ನರಭಕ್ಷಕ ಹುಲಿಯನ್ನು ಹಿಡಿದು ಕೊಂದ ಗ್ರಾಮಸ್ಥರು
ಲಿಂಕ್ ನಕಲಿಸಲಾಗಿದೆ ✓
ಬಿಹಾರ: ಹುಲಿಯೊಂದು ಸುಮಾರು 9 ಜನರನ್ನು ನರಭಕ್ಷಕನಂತೆ ಬಲಿ ತೆಗೆದುಕೊಂಡಿದ್ದು, ಇದೀಗ ಸ್ಥಳೀಯರೆಲ್ಲಾ ಸೇರಿ ಹುಲಿಯನ್ನು ಹಿಡಿದು ಕೊಂದ ಘಟನೆ ಬಿಹಾರದ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ ನಡೆದಿದೆ.
ಬಿಹಾರದ ಬಗಾರ ಎಂಬ ಗ್ರಾಮದಲ್ಲಿ ಹುಲಿಯೊಂದು ಕಳೆದ ಕೆಲವು ದಿನಗಳಿಂದ ಮಾನವರು ವಾಸಿಸುವ ಸ್ಥಳದಲ್ಲಿ ವಾಸಿಸಲು ಅಭ್ಯಸಿಸಿಕೊಂಡು ಮನುಷ್ಯರನ್ನೇ ತನ್ನ ಆಹಾರವನ್ನಾಗಿ ಮಾಡಿಕೊಂಡಿದೆ. ಇದುವರೆಗೆ ಸುಮಾರು 9 ಜನರನ್ನು ಬಲಿ ತೆಗೆಕೊಂಡಿದ್ದು, ಮೂರು ದಿನಗಳಿಂದ ನಾಲ್ಕು ಜನರನ್ನು ಕೊಂದಿದೆ ಎಂದು ದೃಢವಾದ ನಂತರ ಹುಲಿಯನ್ನು ಸಿಕ್ಕಾಗ ಕೊಲ್ಲುವಂತೆ ಅಲ್ಲಿನ ಅರಣ್ಯಾಧಿಕಾರಿ ಆದೇಶ ನೀಡಿದ್ದರು.

ಅಧಿಕಾರಿಗಳ ಆದೇಶದಂತೆ ಅಲ್ಲಿನ ಸ್ಥಳೀಯರು ಇಂದು ಹುಲಿಯನ್ನು ಹಿಡಿದು ಸಾಯಿಸಿದ್ದು, ನಿಟ್ಟುಸಿರು ಬಿಡುವಂತೆ ಮಾಡಿಕೊಂಡಿದ್ದಾರೆ.
ಇದನ್ನೂ ನೋಡಿ : ಮಹಿಳಾ ಟಿ-20 ಏಷ್ಯಾ ಕಪ್ 2022: ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಭರ್ಜರಿ ಜಯ
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ