ರಾಜಸ್ಥಾನ: 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ 20 ವರ್ಷ ಜೈಲು
ಲಿಂಕ್ ನಕಲಿಸಲಾಗಿದೆ ✓
ಕೋಟಾ: ಕಳೆದ ವರ್ಷ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 21 ವರ್ಷದ ಯುವಕನಿಗೆ ಪೋಕ್ಸೊ ನ್ಯಾಯಾಲಯ ಮಂಗಳವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಗೆಂಡೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಅಪರಾಧಿ, ಅಪೂರ್ವ್ ಅಲಿಯಾಸ್ ರಾಮನ್ ಗೋಸ್ವಾಮಿ (21) ಕಳೆದ ವರ್ಷ ಆಗಸ್ಟ್ 14 ರಂದು ಮಗುವಿಗೆ ಚಾಕೊಲೇಟ್ ಕೊಟ್ಟು, ನಂತರ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ವಿಷಯ ತಿಳಿದ ಕುಟುಂಬದ ಸದಸ್ಯರು, ಮರುದಿನ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಗೋಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧ ಹಾಗೂ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಯಿತು.
ತ್ವರಿತ ವಿಚಾರಣೆಗಾಗಿ, ಪೊಲೀಸರು ಪ್ರಕರಣವನ್ನು ವಿಶೇಷ ಕೇಸ್ ಆಫೀಸರ್ ಸ್ಕೀಮ್ ಅಡಿಯಲ್ಲಿ ವರ್ಗೀಕರಿಸಿದ್ದರು, ನಂತರ 20-22 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಕೇಶ್ ಠಾಕೂರ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆಯಲ್ಲಿ, ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಸಲೀಂ ಬಾದರ್ ಅವರು ಅಪರಾಧಿಗೆ ₹ 50,000 ದಂಡವನ್ನು ವಿಧಿಸಿದ್ದಾರೆ ಎಂದು ಠಾಕೂರ್ ಹೇಳಿದರು.
Peepal Media Desk
Peepal Media · ದೇಶ ವಿಭಾಗ