Tuesday, October 7, 2025

ಸತ್ಯ | ನ್ಯಾಯ |ಧರ್ಮ

ಇಂದು ಜಾಗತಿಕ ʼಕೈ ತೊಳೆಯುವ ದಿನʼ

ಬೆಂಗಳೂರು: ಸ್ವಚ್ಚತೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದೆಂಬ ಜಾಗೃತಿಗಾಗಿ ಅಕ್ಟೋಬರ್‌ 15 ರಂದು ಜಾಗತಿಕ ಕೈ ತೊಳೆಯುವ ದಿನ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಘೋಷಿಸಿದ್ದು, ನಾಡಿನಾದ್ಯಂತ ಇಂದು ಕೈ ತೊಳೆದು ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಈ ವಿಶೇಷ ದಿನವನ್ನು ಆಚರಿಸುತ್ತಾರೆ.

ಮೊದಲ ಬಾರಿಗೆ ಜಾಗತಿಕ ಕೈ ತೊಳೆಯುವ ದಿನವನ್ನು 2008ರಲ್ಲಿ ಆಚರಿಸಲಾಯಿತು.

ಕೈ ತೊಳೆಯುವುದು ಸರಳ, ಇದು ಸೂಕ್ಷ್ಮಾಣು ಜೀವಿಗಳ ಹರಡುವಿಕೆಯನ್ನು ತಡೆಯುವ ಅತ್ಯಂತ ಪರಿಣಾಮಕಾರಿಯಾಗಿದೆ. ನಿಯಮಿತವಾಗಿ ಕೈ ತೊಳೆಯುತಿದ್ದರೆ ಕುಟುಂಬ ಆರೋಗ್ಯರವಾಗಿರುತ್ತದೆ. ಕೈ ತೊಳೆಯುವುದು ಜೀವ ಉಳಿಸುವ ಮುಂಜಾಗ್ರತಾ ಕ್ರಮವಾಗಿದೆ. ಕೈ ತೊಳೆಯುವ ನಡುವಳಿಕೆಯನ್ನು ಶಾಶ್ವತವಾಗಿ ಬದಲಾಯಿಸಲು ನಮಗೆ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ ಎಂದು ಕರ್ನಾಟಕ ಆರೋಗ್ಯ ಇಲಾಖೆ ರಾಜ್ಯದ ಜನತೆಗೆ ಸ್ವಚ್ಚತೆಯಿಂದಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page