ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಪಿವಿಎನ್‌ ಬದಲು ರಾಜೀವ್‌ ಪ್ರಧಾನಿಯಾಗಿದ್ದರೆ‌ ಬಾಬರಿ ಮಸೀದಿ ಉಳಿದಿರುತ್ತಿತ್ತು ಮಂದಿರವೂ ನಿರ್ಮಾಣವಾಗಿರುತ್ತಿತ್ತು: ಮಣಿಶಂಕರ್‌ ಅಯ್ಯರ್

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಪಿವಿಎನ್‌ ಬದಲು ರಾಜೀವ್‌ ಪ್ರಧಾನಿಯಾಗಿದ್ದರೆ‌ ಬಾಬರಿ ಮಸೀದಿ ಉಳಿದಿರುತ್ತಿತ್ತು ಮಂದಿರವೂ ನಿರ್ಮಾಣವಾಗಿರುತ್ತಿತ್ತು: ಮಣಿಶಂಕರ್‌ ಅಯ್ಯರ್

ಇದುವರೆಗೆ ಎಲ್ಲರೂ ತಿಳಿದಿರುವಂತೆ 1986ರಲ್ಲಿ ಬಾಬ್ರಿಯ ಬೀಗ ತೆಗೆದಿದ್ದು ರಾಜೀವ್‌ ಗಾಂಧಿಯಲ್ಲ, ಅಂದು ಅದರ ಬಾಗಿಲು ತೆರೆಯಲು ಕಾರಣರಾಗಿದ್ದು ಅರುಣ್‌ ನೆಹರೂ ಎಂದು ಮಣಿಶಂಖರ್‌ ಅಯ್ಯರ್‌ ಹೇಳಿದ್ದಾರೆ. ಅರುಣ್‌ ನೆಹರೂ ಬಿಜೆಪಿ ಮನುಷ್ಯನಾಗಿದ್ದು ಅವರನ್ನು ಬಿಜೆಪಿಯವರು ಕಾಂಗ್ರೆಸ್‌ ಪಕ್ಷದಲ್ಲಿ ಇರುವಂತೆ ನೋಡಿಕೊಂಡಿದ್ದರು ಎಂದೂ ಅಯ್ಯರ್‌ ಹೇಳಿದ್ದಾರೆ.

ಮಣಿಶಂಕರ್‌ ಅಯ್ಯರ್‌ ಅವರು ತಮ್ಮ ಹೊಸ ಪುಸ್ತಕ ‘The Rajiv I Knew’ ಬಿಡುಗಡೆ ಸಮಾರಂಭದಲ್ಲಿ ಮೇಲಿನ ಮಾತುಗಳನ್ನು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಯ್ಯರ್, ರಾಜೀವ್ ಗಾಂಧಿಯವರು ಮಸೀದಿಯನ್ನು ಉಳಿಸಿಕೊಂಡು ಮಂದಿರ ಕಟ್ಟುವಂತೆ ಹೇಳಿದ್ದರು. ಈಗ ಮಂದಿರ ಕಟ್ಟಬೇಕು, ಜೊತಗೆ ಮಸೀದಿಯನ್ನು ಬೇರೆ ಕಡೆ ಕಟ್ಟಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ರೀತಿಯಲ್ಲಿ, ಇದು ರಾಜೀವ್‌ ಹೊಂದಿದ್ದ ನಿರ್ಧಾರವೇ ಆಗಿದೆ. ಪಿ.ವಿ.ನರಸಿಂಹರಾವ್ ಅವರ ಜಾಗದಲ್ಲಿ ರಾಜೀವ್ ಗಾಂಧಿ ಅವರು ಜೀವಂತವಾಗಿದ್ದು ಪ್ರಧಾನಿಯಾಗಿದ್ದಿದ್ದರೆ ಬಾಬರಿ ಮಸೀದಿ ಇಂದಿಗೂ ಉಳಿಯುತ್ತಿತ್ತು ಎಂದು ಹೇಳಿದರು.

1986ರಲ್ಲಿ ಬಾಬರಿ ಮಸೀದಿಯ ಬಾಗಿಲು ತೆರೆಯಲು ಕಾರಣಕರ್ತರು ಕಾಂಗ್ರೆಸ್ ನಾಯಕ ಅರುಣ್ ನೆಹರೂ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಶುಕ್ರವಾರ ಹೇಳಿದ್ದಾರೆ. ಅದು ಕಾಂಗ್ರೆಸ್ ಪಕ್ಷದಲ್ಲಿ ಅರುಣ್ ನೆಹರೂ ಪ್ರಭಾವ ಇದ್ದ ಕಾಲ. ಅರುಣ್ ನೆಹರೂ ಅವರನ್ನು ಬಿಜೆಪಿಯವರು ಕಾಂಗ್ರೆಸ್‌ನಲ್ಲಿ ಇರುವಂತೆ ನೋಡಿಕೊಂಡಿದ್ದರು, ನಂತರ, ಅವರ ಯೋಜನೆ ಪೂರೈಸಿಕೊಂಡ ನಂತರ ಅವರು ಬಿಜೆಪಿ ಸೇರಿದರು ಎಂದು ಅಯ್ಯರ್ ಆರೋಪಿಸಿದರು.

ರಾಜೀವ್‌ ಗಾಂಧಿ ಅಂದು ಸರಿಯಾದ ಪರಿಹಾರ ಕಂಡುಕೊಂಡಿದ್ದರೆ ಇಂದು ಬಿಜೆಪಿಗೆ ರಾಜಕೀಯ ಮಾಡಲು ವಿಷಯವೇ ಇದ್ದಿರುತ್ತಿರಲಿಲ್ಲ ಎಂದೂ ಅವರು ಹೇಳಿದರು. ಜನವರಿ 22 ರಂದು ರಾಮಮಂದಿರ ಶಂಕುಸ್ಥಾಪನೆ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಾಯಕತ್ವದ ನಿರ್ಧಾರವನ್ನು ಮಣಿಶಂಕರ್ ಅಯ್ಯರ್ ಶ್ಲಾಘಿಸಿದರು.

ವಾಜಪೇಯಿಯವರ ಬಿಜೆಪಿಯನ್ನು ಮೋದಿ ಹೈಜಾಕ್‌ ಮಾಡಿದ್ದಾರೆ ಎಂದು ಅಯ್ಯರ್‌ ಆರೋಪಿಸಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಕೆಲಸ ಮಾಡಿದ ನಾಯಕರಲ್ಲಿ ಮಣಿಶಂಕರ್ ಅಯ್ಯರ್ ಕೂಡಾ ಒಬ್ಬರು. ಅಯ್ಯರ್ ಅವರ ಪುಸ್ತಕದಲ್ಲಿ ಬಾಬರಿ-ರಾಮ ಜನ್ಮಭೂಮಿ ವಿಷಯವಲ್ಲದೆ, ಭಾರತ-ಶ್ರೀಲಂಕಾ ಒಪ್ಪಂದ, ಶಾ ಬಾನೋ ಪ್ರಕರಣ ಮತ್ತು ಭಾರತೀಯ ಶಾಂತಿ ಪಾಲನಾ ಪಡೆಗಳಂತಹ ವಿಷಯಗಳನ್ನೂ ಚರ್ಚಿಸಲಾಗಿದೆ. ಅಯ್ಯರ್ ಅವರ ಪುಸ್ತಕ ಆಗಸ್ಟ್ 2023ರಲ್ಲಿ ಬಿಡುಗಡೆಯಾಗಿತ್ತು.

ಆ ಸಮಯದಲ್ಲಿ ಪ್ರಕಟವಾದ ಅವರ ಪುಸ್ತಕದ ಹೆಸರು ‘ಮೆಮೊಯಿರ್ಸ್ ಆಫ್ ಎ ಮೇವರಿಕ್ – ದಿ ಫಸ್ಟ್ ಫಿಫ್ಟಿ ಇಯರ್ಸ್ (1941-1991)’. ಈ ಪುಸ್ತಕದಲ್ಲಿ ಅಯ್ಯರ್ ಅವರು ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಹಿಂದುತ್ವದ ಬಗೆಗಿನ ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪುಸ್ತಕದಲ್ಲಿ ಪಿವಿ ನರಸಿಂಹರಾವ್ ಅವರು ಬಿಜೆಪಿಯ ಮೊದಲ ಪ್ರಧಾನಿ ಎಂದು ಬಣ್ಣಿಸಿದ್ದಾರೆ.

ಈ ಲೇಖನ ಓದಿದ್ದೀರಾ?:

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು