Friday, June 14, 2024

ಸತ್ಯ | ನ್ಯಾಯ |ಧರ್ಮ

ಇಂದೋರ್‌ಗೆ ಅತ್ಯುತ್ತಮ ಸ್ಮಾರ್ಟ್‌ ಸಿಟಿ ಪ್ರಶಸ್ತಿ

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟೀಸ್ ಮಿಷನ್‌ನ (Samart Cities Mission) ನಾಲ್ಕನೇ ಆವೃತ್ತಿಯಲ್ಲಿ ಇಂದೋರ್ ಎರಡನೇ ಬಾರಿಗೆ ಭಾರತದ ಅತ್ಯುತ್ತಮ ಸ್ಮಾರ್ಟ್ ಸಿಟಿ ಎಂದು ಪ್ರಶಸ್ತಿ ಪಡೆದುಕೊಂಡಿದೆ. ಅಗಸ್ಟ್‌ 25, ಶುಕ್ರವಾರದಂದು ಇದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.

ಭಾರತದಲ್ಲಿ ನೂರು ಸ್ಮಾರ್ಟ್‌ ಸಿಟಿಗಳಿದ್ದು ಇಂದೋರ್‌ ನ ನಂತರದ ಸ್ಥಾನಗಳನ್ನು ಸೂರತ್‌ ಮತ್ತು ಆಗ್ರಾ ಪಡೆದುಕೊಂಡಿದೆ. ಕೋವಿಡ್‌ ಸಾಂಕ್ರಮಿಕದ ಒಂದು ವರ್ಷದ ನಂತರ ಈ ಸ್ಪರ್ಧೆ ಮತ್ತೆ ಆರಂಭವಾಗಿದೆ.

ಮಧ್ಯಪ್ರದೇಶ ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರೆ ನಂತರದ ಸ್ಥಾನವನ್ನು ತಮಿಳುನಾಡು ಪಡೆದುಕೊಂಡಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮೂರನೇ ಸ್ಥಾನವನ್ನು ಹಂಚಿಕೊಂಡಿವೆ. ಚಂಡೀಗಢವನ್ನು ಅತ್ಯುತ್ತಮ ಕೇಂದ್ರಾಡಳಿತ ಪ್ರದೇಶವೆಂದು ಪರಿಗಣಿಸಲಾಗಿದೆ.

ನಗರದ ಸ್ವಚ್ಚತೆ ಹಾಗೂ ಸುಸ್ಥಿರತೆಯಲ್ಲಿ ಮಾಡಿರುವ ಸಾಧನೆಗಳ ಕಾರಣಕ್ಕೆ ಇಂದೋರ್‌ ‘ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ’ ಪಡೆದುಕೊಂಡಿದೆ. 2015ರಲ್ಲಿ ಸ್ಮಾರ್ಟ್‌ ಸಿಟೀಸ್‌ ಮಿಷನ್‌ ಆರಂಭವಾದಾಗಿನಿಂದ ಇಂದೋರ್‌ ಅನೇಕ ಕಾರಣಗಳಿಗೆ ಮನ್ನಣೆಯನ್ನು ಪಡೆದಿತ್ತು. ಐದು ವರ್ಷಗಳ ಕಾಲ ಸ್ವಚ್ಚ ನಗರ ಎಂಬ ಹೆಸರನ್ನು ಪಡೆದುಕೊಂಡು ಬಂದಿದೆ. ತಂತ್ರಜ್ಞಾನ ಬಳಸಿ ಘನ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಇಂದೋರ್‌ ಕಸ ಸಂಗ್ರಹಣೆಯಲ್ಲಿ ತನ್ನ ಸಾಧನೆಯನ್ನು ತೋರಿಸಿದೆ. ಸ್ಮಾರ್ಟ್‌ ಸಿಟಿಯ ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸಿದೆ.
ಕೊಯಮತ್ತೂರಿಗೆ ಕೆರೆಗಳ ಪುನರುಜ್ಜೀವನ ಹಾಗೂ ಮಾದರಿ ರಸ್ತೆಗಳ ನಿರ್ಮಾಣಕ್ಕಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಬಾರಿ ಸ್ಮಾರ್ಟ್‌ ಸಿಟಿಸ್‌ ಮಿಷನ್‌ ನಲ್ಲಿ ಆರು ವಿಭಾಗದ ಪ್ರಶಸ್ತಿಗಳನ್ನು ನೀಡಲಾಗಿದೆ. ಹತ್ತು ಬೇರೆ ಬೇರೆ ವಿಷಯಗಳಲ್ಲಿ Project Award, ಎರಡು ವಿಷಯಗಳಲ್ಲಿ Innovation Award, National/Zonal City Awards, State Awards, UT Award, and Partners Awards ಮೂರಿ ವಿಷಯಗಳಿಗೆ ನೀಡಲಾಗಿದೆ.
ಪ್ರಾಜೆಕ್ಟ್ ವರ್ಗದ ಅಡಿಯಲ್ಲಿ, ‘mobility’, ‘built environment’, ‘governance’, ‘integrated command and control centre (ICCC) business model’ ಹಾಗೂ ‘Covid innovation’ ಪ್ರಶಸ್ತಿ ನೀಡಲಾಗಿದೆ.
ಸೆಪ್ಟೆಂಬರ್ 27 ರಂದು ಇಂದೋರ್‌ನಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಈ ಪ್ರಶಸ್ತಿ ವಿತರಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು