Tuesday, June 18, 2024

ಸತ್ಯ | ನ್ಯಾಯ |ಧರ್ಮ

ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಹಡಗಿನ ಮೇಲೆ ಗುಂಡಿನ ದಾಳಿ

ತಮಿಳುನಾಡು: ಶ್ರೀಲಂಕಾ ನೌಕಾಪಡೆಯ ಗುಂಡಿನ ದಾಳಿಯಲ್ಲಿ ಭಾರತೀಯ ಮೀನುಗಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುದುಕೊಟ್ಟೈ ಜಿಲ್ಲೆಯ ಕೋಡಿಯಾಕರೈ ಸಮುದ್ರ ಪ್ರದೇಶದಲ್ಲಿ ನಡೆದಿದೆ.

ಗಾಯಾಳು ಭಾರತೀಯ ಮೀನುಗಾರ ಕೆ.ವೀರವೆಲ್(32) ಎಂದು ತಿಳಿದು ಬಂದಿದೆ.

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಚನ್ನೈ ಸಾರ್ವಜನಿಕ ಸಂಪರ್ಕ ರಕ್ಷಣಾ ಇಲಾಖೆ, ಅಕ್ಟೋಬರ್ 21, 2022 ರ ಮುಂಜಾನೆ, ಭಾರತ ಶ್ರೀಲಂಕಾ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ (IMBL) ಬಳಿ ಪಾಲ್ಕ್ ಕೊಲ್ಲಿಯಲ್ಲಿ ಹಡಗು ಗಸ್ತು ತಿರುಗುತ್ತಿದ್ದಾಗ, ಭಾರತೀಯ ನೌಕಾಪಡೆಯ ದೋಣಿಯು ಅನುಮಾನಾಸ್ಪದವಾಗಿ ತಿರುಗುತ್ತಿದನ್ನು ಗಮನಿಸಿದೆ.

ನಂತರ ಹಲವು ಬಾರಿ ದೋಣಿಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದರೂ ದೋಣಿ ನಿಲ್ಲಲಿಲ್ಲ. ಈ ಹಿನ್ನಲೆಯಲ್ಲಿ, ಹಡಗು ಕಾರ್ಯಾಚರಣೆಯ ಕಾರ್ಯವಿಧಾನಗಳ ಪ್ರಕಾರ, ದೋಣಿಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಲು ಗುಂಡು ಹಾರಿಸಲಾಗಿದೆ. ಈ ವೇಳೆ ಗುಂಡು ದೋಣಿಯಲ್ಲಿದ್ದ ಸಿಬ್ಬಂದಿಗೆ ತಗಲಿ, ಅವರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಗಾಯಗೊಂಡ ವ್ಯಕ್ತಿಗೆ ಹಡಗಿನ ಮೂಲಕ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಮೂಲಕ ಆತನನ್ನು ಸ್ಥಳಾಂತರಿಸಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ರಾಮನಾಥಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವೈದ್ಯರ ಮಾಹಿತಿ ಪ್ರಕಾರ ಆತನಿಗೆ ಯಾವುದೇ ಅಪಾಯವಿಲ್ಲವೆಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು