ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಅಪರಾಧ ಘಟನೆಗೆ ಕೋಮು ಬಣ್ಣ ಬಳಿದ ಆರೋಪ: ನವಿಕಾ ಕುಮಾರ್‌ ನಿರೂಪಣೆಯ ವಿಡಿಯೋ ಹಿಂಪಡೆಯುವಂತೆ ಆದೇಶಿಸಿದ NBDSA

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಅಪರಾಧ ಘಟನೆಗೆ ಕೋಮು ಬಣ್ಣ ಬಳಿದ ಆರೋಪ: ನವಿಕಾ ಕುಮಾರ್‌ ನಿರೂಪಣೆಯ ವಿಡಿಯೋ ಹಿಂಪಡೆಯುವಂತೆ ಆದೇಶಿಸಿದ NBDSA

ಹೊಸದೆಹಲಿ: ಗುಜರಾತಿನಲ್ಲಿ ನಡೆದಿದ್ದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ನಡೆದ ಸುದ್ದಿಯನ್ನು ಬಿತ್ತರಿಸುವಾಗ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು ಸುದ್ದಿಯನ್ನು ನಿರೂಪಸಿದ್ದಕ್ಕಾಗಿ NBDSA ಟೌಮ್ಸ್‌ ನೌ ನವಭಾರತ್‌ ಟೈಮ್ಸ್‌ ವಾಹಿನಿಗೆ ಛೀಮಾರಿ ಹಾಕಿದೆ. ಜೊತೆಗೆ ಒಂದು ವಾರದ ಒಳಗೆ ಪ್ರಸ್ತುತ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅದರ ವೆಬ್ಸೈಟ್‌ ಮತ್ತು YoutTube ವೇದಿಕೆಯಿಂದ ತೆಗೆದುಹಾಕುವಂತೆ ಆದೇಶಿಸಿದೆ.

ಟೈಮ್ಸ್‌ ನೌ ನಿರೂಪಕಿ ನವಿಕಾ ಕುಮಾರ್‌ 2022ರ ನವೆಂಬರ್‌ ತಿಂಗಳ 29ನೇ ತಾರೀಖಿನಂದು ಗುಜರಾತಿನಲ್ಲಿ ಗರ್ಬಾ ನೃತ್ಯದ ವೇಳೆ ಹುಡುಗಿಯರ ಫೋಟೊ ತೆಗೆದರೆಂದು ತಕರಾರು ತೆಗೆದು ಮುಸ್ಲಿಂ ಯುವಕರನ್ನು ಬಜರಂಗದಳದ ಸದಸ್ಯರು ಥಳಿಸಿದ ಕುರಿತು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಕಾರ್ಯಕ್ರಮದ ವೇಳೆ ಆಕೆ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್‌ ಮಾಡಿ ಕಾರ್ಯಕ್ರಮ ಮಾಡಿದ್ದಾರೆಂದು ಆರೋಪಿಸಿ ಟೆಕ್ ಎಥಿಕ್ಸ್ ಪ್ರೊಫೆಷನಲ್ ಇಂದ್ರಜೀತ್ ಘೋರ್ಪಡೆ ಅವರು ದೂರು ಸಲ್ಲಿಸಿದ್ದರು.

ವಾಹಿನಿ ಸುದ್ದಿ ಮಾನದಂಡಗಳನ್ನು ಉಲ್ಲಂಘಿಸಿ ಘಟನೆಗೆ ಕೋಮು ಬಣ್ಣ ನೀಡಿದ್ದಲ್ಲದೆ, ಮುಸ್ಲಿಂ ಸಮುದಾಯವನ್ನು ಅಪರಾಧಿಗಳು ಎನ್ನುವಂತೆ ಚಿತ್ರಿಸಿದೆ ಎಂದು ಅವರ ದೂರಿದ್ದರು. ಅವರೊಂದಿಗೆ ಈ ಕುರಿತು ಮತೀನ್ ಮುಜಾವರ್ ಎಂಬುವರು ಮತ್ತೊಂದು ದೂರನ್ನು ದಾಖಲಿಸಿದ್ದರು.

ದೂರನ್ನು ಸ್ವೀಕರಿಸಿದ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಮತ್ತು ಡಿಜಿಟಲ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBDSA) ದೂರುದಾರರ ಅಭಿಪ್ರಾಯವನ್ನು ಒಪ್ಪಿದ್ದು, Times Navbharat channel ಸುದ್ದಿಗಳಿಗೆ ಕೋಮು ಬಣ್ಣ ನೀಡುವುದನ್ನು ನಿಲ್ಲಿಸಬೇಕು ಆದೇಶಿಸಿದೆ.

ಆದರೆ ತನ್ನ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದ ವಾಹಿನಿ ತಾನು ಮಹಿಳಾ ಸುರಕ್ಷತೆಯ ಕುರಿತಾಗಿ ಕಾರ್ಯಕ್ರಮ ಮಾಡಿದ್ದೆ ಎಂದು ಸಮರ್ಥಿಸಿಕೊಂಡಿದೆ. ದೂರಿನಲ್ಲಿರುವ ವಿಷಯಗಳು ನಮ್ಮ ಕಾರ್ಯಕ್ರಮದ ವ್ಯಾಪ್ತಿಯ ಆಚೆಗಿವೆ ಮತ್ತು ಆಧಾರ ರಹಿತವಾಗಿವೆ ಎಂದೂ ಅದು ಸಮರ್ಥಿಸಿಕೊಂಡಿತ್ತು.

ಆದರೆ NBDSA ವಾಹಿನಿಯ ವಾದವನ್ನು ತಳ್ಳಿಹಾಕಿ ಒಂದು ವಾರದೊಳಗೆ ವಾಹಿನಿ ವೆಬ್ಸೈಟ್‌ ಹಾಗೂ ಯೂಟ್ಯೂಬಿನಿಂದ ವರದಿಗಳನ್ನು ತೆಗೆದುಹಾಕಿರುವುದನ್ನು ಖಚಿತಪಡಿಸಬೇಕು ಎಂದು ಆದೇಶಿಸಿದೆ. ಜೊತೆಗೆ ವಾಹಿನಿಯು ತಾನು ಮಹಿಳಾ ಸುರಕ್ಷತೆಯ ಕುರಿತಾಗಿ ಕಾರ್ಯಕ್ರಮ ಮಾಡಿದ್ದೆ ಎಂದು ಹೇಳಿಕೊಂಡಿದೆ ಆದರೆ ಅದು ಕಾರ್ಯಕ್ರಮದಲ್ಲಿ ಆ ವಿಷಯದಿಂದ ಹೊರಳಿ ಘಟನೆಗೆ ಕೋಮು ಬಣ್ಣ ನೀಡಿದೆ ಎಂದು NBDSA ಹೇಳಿದೆ.

NBDSA ಆದೇಶವನ್ನು ಇಲ್ಲಿ ಓದಬಹುದು.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು