವಿಭಾಗ