Saturday, August 17, 2024

ಸತ್ಯ | ನ್ಯಾಯ |ಧರ್ಮ

ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಕೆ ಯಶಸ್ವಿ ; ನಿಟ್ಟುಸಿರುಬಿಟ್ಟ ಅಧಿಕಾರಿಗಳು

ಸತತ 10 ದಿನಗಳ ಕಾಲ ನಿರಂತರವಾಗಿ ಪೋಲಾಗಿರುವ ತುಂಗಭದ್ರಾ ಜಲಾಶಯದ ನೀರು ಕೊನೆಗೂ ತಂತ್ರಜ್ಞರು ಮತ್ತು ಕಾರ್ಮಿಕರ ಕಠಿಣ ಪರಿಶ್ರಮದ ನಂತರ ಒಂದು ಹಂತಕ್ಕೆ ಯಶಸ್ವಿಯಾಗಿ ನೆರವೇರಿದೆ. ಮೊನ್ನೆ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆಯಲ್ಲಿ ಕೊಂಚ ಮಟ್ಟಿಗೆ ವಿಳಂಬ ತೋರಿದರೂ ಮಾರನೇ ದಿನದ ಕೆಲಸಕ್ಕೆ ಸರಿಯಾಗಿ ಕೆಲಸ ಅಂತ್ಯಗೊಂಡಿತ್ತು.

ಸತತ ಎರಡು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಬದಲಿಗೆ ಇದೀಗ ಸ್ಟಾಪ್​ ಲಾಗ್ ಗೇಟ್ ನ ಮೂರನೇ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ.

ನಿನ್ನೆ ಮೊದಲ ಹಂತದ ಎಲಿಮೆಂಟ್ ಅಳವಡಿಕೆಯಲ್ಲಿ ತಂತ್ರಜ್ಞರು ತುಂಗಭದ್ರಾ ಡ್ಯಾಂನ 19ನೇ ಗೇಟ್ ನಲ್ಲಿ ತೊಡಗಿದ್ದರು. ಅದು ಯಶಸ್ವಿಯಾಗಿದ್ದು, ಇಂದು ಕೂಡ ಮೂರನೇ ಎಲಿಮೆಂಟ್ ಅಳವಡಿಸಿಲು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಸಧ್ಯ ಜಲಾಶಯದಿಂದ ನೀರು ಹರಿಯುವುದನ್ನು ತಡೆಯುವಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರು ಯಶಸ್ವಿಯಾಗಿದ್ದಾರೆ. ಮೂರನೇ ಎಲಿಮೆಂಟ್ ಅಳವಡಿಕೆ ಮೂಲಕ ನೀರು ಹರಿಯುವುದನ್ನು ತಡೆಯಲಾಗಿದೆ.ಜಲಾಶಯದಿಂದ ನೀರು ಹರಿಯುವುದನ್ನು ತಡೆಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಒಟ್ಟಾರೆಯಾಗಿ ಇಂದು ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ 19 ಬದಲಿಗೆ ಸ್ಟಾಪ್​ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದ್ದರಿಂದ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳು ಹೆಚ್ಚಾಗಿ ರೈತರು ನಿಟ್ಟುಸಿರುಬಿಡುವಂತಾಗಿದೆ.

ಗೇಟ್‌ ಅಳವಡಿಕೆ ಯಶಸ್ವಿಯಾದ ಬೆನ್ನಲ್ಲೇ ಜಲಾಶಯದ ಎಲ್ಲಾ 32 ಗೇಟ್‌ಗಳನ್ನು ಸಿಬ್ಬಂದಿ ಬಂದ್ ಮಾಡಿ ನೀರು ಹರಿಯುವುದನ್ನು ನಿಲ್ಲಿಸಿದ್ದಾರೆ.

ಈಗ ಕೇವಲ ಗೇಟ್‌ 19 ರಿಂದ ಅಲ್ಪ ಪ್ರಮಾಣದ ನೀರು ಮಾತ್ರ ಹೊರ ಹೋಗುತ್ತಿದೆ. ಸದ್ಯ 70 ಟಿಎಂಸಿ ನೀರು ಜಲಾಶಯದಲ್ಲಿದೆ. 105 ಟಿಎಂಸಿ ನೀರು ನಿಲ್ಲಿಸಲು ಐದು ಸ್ಟಾಪ್‌ ಗೇಟ್‌ಗಳನ್ನು ಅಳವಡಿಲು ಟಿಬಿ ಬೋರ್ಡ್‌ ಮುಂದಾಗಿದ್ದು ಇಂದು ಅಥವಾ ನಾಳೆ ಸಂಪೂರ್ಣ ಗೇಟ್ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page