ಧರ್ಮದ ಹೆಸರಿನಲ್ಲಿ ಇನ್ನೂ ಎಷ್ಟು ದಿನ ಮತ ಕೇಳುತ್ತೀರಿ? ಬಿಜೆಪಿ ವಿರುದ್ಧ ಸಚಿನ್ ಪೈಲಟ್ ವಾಗ್ದಾಳಿ
P
ಲಿಂಕ್ ನಕಲಿಸಲಾಗಿದೆ ✓
ಮುಂಬೈ: ಬಿಜೆಪಿ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಟೀಕಿಸಿದ್ದಾರೆ. ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟವನ್ನು ಬೆಂಬಲಿಸಿ ಅವರು ಮಂಗಳವಾರ ಬುಲ್ಡಾನಾದಲ್ಲಿ ಪ್ರಚಾರ ನಡೆಸಿದರು.
ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರ ರಚನೆಯಾಗಲಿದೆ ಎಂದರು. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದೇವೆ ಎಂದರು. ಪ್ರಚಾರದಲ್ಲಿ ಜನರ ಬೆಂಬಲ, ಉತ್ಸಾಹ, ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ ಎಂದರು.
ಬಿಜೆಪಿಯವರು ಜನರಲ್ಲಿ ಭಯ ಸೃಷ್ಟಿಸಲು ಬಯಸುತ್ತಿದ್ದಾರೆ ಎಂದರು. ಶಿಕ್ಷಣ, ನಿರುದ್ಯೋಗ, ಹಣದುಬ್ಬರದಂತಹ ವಿಚಾರಗಳನ್ನು ಬಿಟ್ಟು ಧರ್ಮದ ಹೆಸರಿನಲ್ಲಿ ಮತ ಕೇಳುವುದು ಎಷ್ಟು ದಿನ ಎಂದು ಪ್ರಶ್ನಿಸಿದರು.
P
Peepal Media
Peepal Media · ದೇಶ ವಿಭಾಗ
ಹಿಂದಿನ ಸುದ್ದಿ