Tuesday, May 27, 2025

ಸತ್ಯ | ನ್ಯಾಯ |ಧರ್ಮ

ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ: ಸಿಆರ್‌ಪಿಎಫ್ ಜವಾನ ಮೋತಿ ರಾಮ್ ಜಾಟ್ ಬಂಧನ

ದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಸೇರಿದ ಮೋತಿ ರಾಮ್ ಜಾಟ್ ಎನ್ನುವ ಜವಾನನ್ನು ಬಂಧಿಸಿದೆ.

ಹೊಸದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯವು ಅವನನ್ನು ಮುಂದಿನ ತಿಂಗಳು 6ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿದೆ. NIA ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನೀಡಲಾದ ವಿವರಗಳ ಪ್ರಕಾರ, ಮೋತಿ ರಾಮ್ 2023ರಿಂದ ಭಾರತದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ರಹಸ್ಯವಾಗಿ ಕಳುಹಿಸುತ್ತಿದ್ದ.

ಇದರ ಬದಲಿಗೆ, ಅವನು ಪಾಕಿಸ್ತಾನಿ ಸಂಘಟನೆಯಿಂದ ವಿವಿಧ ವಿಧಾನಗಳ ಮೂಲಕ ಹಣವನ್ನು ಪಡೆಯುತ್ತಿದ್ದ. ಈ ಕೃತ್ಯಗಳು ದೇಶದ ಭದ್ರತೆ, ಭಾರತೀಯರ ಜೀವನ ಮತ್ತು ದೇಶಕ್ಕೆ ಭೇಟಿ ನೀಡುವ ಜನರ ಮೇಲೆ ಪರಿಣಾಮ ಬೀರುತ್ತವೆ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page