ಗೋಶಾಲೆಗಳನ್ನು ಸ್ವಚ್ಛಗೊಳಿಸಿದರೆ ಕ್ಯಾನ್ಸರ್ ಗುಣವಾಗುತ್ತದೆ: ಯುಪಿ ಸಚಿವರ ವಿಚಿತ್ರ ಹೇಳಿಕೆ
ಲಿಂಕ್ ನಕಲಿಸಲಾಗಿದೆ ✓
ಲಕ್ನೋ: ಉತ್ತರ ಪ್ರದೇಶ ರಾಜ್ಯ ಸಚಿವರು ಅಚ್ಚರಿಯ ಹೇಳಿಕೆಯೊಂದಿಗೆ ನಾಗರಿಕರನ್ನು ಬೆಚ್ಚಿ ಬೀಳಿಸಿದ್ದಾರೆ. ಕ್ಯಾನ್ಸರ್ ರೋಗಿಗಳು ಗೋಶಾಲೆಗಳನ್ನು ಸ್ವಚ್ಛಗೊಳಿಸಿ ಮತ್ತು ಅದರಲ್ಲಿಯೇ ಉಳಿದುಕೊಳ್ಳುವ ಮೂಲಕ ರೋಗವನ್ನು ಗುಣಪಡಿಸಿಕೊಳ್ಳಬಹುದು ಎಂದು ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿದ್ದಾರೆ.
ಭಾನುವಾರ ಗೋಶಾಲೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಶಾಲೆಗಳಲ್ಲಿಯೇ ಇದ್ದು ಗೋವುಗಳ ಸೇವೆ ಮಾಡಿದರೆ 10 ದಿನದೊಳಗೆ ರಕ್ತದೊತ್ತಡದ ಔಷಧಿಯ ಅಗತ್ಯ ಅರ್ಧದಷ್ಟು ಕಡಿಮೆಯಾಗುತ್ತದೆ. ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ತಮ್ಮ ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸಬೇಕೆಂದು ಅವರು ಸಲಹೆ ನೀಡಿದರು. ಕ್ಯಾನ್ಸರ್ ರೋಗಿಗಳು ಗೋಶಾಲೆಗಳನ್ನು ಸ್ವಚ್ಛಗೊಳಿಸಿ ಅಲ್ಲೇ ಉಳಿದುಕೊಂಡರೆ ಸಂಪೂರ್ಣ ಗುಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಸಗಣಿಯಿಂದ ಮಾಡಿದ ಕಸವನ್ನು ಸುಟ್ಟರೆ ಸೊಳ್ಳೆಗಳು ಹೋಗುತ್ತವೆ ಎಂದೂ ಅವರು ತಮ್ಮ ಸಂಶೋಧನೆಯನ್ನು ಬಹೊರಂಗಪಡಿಸಿದ್ದಾರೆ.
Peepal Media
Peepal Media · ದೇಶ ವಿಭಾಗ