ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

‘ವಾಹನ ಸವಾರ’ರಿಗೆ ಬಿಗ್ ಶಾಕ್: ಗ್ಯಾಸ್‌ ಇಳಿಸಿ ಟೋಲ್‌ ಹೆಚ್ಚಿಸಿದ ಕೇಂದ್ರ

PPeepal Media Desk

Peepal Media Desk ದೇಶ

• 1 ನಿಮಿಷದ ಓದು

‘ವಾಹನ ಸವಾರ’ರಿಗೆ ಬಿಗ್ ಶಾಕ್: ಗ್ಯಾಸ್‌ ಇಳಿಸಿ ಟೋಲ್‌ ಹೆಚ್ಚಿಸಿದ ಕೇಂದ್ರ

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದೇವಿಹಳ್ಳಿ ಎಕ್ಸ್ ಪ್ರೆಸ್ ಹೈವೇಯಲ್ಲಿನ ಲ್ಯಾಂಕೋ ಟೋಲ್ ಸೇರಿದಂತೆ ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿನ ಟೋಲ್ ಶುಲ್ಕವನ್ನು, ಆಗಸ್ಟ್.31ರ ನಿನ್ನೆ ಮಧ್ಯರಾತ್ರಿಯಿಂದ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಇಂದು ಪ್ರಯಾಣಿಸುವಂತ ವಾಹನ ಸವಾರರಿಗೆ ಟೋಲ್ ದರ ಏರಿಕೆಯ ಬಿಸಿ ಮುಟ್ಟಲಿದೆ.

ಹೌದು ನಿನ್ನೆ ಮಧ್ಯರಾತ್ರಿಯಿಂದ ನೆಲಮಂಗಲ-ಹಾಸನ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವಾಹನ ಸವಾರರಿಗೆ ದುಬಾರಿ ಟೋಲ್ ದರದ ಬರೆ ಬಿದ್ದಿದೆ. ಸೆಪ್ಟೆಂಬರ್ 1ರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಹೀಗಿದೆ ಹೊಸ ಟೋಲ್ ದರ

  • ಕಾರುಗಳಿಗೆ ರೂ.50 ರಿಂದ 55 ರೂ.ಗೆ ಹೆಚ್ಚಳ ಮಾಡಲಾಗಿದೆ.
  • ಲಘು ಮೋಟಾರು ವಾಹನಗಳ ಶುಲ್ಕವನ್ನು 90 ರಿಂದ 100ರೂ.ಗೆ ಹೆಚ್ಚಿಸಲಾಗಿದೆ.
  • ಬಸ್, ಟ್ರಕ್ ಗಳ ಟೋಲ್ ಶುಲ್ಕ ರೂ.185 ರಿಂದ 200ರಕ್ಕೆ ಏರಿಕೆ ಮಾಡಲಾಗಿದೆ.
  • ಮಲ್ಟಿ ಆಕ್ಸಲ್ ವೆಹಿಕಲ್, ಬೃಹತ್ ನಿರ್ಮಾಣ ಯಂತ್ರೋಪಕರಣ ಅಥವಾ ಅರ್ಥ್ ಮೂವಿಂಗ್ ಸಾಧನಗಳಿಗೆ ವಿಧಿಸಲಾಗುತ್ತಿದ್ದಂತ ಶುಲ್ಕವನ್ನು ರೂ.320 ರಿಂದ 485ಕ್ಕೆ ಹೆಚ್ಚಿಸಲಾಗಿದೆ.

ಇನ್ನು ಕಾರು, ವ್ಯಾನ್, ಜೀಪ್, ಎಲ್‌ಎಂವಿ ವಾಹನಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ ರೂ.1720 ಮಾಡಿದ್ದರೇ, ಲಘು ವಾಣಿಜ್ಯ ವಾಹನ ಅಂದರೇ ಎಲ್‌ಎಂವಿಗಳಿಗೆ ರೂ.3005 ಟೋಲ್ ಶುಲ್ಕ ನಿಗಧಿ ಪಡಿಸಲಾಗಿದೆ. ಟ್ರಕ್, ಬಸ್ ಗಳಿಗೆ ರೂ.6010, ಮಲ್ಟಿ ಆಕ್ಸಲ್ ವೆಹಿಕಲ್ ಗಳಿಗೆ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಗಳಿಗೆ ಮಾಸಿಕ ಪಾಸ್ ದರ ರೂ.9665 ನಿಗದಿ ಪಡಿಸಿದೆ.

ದೇಶದ ವಿವಿಧ ಟೋಲ್ ಗಳಲ್ಲಿ ಟೋಲ್ ದರ ಬಹುತೇಕ ಇದೇ ದರದಲ್ಲಿ ಇರಲಿದೆ. ಈ ದರಗಳು ಕಳೆದ ಕೆಲ ತಿಂಗಳ ಹಿಂದೆಯೇ ಹೆದ್ದಾರಿ ಪ್ರಾಧಿಕಾರದಿಂದ ಮಾಡಿದಂತ ಆದೇಶವಾಗಿದೆ. ಅಂತಹ ಆದೇಶವು ಇಂದಿನಿಂದ ಜಾರಿಗೊಂಡಿದೆ. ಹೀಗಾಗಿ ಇಂದಿನಿಂದ ಟೋಲ್ ದರ ಹೆಚ್ಚಳದ ಬಿಸಿ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಮುಟ್ಟಲಿದೆ. ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ಮಂತ್ರಾಲಯದಡಿ ಬರುತ್ತವೆ.

ವಿಷಯಗಳು: #india #karnataka #news #peepal #peepalmedia
PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು