Tuesday, June 18, 2024

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಹುದ್ದೆಯಲ್ಲೂ ದಕ್ಷಿಣಕ್ಕೆ ಅನ್ಯಾಯ! ಇದುವರೆಗಿನ 15 ಪ್ರಧಾನಿಗಳಲ್ಲಿ ದಕ್ಷಿಣದವರು ಇಬ್ಬರೇ

ಭಾರತದ ರಾಜಕೀಯದಲ್ಲಿ ಎಲ್ಲಾ ವಿಧದಲ್ಲೂ ಅನ್ಯಾಯಕ್ಕೆ ಒಳಗಾಗುವುದು ದಕ್ಷಿಣದ ರಾಜ್ಯಗಳು. ಪ್ರಧಾನಿಗಳ ವಿಷಯದಲ್ಲೂ ದಕ್ಷಿಣಕ್ಕೆ ಸಿಕ್ಕಿರುವುದು ಬಹಳ ಸಣ್ಣ ಪ್ರಾತಿನಿಧ್ಯವೆನ್ನುವುದು ವಿಷಾದನೀಯ. ಇದಕ್ಕೆ ಕಾಂಗ್ರೆಸ್‌, ಬಿಜೆಪಿ ಎನ್ನುವ ಭೇದವೇ ಇಲ್ಲದೆ ಅಧಿಕಾರ ಉತ್ತರದಲ್ಲಿಯೇ ಕೇಂದ್ರಿಕೃತಗೊಂಡಿದೆ.

76 ವರ್ಷಗಳ ಸ್ವತಂತ್ರ ಭಾರತದಲ್ಲಿ ಇದುವರೆಗೆ 15 ಮಂದಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ಜವಾಹರಲಾಲ್ ನೆಹರು ಅವರು 16 ವರ್ಷ 286 ದಿನಗಳ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರೆ, ಗುಲ್ಜಾರಿಲಾಲ್ ನಂದಾ ಅವರು ಎರಡು ಅವಧಿಗಳಲ್ಲಿ 26 ದಿನಗಳ ಕಡಿಮೆ ಅವಧಿಗೆ ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

29 ರಾಜ್ಯಗಳ ಪೈಕಿ 6 ರಾಜ್ಯಗಳು ಮಾತ್ರ ಪ್ರಧಾನಿಗಳನ್ನು ಕಂಡಿರುವುದು ಗಮನಾರ್ಹ. ಉತ್ತರದಿಂದ ಒಟ್ಟು 13 ಜನರು ಪ್ರಧಾನಿಯಾಗಿ ಸೇವೆ ಸಲ್ಲಿಸಿದರೆ, ದಕ್ಷಿಣದಿಂದ ಇಬ್ಬರು ಮಾತ್ರ ಪ್ರಧಾನಿಯಾಗಿ ಆಯ್ಕೆಯಾದರು.

ರಾಜ್ಯವಾರು ಪ್ರಧಾನಿಗಳ ವಿವರ

ಉತ್ತರ ಪ್ರದೇಶ – 7

ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ವಿಶ್ವನಾಥ್ ಪ್ರತಾಪ್ ಸಿಂಗ್, ಚಂದ್ರಶೇಖರ್, ಚರಣ್ ಸಿಂಗ್

ಪಂಜಾಬ್ – 3

ಮನಮೋಹನ್ ಸಿಂಗ್, ಗುಲ್ಜಾರಿಲಾಲ್ ನಂದಾ, ಐಕೆ ಗುಜ್ರಾಲ್

ಗುಜರಾತ್ – 2

ನರೇಂದ್ರ ಮೋದಿ, ಮೊರಾರ್ಜಿ ದೇಸಾಯಿ

ತೆಲಂಗಾಣ – 1

ಪಿ ವಿ ನರಸಿಂಹ ರಾವ್

ಮಧ್ಯಪ್ರದೇಶ – 1

ವಾಜಪೇಯಿ

ಕರ್ನಾಟಕ – 1

ಎಚ್ ಡಿ ದೇವೇಗೌಡ

ಪ್ರಧಾನಿಗಳ ಅಧಿಕಾರವಧಿ

ಜವಾಹರಲಾಲ್ ನೆಹರು (ಕಾಂಗ್ರೆಸ್) – 16 ವರ್ಷ 286 ದಿನಗಳು

ಇಂದಿರಾ ಗಾಂಧಿ (ಕಾಂಗ್ರೆಸ್) – 15 ವರ್ಷ 350 ದಿನಗಳು

ಮನಮೋಹನ್ ಸಿಂಗ್ (ಕಾಂಗ್ರೆಸ್)- 10 ವರ್ಷ 4 ದಿನಗಳು

ವಾಜಪೇಯಿ (ಬಿಜೆಪಿ) – 6 ವರ್ಷ 80 ದಿನಗಳು

ನರೇಂದ್ರ ಮೋದಿ (ಬಿಜೆಪಿ) – 9 ವರ್ಷ 315 ದಿನಗಳು

ರಾಜೀವ್ ಗಾಂಧಿ (ಕಾಂಗ್ರೆಸ್)- ಐದು ವರ್ಷ 32 ದಿನಗಳು

ಪಿವಿ ನರಸಿಂಹರಾವ್ (ಕಾಂಗ್ರೆಸ್) – ನಾಲ್ಕು ವರ್ಷಕ್ಕೆ 330 ದಿನಗಳು

ಮೊರಾರ್ಜಿದೇಶಾಯಿ (ಜನತಾ ಪಕ್ಷ) – ಎರಡು ವರ್ಷ 126 ದಿನಗಳು

ಲಾಲ್ ಬಹದ್ದೂರ್ ಶಾಸ್ತ್ರಿ (ಕಾಂಗ್ರೆಸ್) – ವರ್ಷದಲ್ಲಿ 216 ದಿನಗಳು

ವಿಶ್ವನಾಥ್ ಪ್ರತಾಪ್ ಸಿಂಗ್ (ಜೆಡಿ) – 343 ದಿನಗಳು

ಐಕೆ ಗುಜ್ರಾಲ್ (ಜೆಡಿ) – 332 ದಿನಗಳು

ಎಚ್.ಡಿ.ದೇವೇಗೌಡ (ಜೆಡಿ) – 324 ದಿನಗಳು

ಚಂದ್ರಶೇಖರ್ (ಸಮಾಜವಾದಿ ಜನತಾ ಪಕ್ಷ) – 223 ದಿನಗಳು

ಚರಣ್ ಸಿಂಗ್ (ಜೆಎನ್‌ಪಿ-ಜಾತ್ಯತೀತ) – 170 ದಿನಗಳು

ಗುಲ್ಜಾರಿಲಾಲ್ ನಂದಾ (ಕಾಂಗ್ರೆಸ್) – 26 ದಿನಗಳು

ಉತ್ತರದಿಂದ ಪ್ರಧಾನ ಮಂತ್ರಿಗಳು – 13

ದಕ್ಷಿಣದ ಪ್ರಧಾನ ಮಂತ್ರಿಗಳು- 2

ಇದುವರೆಗೆ ಕಾಂಗ್ರೆಸ್‌ ಪಕ್ಷದಿಂದ 7 ನಾಯಕರು ಪ್ರಧಾನಿಗಳಾಗಿದ್ದು, ಒಟ್ಟು 54 ವರ್ಷ 123 ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಇಬ್ಬರು ಪ್ರಧಾನಿಯಾಗಿದ್ದು, ಒಟ್ಟು 16 ವರ್ಷ 25 ದಿನಗಳ ಕಾಲ ಇದುವರೆಗೆ ಸೇವೆ ಸಲ್ಲಿಸಿದ್ದಾರೆ. ಜನತಾ ದಳ ಪಕ್ಷದಿಂದ ಮೂವರು ಪ್ರಧಾನಿಗಳಾಗಿದ್ದು ಎರಡು ವರ್ಷ 126 ದಿನಗಳ ಕಾಲ ದೇಶಕ್ಕೆ ಸೇವೆ ನೀಡಿದ್ದಾರೆ. ಜನತಾ ಪಕ್ಷದಿಂದ ಒಬ್ಬರು ಪ್ರಧಾನಿಯಾಗಿ 2 ವರ್ಷ 126 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಮಾಜವಾದಿ ಜನತಾ ಪಕ್ಷದಿಂದ ಒಬ್ಬರು ಪ್ರಧಾನಿಯಾಗಿ 223 ದಿನ ಕಚೇರಿಯಲ್ಲಿದ್ದರು. ಜನತಾ ಪಾರ್ಟಿ (ಸೆಕ್ಯುಲರ್‌) ಪಕ್ಷದಿಂದ 170 ದಿನ ಒಬ್ಬರು ಅಧಿಕಾರದಲ್ಲಿದ್ದರು.

Related Articles

ಇತ್ತೀಚಿನ ಸುದ್ದಿಗಳು