ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸುರತ್ಕಲ್ ಟೋಲ್: ಹೋರಾಟಗಾರರಿಗೆ ನೋಟಿಸ್ ನೀಡಿರುವುದು ಪ್ರಜಾತಂತ್ರ ವಿರೋಧಿ- ಪತ್ರಕರ್ತ ನವೀನ್ ಸೂರಿಂಜೆ

PPeepal Media

Peepal Media ದೇಶ

• 2 ನಿಮಿಷದ ಓದು

ಸುರತ್ಕಲ್ ಟೋಲ್: ಹೋರಾಟಗಾರರಿಗೆ ನೋಟಿಸ್ ನೀಡಿರುವುದು ಪ್ರಜಾತಂತ್ರ ವಿರೋಧಿ- ಪತ್ರಕರ್ತ ನವೀನ್ ಸೂರಿಂಜೆ

ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ನೋಟಿಸ್ ಪೊಲೀಸರು ನೋಟಿಸ್ ನೀಡಿರುವ ಕುರಿತು ಪತ್ರಕರ್ತ ನವೀನ್‌ ಸೋರಿಂಜೆ ಅವರು ಪ್ರತಿಕ್ರಿಯಿಸಿದ್ದು ಇದು ಪ್ರಜಾತಂತ್ರ ವಿರೋಧಿ ಎಂದು ಖಂಡಿಸಿದ್ದಾರೆ.

ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬರಹ ಇಲ್ಲಿದೆ.

ಮಂಗಳೂರಿನ ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ಪೊಲೀಸರು ಸಿಆರ್ ಪಿಸಿ 107 ರಡಿಯಲ್ಲಿ ನೋಟಿಸ್ ನೀಡಿರುವುದು ವಿಧಾನಸಭೆಯ ನಡವಳಿಕೆ ಕಾರ್ಯವಿಧಾನ ನಿಯಮಾವಳಿಗಳು ಮತ್ತು ಹೈಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಸುರತ್ಕಲ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಗೇಟ್ ಅಕ್ರಮ ಎಂದು ಆರೋಪಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ಟೋಲ್ ವಿರೋಧಿ ಹೋರಾಟ ಸಮಿತಿ ಹಲವು ಸಮಯಗಳಿಂದ ಕಾರ್ಯಾಚರಿಸುತ್ತಿದೆ. ಈ ಸಮಿತಿಯು ಈಗಾಗಲೇ ಹಲವಾರು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದೆ. ಸಿಆರ್ ಪಿಸಿ 107 ಅಡಿಯಲ್ಲಿ ನೋಟಿಸ್ ನೀಡಬೇಕಾದರೆ ವ್ಯಕ್ತಿಯು ಸಮಾಜದ ಶಾಂತಿಗೆ ಭಂಗ ತರುವ ವ್ಯಕ್ತಿಯಾಗಿರಬೇಕು. ನೋಟಿಸ್ ನಲ್ಲಿ ಹೋರಾಟಗಾರರಿಗೆ ಏಕವಚನದ ಬಳಸಿದ್ದಲ್ಲದೆ ಶಾಂತಿಗೆ ಭಂಗ ತರುವ ಕಿಡಿಗೇಡಿ ಎಂದು ಉಲ್ಲೇಖಿಸಲಾಗಿದೆ. ಕಿಡಿಗೇಡಿ ಆಗಿದ್ದಲ್ಲಿ ನೋಟಿಸ್ ನೀಡುವ 24 ಗಂಟೆಗಳ ಮೊದಲು ಅದೇ ಹೋರಾಟಗಾರರ ಜೊತೆ ಸಭೆ ನಡೆಸಿದ್ದೇಕೆ ? ಕಿಟಿಗೇಡಿಗಳಾಗಿದ್ದಲ್ಲಿ ಅವರ ಜೊತೆ ಟೀ ಕಾಫಿ ಜೊತೆ ಮಾತುಕತೆ ನಡೆಸಿ ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದೇಕೆ ?

ಸಿಆರ್ ಪಿಸಿ 107 ಕಲಂ ದುರುಪಯೋಗ ಆಗುತ್ತಿದೆ ಎಂದುಕೊಂಡೇ ಕರ್ನಾಟಕ ಹೈಕೋರ್ಟ್ 2018 ಜುಲೈ 28 ರಂದು ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ರಾಜಾಜಿನಗರದ ಹೋರಾಟಗಾರ್ತಿ ಗೀತಾ ಮಿಶ್ರ ವಿರುದ್ದ ಪೊಲೀಸರು ಸಿಆರ್ ಪಿಸಿ 107 ನೋಟಿಸ್ ನೀಡಿದಾಗ ಅವರು ಅದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದರು. ಈ ಸಂದರ್ಭ ಹೈಕೋರ್ಟ್ ನ್ಯಾಯಪೀಠವು “ಯಾವ್ಯಾವ ಸಂದರ್ಭಗಳಲ್ಲಿ ಸೆಕ್ಷನ್‌ 107 ಬಳಸಬಹುದು ? ಹೇಗೆ ಬಳಸಬಹುದು? ಎಂಬ ಬಗ್ಗೆ ಸುತ್ತೋಲೆ ಹೊರಡಿಸುವಂತೆ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. ಜೊತೆಗೆ ಕಲಂ 107 ನಂತೆ ಹೋರಾಟಗಾರರ ಮೇಲೆ ಎಫ್ಐಆರ್ ಹಾಕುವಂತಿಲ್ಲ ಎಂದು ಆದೇಶ ನೀಡಿ ಎಫ್ಐಆರ್ ಮತ್ತು ನೋಟಿಸನ್ನು ರದ್ದು ಮಾಡಿತ್ತು.

ಜನರ ಪರವಾಗಿನ ಹೋರಾಟವನ್ನು ಕಾನೂನು ಸುವ್ಯವಸ್ಥೆಗೆ ಅಡ್ಡಿ, ಶಾಂತಿ ಭಂಗ ಎಂದು ಕರೆಯಬಹುದೇ ? ಗೀತಾ ಮಿಶ್ರ ವರ್ಸಸ್ ಕರ್ನಾಟಕ ಸರ್ಕಾರ ಕೇಸ್ ನಲ್ಲಿ ನ್ಯಾಯಾಲಯ ನೀಡಿರುವ ನಿರ್ದೇಶನದ ಪ್ರಕಾರ ಹೋರಾಟ ಎನ್ನುವುದು ಶಾಂತಿಭಂಗ ಆಗುವುದಿಲ್ಲ. ಆ ಕಾರಣಕ್ಕಾಗಿ ಹೊಸದಾಗಿ ಸುತ್ತೋಲೆ ಹೊರಡಿಸಲು ನಿರ್ದೇಶನ ನೀಡಿತ್ತು.

ಟೋಲ್ “ನಿಯಮ ಬಾಹಿರ” ಎಂದು ವಿಧಾನಸಭೆಯಲ್ಲಿ ಸರ್ಕಾರ ಅಧಿಕೃತವಾಗಿ ಸ್ಪಷ್ಟಪಡಿಸಿತ್ತು. ಲೋಕೋಪಯೋಗಿ ಸಚಿವರು ಉತ್ತರ ನೀಡಿ ಇದೊಂದು ನಿಯಮಬಾಹಿರ ಟೋಲ್ ಗೇಟ್ ಆಗಿದ್ದು ತೆರವುಗೊಳಿಸಲಾಗುವುದು ಎಂದಿದ್ದರು. ಸರ್ಕಾರ ವಿಧಾನಸಭೆಯಲ್ಲಿ ನೀಡಿದ ಭರವಸೆಯನ್ನು ಕರ್ನಾಟಕ ವಿಧಾನಸಭೆ ನಡವಳಿಕೆಗಳು ಮತ್ತು ಕಾರ್ಯವಿಧಾನ ನಿಯಮ 281 (ಎ) (ಬಿ) ಯಂತೆ ಶೀಘ್ರವಾಗಿ ಈಡೇರಿಸಬೇಕು.‌ ಹಾಗೊಂದು ವೇಳೆ ಭರವಸೆಯನ್ನು ಈಡೇರಿಸದಿದ್ದರೆ ವಿಧಾನಸಭೆಯ ಭರವಸೆಯ ಸಮಿತಿ ವಿಚಾರಣೆ ನಡೆಸಿ ವಿಧಾನಸಭಾಧ್ಯಕ್ಷರಿಗೆ ವರದಿ ನೀಡಬೇಕು. ಹಾಗಾಗಿ ಹೋರಾಟಗಾರರಿಗೆ ನೀಡಲಾದ ನೋಟಿಸ್ ನಲ್ಲಿ “ಸರ್ಕಾರದಿಂದ ಸ್ಥಾಪಿಸಲಾದ ಟೋಲ್ ಗೇಟ್ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ದವಾಗಿ ನಡೆಯುತ್ತಿರುವ ಹೋರಾಟ” ಎಂದು ಉಲ್ಲೇಖಿಸಿರುವುದು ಸರಿಯಲ್ಲ. ವಿಧಾನಸಭೆಯಲ್ಲಿ ಸರ್ಕಾರ ಈ ಟೋಲ್ ಬಗ್ಗೆ ತಳೆದಿರುವ ನಿಲುವಿಗೆ ವಿರುದ್ದವಾಗಿ ಪೊಲೀಸರ ನಡವಳಿಕೆ ಆಶ್ಚರ್ಯಕರವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರವನ್ನು ಪ್ರತಿನಿಧಿಸುವ ಯಾವುದೇ ಶಾಸಕರು “ವಿಧಾನಸಭೆಯಲ್ಲಿ ಸರ್ಕಾರ ನೀಡಿರುವ ಭರವಸೆ ತನ್ನ ಕ್ಷೇತ್ರದಲ್ಲಿ ಜಾರಿಯಾಗಿದೆಯೇ ?” ಎಂದು ಪರಾಮರ್ಶಿಸಬೇಕು. ಶಾಸನ ರಚನಕಾರನ ಮೂಲಭೂತ ಕರ್ತವ್ಯವಿದು. ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಭರವಸೆಯ ಜಾರಿಗೆ ಅಡ್ಡಿಯುಂಟು ಮಾಡುವವರ ವಿರುದ್ದ ಶಾಸಕರು ಹಕ್ಕುಚ್ಯುತಿ ಮಂಡಿಸಿ ಶಿಕ್ಷಿಸಬೇಕೇ ಹೊರತು ಜಾರಿಗೆ ಆಗ್ರಹಿಸುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವುದು ಜನವಿರೋಧಿ ಮಾತ್ರವಲ್ಲ ಪ್ರಜಾತಂತ್ರ ವಿರೋಧಿಯಾಗಿದೆ ಎಂದು ಪತ್ರಕರ್ತ ನವೀನ್‌ ಸೋರಿಂಜೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನವೀನ್ ಸೂರಿಂಜೆ

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು