Friday, October 24, 2025

ಸತ್ಯ | ನ್ಯಾಯ |ಧರ್ಮ

ಸೋಲಿನ ಭೀತಿ ಮೆಟ್ಟಿ ನಿಂತು ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತದ ವನತೆಯರು

ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನ್ಯೂಜಿಲೆಂಡ್ ವಿರುದ್ಧ 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ ಅನ್ನು 50 ಓವರ್‌ಗಳ ಬದಲು 49 ಓವರ್‌ಗಳಿಗೆ ಇಳಿಸಲಾಯಿತು. ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್‌ಗೆ 44 ಓವರ್‌ಗಳಲ್ಲಿ ಗೆಲ್ಲಲು 325 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 8 ವಿಕೆಟ್ ನಷ್ಟಕ್ಕೆ 271 ರನ್ ಪೇರಿಸಿ ಸೋಲು ಅನುಭವಿಸಿತು.

ನ್ಯೂಜಿಲ್ಯಾಂಡ್ ಗೆ ಆರಂಭಿಕ ಆಘಾತ ಎದುರಾಯಿತು. ಸೂಜಿ ಬೇಟ್ಸ್ 1 ರನ್ ಗಳಿಸಿ ಔಟಾದರು. ಜಾರ್ಜಿಯಾ ಪ್ಲಿಮ್ಮರ್ 30, ಅಮೆಲಿಯಾ ಕೆರ್ 45, ಸೋಫಿ ಡಿವೈನ್ 6, ಬ್ರೂಕ್ ಹ್ಯಾಲಿಡೇ 81, ಮ್ಯಾಡಿ ಗ್ರೀನ್ 18 ರನ್ ಗಳಿಸಿ ಔಟಾದರು.

ಇಸಾಬೆಲ್ಲಾ ಗೇಜ್ ಅಜೇಯ 65 ರನ್ ಗಳಿಸಿದರು. ಭಾರತದ ಪರ ಬೌಲಿಂಗ್ ನಲ್ಲಿ ರೇಣುಕಾಸಿಂಗ್, ಕ್ರಾಂತಿ ಗೌಡ್ ತಲಾ 2 ವಿಕೆಟ್ ಪಡೆದರೇ ನೇಹಾ ರಾಣಾ, ಚರಣಿ, ಪ್ರತೀಕಾ ರಾವಲ್ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 53 ರನ್ ಗಳಿಂದ ಸೋಲು ಅನುಭವಿಸಿತು. ಸೋಲಿನ ಭೀತಿ ಮೆಟ್ಟಿ ನಿಂತು ಮಹಿಳಾ ವಿಶ್ವಕಪ್ ಸೆಮಿಫೈನಲ್‌ಗೆ ಭಾರತ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸುವ ಮೂಲಕ ಅಮೋಘ ಸಾಧನೆ ಮಾಡಿದೆ. ನ್ಯೂಜಿಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯವು ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ಯಂತಿತ್ತು; ಒಂದು ವೇಳೆ ಈ ಪಂದ್ಯದಲ್ಲಿ ಸೋತಿದ್ದರೆ, ಬಹುತೇಕ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇತ್ತು. ಆದರೆ, ಈ ಮಹತ್ವವನ್ನು ಅರಿತುಕೊಂಡ ಭಾರತೀಯ ವನಿತೆಯರು ಒತ್ತಡವನ್ನು ಮೆಟ್ಟಿನಿಂತು ಆಡಿದ ರೀತಿ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಗೆಲುವಿನ ನಿರ್ಧಾರದೊಂದಿಗೆ ಕಣಕ್ಕಿಳಿದ ಭಾರತ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಸಾಧ್ಯವೆನಿಸುವ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಂಡು, ಅಂತಿಮವಾಗಿ 53 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಐತಿಹಾಸಿಕ ಜೊತೆಯಾಟ

ಸ್ಮೃತಿ ಮಂಧಾನ 95 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 109 ರನ್ ಗಳಿಸಿದರು. ಇದು ಮಂಧಾನ ಅವರ 14ನೇ ಏಕದಿನ ಶತಕ ಮತ್ತು ಈ ವರ್ಷ ಅವರ 5ನೇ ಶತಕವಾಗಿದೆ. ಪ್ರತಿಕಾ ರಾವಲ್ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 122 ರನ್ ಗಳಿಸಿದರು. ಈ ಎರಡರ ಜೊತೆಗೆ, ಜೆಮಿಮಾ ರೊಡ್ರಿಗಸ್ 55 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 76 ರನ್ ಗಳಿಸಿದರು. ಭಾರತ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 340 ರನ್ ಗಳಿಸಿತು.

ಅಂಕಪಟ್ಟಿಯಲ್ಲಿ ಭಾರತ 6 ಪಂದ್ಯಗಳಲ್ಲಿ 3 ಪಂದ್ಯಗಳ ಗೆಲುವಿನ ಮೂಲಕ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲ್ಯಾಂಡ್ 6 ಪಂದ್ಯಗಳಲ್ಲಿ ಒಂದು ಪಂದ್ಯದ ಗೆಲುವಿನೊಂದಿಗೆ ನಾಲ್ಕು ಅಂಕಗಳನ್ನು ಪಡೆದು ಐದನೇ ಸ್ಥಾನದಲ್ಲಿದೆ. ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾದದ್ದು ಆರಂಭಿಕ ಆಟಗಾರ್ತಿಯರಾದ ಪ್ರತೀಕಾ ಮತ್ತು ಮಂದಾನಾ ಅವರ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ. ಈ ಇಬ್ಬರು ಆಟಗಾರ್ತಿಯರು 212 ರನ್‌ಗಳ ದಾಖಲೆಯ ಜೊತೆಯಾಟವಾಡಿ, ಎದುರಾಳಿ ಬೌಲರ್‌ಗಳನ್ನು ಸಂಪೂರ್ಣವಾಗಿ ಕಂಗೆಡಿಸಿದರು. ಅವರ ಸಮಯೋಚಿತ ಮತ್ತು ಆಕ್ರಮಣಕಾರಿ ಇನ್ನಿಂಗ್ಸ್‌ಗಳು ಭಾರತದ ಇನ್ನಿಂಗ್ಸ್‌ಗೆ ಬೃಹತ್ ಮೊತ್ತದ ಬಲ ನೀಡಿ, ಎದುರಾಳಿಗೆ ಕಠಿಣ ಸವಾಲನ್ನು ಒಡ್ಡಿದವು.

ಬೌಲರ್‌ಗಳ ಸಂಘಟಿತ ಪ್ರದರ್ಶನವೇ ನಿರ್ಣಾಯಕ
ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಭಾರತದ ಬೌಲಿಂಗ್ ವಿಭಾಗವು ಪ್ರಬಲ ಪ್ರತಿರೋಧವನ್ನು ಒಡ್ಡಿತು. ಯುವ ವೇಗಿ ರೇಣುಕಾ ಅವರ ಸಂಘಟಿತ ದಾಳಿ, ಹಾಗೂ ಕ್ರಾಂತಿ ಮತ್ತು ಚಾರಣಿ ಅವರ ಪರಿಣಾಮಕಾರಿ ಬೌಲಿಂಗ್ ಪಂದ್ಯದ ಗೆಲುವಿಗೆ ನಿರ್ಣಾಯಕವಾಯಿತು. ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಬಳಿಸಿದ ಈ ಬೌಲರ್‌ಗಳ ಕರಾರುವಕ್ಕಾದ ಪ್ರದರ್ಶನದಿಂದಾಗಿ, ನ್ಯೂಜಿಲೆಂಡ್ ತಂಡವು ಗುರಿ ತಲುಪಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ, ಸೋಲಿನ ಭೀತಿಯಿದ್ದಾಗಲೂ, ಸಂಪೂರ್ಣ ತಂಡದ ಮನೋಬಲ ಮತ್ತು ವೈಯಕ್ತಿಕ ಪ್ರದರ್ಶನಗಳ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಭಾರತದ ಈ ಗೆಲುವು, ಕ್ರಿಕೆಟ್ ಜಗತ್ತಿಗೆ ಸ್ಫೂರ್ತಿಯ ಸಂದೇಶ ನೀಡಿದೆ. ಮುಂದಿನ ಸುತ್ತಿನಲ್ಲಿಯೂ ಇದೇ ಲಯವನ್ನು ಕಾಯ್ದುಕೊಂಡು ಪ್ರಶಸ್ತಿಯತ್ತ ಮುನ್ನುಗ್ಗಲು ತಂಡ ಸಜ್ಜಾಗಿದೆ.ಕೊನೆಗೂ ಒತ್ತಡದ ಪರಿಸ್ಥಿತಿಯಲ್ಲಿ ಒತ್ತಡವನ್ನು ಮೆಟ್ಟಿ ನಿಂತ ನಮ್ಮ ವೀರ ವನಿತೆಯರಿಗೆ ಮುಂದಿನ ಪಂದ್ಯ ಗಳಲ್ಲಿ ಗೆಲುವು ತಮ್ಮದಾಗಲಿ ಎಂದು ಆಶಿಸುತ್ತೇನೆ.

ಆನಂದ್‌ ಮುಳಬಾಗಲಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page