ಕರಾಚಿ ಬಂದರಿನ ಮೇಲೆ ಐಎನ್‌ಎಸ್‌ ವಿಕ್ರಾಂತ್ ದಾಳಿ ; ಬಂದರು ಧ್ವಂಸ

ಭಾರರತೀಯ ನೌಕಾಪಡೆಯ ಐಎನ್‌ಎಸ್‌ ವಿಕ್ರಾಂತ್ ನಡೆಸಿದ ತೀವ್ರ ದಾಳಿಯಲ್ಲಿ ಪಾಕಿಸ್ತಾನದ ಕರಾಚಿ ಬಂದರನ್ನು ಭಾರತ ಸರ್ವನಾಶ ಮಾಡಿದೆ. 1971ರ ನಂತರ ಕರಾಚಿ ಮೇಲೆ ಭಾರತ ದಾಳಿ ಮಾಡಿದ್ದು, ಐಎನ್‌ಎಸ್‌ ವಿಕ್ರಾಂತ್ 10ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಕರಾಚಿ ಬಂದರನ್ನು ಧ್ವಂಸಗೊಳಿಸಿದೆ. 1 ಏರ್‌ ಕ್ರಾಫ್ಟ್‌ಗಳ ಮೂಲಕ ಭಾರತೀಯ ನೌಕಾಪಡೆ ದಾಳಿ ನಡೆಸಿದ್ದು, ಕರಾಚಿ ಬಂದರು ನಾಶವಾಗಿದೆ.

ಭಾರತ ವಾಯು ಸೇನಾಪಡೆ ಪಾಕಿಸ್ತಾನ ಹಲವು ನಗರಗಳಿಗೆ ನುಗ್ಗಿ ಹಲವು ಕಡೆ ದಾಳಿ ನಡೆಸಿದೆ. ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕಿಸ್ತಾನದ ನಗರಗಳ ಮೇಲೆ ದಾಳಿ ನಡೆಸಿದೆ.

ಗುರುವಾರ ರಾತ್ರಿಯಿಂದಲೇ ಎರಡೂ ದೇಶಗಳ ನಡುವೆ ತೀವ್ರ ದಾಳಿ ಪ್ರತಿದಾಳಿ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಿನ್ನೆ ರಾತ್ರಿ ಧರ್ಮಶಾಲಾ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನೂ ಅರ್ಧಕ್ಕೆ ನಿಲ್ಲಿಸಿ ಪ್ರೇಕ್ಷಕರನ್ನು ವಾಪಸ್ ಕಳುಹಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು